Saval TV on YouTube
ಮಂಡ್ಯ(Mandya): ಬಿಜೆಪಿ ಸೇರ್ಪಡೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದು ಮಂಡ್ಯ ಸಂಸದೆ ಮತ್ತು ಹಿರಿಯ ನಟಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿರುವ ಅವರು, ಬಿಜೆಪಿ ಪಕ್ಷದ ವರಿಷ್ಠರು ನನ್ನ ಜೊತೆ ಮಾತನಾಡಿರುವುದು ನಿಜ ಆದರೆ ನಾನು ಈ ಕುರಿತು ತೀರ್ಮಾನ ಮಾಡಿಲ್ಲವೆಂದು ತಿಳಿಸಿದ್ದಾರೆ.
ಹೋದ ಕಡೆಗಳಲ್ಲಿ ನಾನು ಜನರನ್ನು ಕೇಳ್ತಿನಿ ಅಥವಾ ಜನರೇ ನನ್ನ ಕೇಳ್ತಾರೆ. ಆ ಬಗೆಗೆ ಇನ್ನೂ ನಾನು ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯಕ್ಕೆ ಹೀಗೆ ಇರಿ ಎಂದು ಜನರು ಹೇಳ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಅವರಿಗೆ ನಾನು ಬಿಜೆಪಿ ಸೇರಬೇಕು ಎಂಬ ಭಾವನೆ ಇದೆ. ಬಿಜೆಪಿ ವರಿಷ್ಟರೂ ನನ್ನ ಜೊತೆ ಈ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಆದರೆ ನಾನಿನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಎಸ್.ಸಚ್ಚಿದಾನಂದಗೆ ನನ್ನ ಬೆಂಬಲ ಇದೆ. ಇದರಲ್ಲಿ ಯಾವುದೇ ಸೀಕ್ರೆಟ್ ಇಲ್ಲ. ಹೀಗಾಗಿ ಅವರು ಫ್ಲೆಕ್ಸ್’ನಲ್ಲಿ ನನ್ನ ಫೋಟೋ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.