ಮನೆ ರಾಜಕೀಯ ಕರ್ನಾಟಕ ರಾಜ್ಯ ಭಯೋತ್ಪಾದಕರ ಅಡ್ಡೆಯಾಗಿದೆ: ಜೆ.ಪಿ ನಡ್ಡಾ ಆರೋಪ

ಕರ್ನಾಟಕ ರಾಜ್ಯ ಭಯೋತ್ಪಾದಕರ ಅಡ್ಡೆಯಾಗಿದೆ: ಜೆ.ಪಿ ನಡ್ಡಾ ಆರೋಪ

0

ಬೆಳಗಾವಿ: ಕರ್ನಾಟಕ ರಾಜ್ಯವು ಭಯೋತ್ಪಾದಕರ ಅಡ್ಡೆಯಾಗಿದೆ ಎಂದು ಬಿಜೆಪಿ ಅದ್ಯಕ್ಷ ಜೆ.ಪಿ ನಡ್ಡಾ ನೇರ ಆರೋಪ ಮಾಡಿದರು.

ಚಿಕ್ಕೋಡಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಡ್ಡಾ, ಕರ್ನಾಟಕದ ಶಕ್ತಿ ಕೇಂದ್ರದಲ್ಲಿ ಬಾಂಬ್ ದಾಳಿ ಮಾಡಲು ಸಂಚು ರೂಪಿಸುವ ಭಯೋತ್ಪಾದಕರಿಗೆ ಕಾಂಗ್ರೆಸ್ ಸರಕಾರ ಆಶ್ರಯ ನೀಡುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆದರು.

ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೌನ ವಹಿಸಿರುವ ಉದ್ದೇಶ ಏನು ಸ್ಪಷ್ಟಪಡಿಸಬೇಕು. ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಸರಕಾರವು ಪಿಎಫ್ಐ ಬ್ಯಾನ್ ಮಾಡಿದೆ. ಆದರೆ ಕಾಂಗ್ರೆಸ್ ಸರಕಾರ ಪಿಎಫ್ಐ ಮೇಲಿನ ಕೇಸ್ ವಾಪಸ್ ಪಡೆಯುತ್ತಿದೆ. ಕಾಂಗ್ರೆಸ್ ಮುಖಂಡರಿಗೆ ಭಾರತದ ಮೇಲೆ ಪ್ರೀತಿ ಇದ್ದರೆ ಪಾಕಿಸ್ತಾನ ಜೈ ಎಂದವರ ಮೇಲೆ ಸೂಕ್ತ ಕ್ರಮ ಜರುಗಿಸಲಿ ಎಂದು ನಡ್ಡಾ ಸವಾಲು ಹಾಕಿದರು.

ಹಿಂದಿನ ಲೇಖನಜಿಲ್ಲಾಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ: ಬರನಿರ್ವಹಣೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆ
ಮುಂದಿನ ಲೇಖನಡಿಸಿಎಂ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್