ಮನೆ ಉದ್ಯೋಗ ಭಾರತ ಮಿಲಿಟರಿಯಲ್ಲಿ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ

ಭಾರತ ಮಿಲಿಟರಿಯಲ್ಲಿ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ

0

ಭಾರತ ಮಿಲಿಟರಿಯ ಹೆಡ್’ಕ್ವಾಟ್ರಸ್ 22, ಮೂವ್ಮೆಂಟ್ ಕಂಟ್ರೋಲ್ ಗ್ರೂಪ್ ನಲ್ಲಿ ಅಗತ್ಯ ಇರುವ ಮಲ್ಟಿ ಟಾಸ್ಕಿಂಗ್ ಸ್ಟಾಫ್, ಮೆಸ್ ವೇಟರ್, ಬಾರ್ಬರ್, ಕುಕ್ ಮತ್ತು ಇತರೆ ಕೆಲವು ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.

ನೇಮಕಾತಿ ಪ್ರಾಧಿಕಾರ : ಭಾರತ ರಕ್ಷಣಾ ಇಲಾಖೆ

ಹುದ್ದೆಗಳ ಹೆಸರು : ಗ್ರೂಪ್ ಸಿ ವಿವಿಧ ಹುದ್ದೆಗಳು ( ಎಂಟಿಎಸ್, ಮೆಸ್ ವೇಟರ್, ಬಾರ್ಬರ್, ಕುಕ್ ಮತ್ತು ಇತರೆ ಕೆಲವು)

ಒಟ್ಟು ಹುದ್ದೆಗಳ ಸಂಖ್ಯೆ : 135

ಹುದ್ದೆಗಳ ವಿವರ

ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಸಫಾಯಿವಾಲ): 28

ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಮೆಸೇಂಜರ್): 03

ಮೆಸ್ ವೇಟರ್ : 22

ಬಾರ್ಬರ್ : 09

ವಾಶರ್ ಮ್ಯಾನ್ : 11

ಮಾಸಾಲ್ಚಿ : 11

ಕುಕ್’ಗಳು : 51

ವಿದ್ಯಾರ್ಹತೆ : ಎಸ್’ಎಸ್’ಎಲ್’ಸಿ / 10ನೇ ತರಗತಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು. ಕುಕ್ ಹುದ್ದೆಗೆ ಭಾರತೀಯ ಆಹಾರ ಪದ್ಧತಿಯ ಅರಿವು ಇರಬೇಕು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಪ್ರಾಕ್ಟಿಕಲ್ ಟೆಸ್ಟ್, ಟ್ರೇಡ್ ಟೆಸ್ಟ್ ಇರುತ್ತದೆ.

ಹುದ್ದೆವಾರು ವೇತನ ಶ್ರೇಣಿ ರೂ.ಗಳಲ್ಲಿ

ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಸಫಾಯಿವಾಲ): Rs.18000-56900.

ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಮೆಸೇಂಜರ್): Rs.18000-56900.

ಮೆಸ್ ವೇಟರ್ : Rs.18000-56900.

ಬಾರ್ಬರ್ : Rs.18000-56900.

ವಾಶರ್ ಮ್ಯಾನ್ : Rs.18000-56900.

ಮಾಸಾಲ್ಚಿ : Rs.18000-56900.

ಕುಕ್ಸ್ : Rs.19900-63200.

ವಯೋಮಿತಿ ಅರ್ಹತೆಗಳು

ಅರ್ಜಿ ಸಲ್ಲಿಸಲು ಬಯಸುವವರು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದ್ದು, ಒಬಿಸಿ ಅಭ್ಯರ್ಥಿಗಳಿಗೆ 3ವರ್ಷ, ಎಸ್’ಸಿ / ಎಸ್’ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03-03-2023

ಅರ್ಜಿ ಸಲ್ಲಿಸುವ ವಿಧಾನ

ಕೆಳಗೆ ನೀಡಲಾದ ಅಧಿಸೂಚನೆ ಲಿಂಕ್ ಕ್ಲಿಕ್ ಮಾಡಿ. ಅದರಲ್ಲಿ ನೀಡಲಾದ ಅರ್ಜಿ ನಮೂನೆಯನ್ನು ಪ್ರಿಂಟ್ ತೆಗೆದುಕೊಂಡು, ಇಂಗ್ಲಿಷ್ನಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿಕೊಂಡು, ಆಧಾರ್ ಕಾರ್ಡ್, ಎಸ್ಎಸ್ಎಲ್ಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರಗಳ ಜೆರಾಕ್ಸ್ ಕಾಪಿಗಳನ್ನು ಸೆಲ್ಫ್ ಅಟೆಸ್ಟ್ ಮಾಡಿ, 6 ಪಾಸ್’ಪೋರ್ಟ್ ಅಳತೆಯ ಭಾವಚಿತ್ರ, ಎರಡು ವಾಸಸ್ಥಳ ಕಾಪಿಗಳಿಗೆ ರೂ.25ರ ಅಂಚೆ ಚೀಟಿ ಅಂಟಿಸಿ ಕೆಳಗಿನ ವಿಳಾಸಕ್ಕೆ ನಿಗಧಿತ ದಿನಾಂಕದೊಳಗೆ ಅಂಚೆ ಮೂಲಕ ಕಳುಹಿಸುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ : Commmander, HQ 22 Movement Control Group, PIN-900328, c/o 99 APO.

ಅರ್ಜಿ ಯಾವ ಹುದ್ದೆಗೆ ಎಂದು ಅಂಚೆ ಲಕೋಟೆಯ ಮೇಲೆ ಬರೆದಿರಬೇಕು.