ಮನೆ ಉದ್ಯೋಗ ಕೆಕೆಆರ್ ಟಿಸಿ ನೇಮಕಾತಿಗೆ ಅಧಿಸೂಚನೆ: 10ನೇ ತರಗತಿ ಉತ್ತೀರ್ಣ ಆದವರೂ ಅರ್ಜಿ ಸಲ್ಲಿಸಬಹುದು

ಕೆಕೆಆರ್ ಟಿಸಿ ನೇಮಕಾತಿಗೆ ಅಧಿಸೂಚನೆ: 10ನೇ ತರಗತಿ ಉತ್ತೀರ್ಣ ಆದವರೂ ಅರ್ಜಿ ಸಲ್ಲಿಸಬಹುದು

0

ಬೆಂಗಳೂರು: ಸಾರಿಗೆ ನಿಗಮಗಳ ಪೈಕಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹೊಸದಾಗಿ ನೇಮಕಾತಿ ಮಾಡಿಕೊಳ್ಳುತ್ತಿದೆ. 10ನೇ ತರಗತಿ ಉತ್ತೀರ್ಣ ಆದವರೂ ಸಹ ಸರ್ಕಾರಿ ಹುದ್ದೆ ಪಡೆಯಬಹುದು. ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ಕೆಕೆಆರ್‌ಟಿಸಿ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

Join Our Whatsapp Group

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಟ್ಟು 150 ಬಸ್ ಚಾಲಕ ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಉದ್ಯೋಗದಲ್ಲಿ ಆಸಕ್ತಿ ಇರುವ ಕನಿಷ್ಠ ವಿದ್ಯಾರ್ಹತೆ ಇರುವವರು ಕೂಡ ಈ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 4 ಕೊನೆಯ ದಿನಾಂಕವಾಗಿದೆ. ಮಾಸಿಕ ವೇತನ, ವಯಸ್ಸು ಸೇರಿದಂತೆ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ನೇಮಕಾತಿ ಹುದ್ದೆಗಳು: ಬಸ್ ಚಾಲಕ, ತಾಂತ್ರಿಕ ಸಹಾಯಕ ಬಸ್ ಚಾಲಕ

ಹುದ್ದೆ: 100

ತಾಂತ್ರಿಕ ಸಹಾಯಕ ಹುದ್ದೆ: 50 ಒಟ್ಟು

ಹುದ್ದೆಗಳು: 150

ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್

ಶಿಕ್ಷಣ: ಹತ್ತನೇ ತರಗತಿ ಪಾಸ್ ಕಡ್ಡಾಯ

ಅರ್ಜಿ ಸಲ್ಲಿಕೆ ಕೊನೆ ದಿನ: ಡಿಸೆಂಬರ್ 04

ಪೋಸ್ಟಿಂಗ್ ಸ್ಥಳ: ಬೀದರ್ (ಕಲ್ಯಾಣ ಕರ್ನಾಟಕ)

ಶೈಕ್ಷಣಿಕ ಅರ್ಹತೆ ವಿವರ? ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹುದ್ದೆ ಸೇರಬಯಸುವ ಅಭ್ಯರ್ಥಿಗಳು ಮಾನ್ಯ ಪಡೆದ ಶೈಕ್ಷಣಿಕ ಮಂಡಳಿಯಲ್ಲಿ ಹತ್ತನೇ ತರಗತಿ ಉತ್ತೀರ್ಣ ಆಗಿರಬೇಕು ಎಂದು ಅಧಿಸೂಚನೆ ಹೇಳಿದೆ.

ಅಭ್ಯರ್ಥಿಗಳ ವಯೋಮಿತಿ

 ಈ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳ ಕನಿಷ್ಠ 18 ಹಾಗೂ ಗರಿಷ್ಠ ವಯಸ್ಸು 24 ವರ್ಷವೆಂದು ನಿಗದಿಪಡಿಸಲಾಗಿದೆ. ಜಾತಿ ಮೀಸಲಾತಿ ಆಧಾರದಲ್ಲಿ ತುಸು ವಯೋಮಿತಿಯಲ್ಲಿ ಸಡಿಲಿಕೆ ಸಿಗಬಹದು. ಒಮ್ಮೆ ಅಧಿಸೂಚನೆ ಪರಿಶೀಲಿಸಿಕೊಳ್ಳಿ.

ಆಯ್ಕೆ ವಿಧಾನ ಹೇಗೆ?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ನೇರ ಸಂದರ್ಶನ ನಡೆಸುವ ಮೂಲಕ ನಿಗಮ/ ಸಾರಿಗೆ ಇಲಾಖೆ ಅಧಿಕಾರಿಗಳು ನೇಮಕ ಮಾಡಿಕೊಳ್ಳಲಿದ್ದಾರೆ. ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ ಸಹಿತ, ಬೀದರ್ ನಲ್ಲಿ ಪೋಸ್ಟಿಂಗ್ ನೀಡಲಾಗುತ್ತಿದೆ. ಮಾಸಿಕ ವೇತನ ವಿವರ ಆಯ್ಕೆ ಆಗುವ ಬಸ್ ಚಾಲಕ ಅಭ್ಯರ್ಥಿಗಳಿಗೆ ಮಾಸಿಕವಾಗಿ 16973 ರೂಪಾಯಿವರೆಗೆ ವೇತನ ನೀಡಲಾಗುವುದು. ಕೊನೆ ದಿನಾಂಕವರೆಗೆ ಕಾಯದೇ ಈ ಹುದ್ದೆಗಳಿಗೆ ನೀವು ಕೂಡಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು KKRTC ತಿಳಿಸಿದೆ.

ಅಗತ್ಯ ದಾಖಲೆಗಳ ಸಮೇತವಾಗಿ ಅರ್ಜಿಯನ್ನು ಇಲ್ಲಿನ ‘ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಹಳೇ ಬಸ್‌ ನಿಲ್ದಾಣ, ಬೀದರ್ ವಿಭಾಗೀಯ ಕಚೇರಿಗೆ ಸಲ್ಲಿಸಬೇಕು. ಇಲ್ಲಿಯೇ ನೇರ ಸಂದರ್ಶನ ನಡೆಯಲಿದೆ ಎಂದು ತಿಳಿಸಲಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು, ಷರತ್ತುಗಳು ಹಾಗೂ ಪ್ರಮುಖ ಅಂಶಗಳನ್ನು ನಿಗಮವು ಈ ಸರ್ಕಾರದ ವೆಬ್‌ಸೈಟ್ www.bidar.nic.in ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಪರಿಶೀಲಿಸಿಕೊಳ್ಳಬೇಕು.