ಅಮೃತಸರ : ಪಂಜಾಬ್ ನ ಅಮೃತಸರದ ಸಾಥಿಯಾಲ ಗ್ರಾಮದಲ್ಲಿ ಬುಧವಾರ ಬೆಳಗ್ಗೆ 11ಗಂಟೆಯ ವೇಳೆ ನಡೆದ ಗ್ಯಾಂಗ್ ವಾರ್ನಲ್ಲಿ ಕುಖ್ಯಾತ ಗ್ಯಾಂಗ್ ಸ್ಟರ್ ಜರ್ನೈಲ್ ಸಿಂಗ್ ನನ್ನು ಹತ್ಯೆ ಮಾಡಲಾಗಿದೆ.
ಜರ್ನೈಲ್ ಸಿಂಗ್ ಅವರ ಎದುರಾಳಿ ಗ್ಯಾಂಗ್ ನ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಎಸ್ ಎಸ್ ಪಿ ತಿಳಿಸಿದ್ದಾರೆ.
ಈ ವೇಳೆ ಸಿಸಿಟಿವಿ ದೃಶ್ಯಾವಳಿಗಳು ಕೂಡ ಬೆಳಕಿಗೆ ಬಂದಿದ್ದು, ಅದರ ಆಧಾರದ ಮೇಲೆ ಹೆಚ್ಚಿನ ತನಿಖೆ ಆರಂಭಿಸಲಾಗಿದೆ. ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಂಡಿರುವ ಪೊಲೀಸರು ಉನ್ನತ ಮಟ್ಟದ ತನಿಖೆ ಆರಂಭಿಸಿದ್ದಾರೆ.
ದಾಳಿಕೋರರು ದರೋಡೆಕೋರ ಜರ್ನೈಲ್ ಸಿಂಗ್ ಮೇಲೆ ಸುಮಾರು 24 ಗುಂಡುಗಳನ್ನು ಹಾರಿಸಿದ್ದಾರೆ. ಜರ್ನೈಲ್ ಸಿಂಗ್ ಗೋಪಿ ಘನಶ್ಯಾಂಪುರಿಯಾ ಗ್ಯಾಂಗ್ ನ ಸದಸ್ಯ ಎಂದು ಹೇಳಲಾಗಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ 4 ಮಂದಿ ದಾಳಿಕೋರರು ಕೃತ್ಯ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸುಮಾರು 15 ನಿಮಿಷಗಳ ಕಾಲ ಗುಂಡು ಹಾರಿಸಿ ಜರ್ನೈಲ್ ಸಿಂಗ್ ಅವರನ್ನು ಹತ್ಯೆಗೈಯಲಾಗಿದೆ.
ಪಂಜಾಬ್ ನ ಆಂಟಿ ಗ್ಯಾಂಗ್ ಸ್ಟರ್ ಟಾಸ್ಕ್ ಫೋರ್ಸ್ ಎರಡು ದಿನಗಳ ಹಿಂದೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ 4 ಶೂಟರ್ಗಳನ್ನು ಬಂಧಿಸಿತ್ತು. ಅವರು ಎಲ್ಲೋ ದಾಳಿ ಮಾಡಲು ತಯಾರಿ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದರು.ಆರೋಪಿಗಳಿಂದ 26 ಜೀವಂತ ಕಾಟ್ರಿಡ್ಜ್ ಗಳು ಸೇರಿದಂತೆ 6 ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.














