ಮನೆ ಸುದ್ದಿ ಜಾಲ ಸೆಲ್ಫಿ ಕ್ರೇಜ್: ಹೊಗೇನಕಲ್ ಜಲಪಾತದಲ್ಲಿ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸಾವು

ಸೆಲ್ಫಿ ಕ್ರೇಜ್: ಹೊಗೇನಕಲ್ ಜಲಪಾತದಲ್ಲಿ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸಾವು

0

ಚಾಮರಾಜನಗರ: ಹೊಗೇನಕಲ್ ಜಲಪಾತದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು, ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.

ಮೈಸೂರು ಮೂಲದ ಉಮಾಶಂಕರ್ (19) ನರ್ಸಿಂಗ್ ವಿದ್ಯಾರ್ಥಿ ಮೃತ ದುರ್ದೈವಿ. ಇಂದು ಸ್ನೇಹಿತರೊಂದಿಗೆ ರಜೆಯ ಮಜಾ ಅನುಭವಿಸಲು ಹೊಗೇನಕಲ್ ಜಲಪಾತಕ್ಕೆ ತೆರಳಿದ್ದ ವೇಳೆ ನೀರು ಧುಮ್ಮಿಕ್ಕುವ ಸ್ಥಳದ ತುದಿಯಲ್ಲಿ ನಿಂತುಕೊಂಡು ಸೆಲ್ಳಿ ತೆಗೆದುಕೊಳ್ಳುವಾಗ ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Advertisement
Google search engine

ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

ಹಿಂದಿನ ಲೇಖನದಕ್ಷಿಣ ರಾಜ್ಯಗಳ ರೈತ ಮುಖಂಡರಿಂದ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಭೇಟಿ
ಮುಂದಿನ ಲೇಖನಮಾರುಕಟ್ಟೆಯಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ ಮಾರಾಟಕ್ಕೆ ಷರತ್ತುಗಳೊಂದಿಗೆ ಡಿಸಿಜಿಐ ಅನುಮತಿ