ಮನೆ ದೇವರನಾಮ ಕಾಯೋ ಎನ್ನ ಶುಭಕಾಯ ಭಜಿಸುವೆನೋ

ಕಾಯೋ ಎನ್ನ ಶುಭಕಾಯ ಭಜಿಸುವೆನೋ

0

ಕಾಯೋ ಎನ್ನ ಶುಭಕಾಯ ಭಜಿಸುವೆನೋ..

ರಾಘವೇಂದ್ರಾ…ಯತಿರಾಜಾ…

ಗುರುಾಜಾ…ಯತಿರಾಜಾ…

ಕಾಯೋ ಎನ್ನ ಶುಭಕಾಯ ಭಜಿಸುವೆನು ||2||

ಮಾಯ ತನಕೆ ಚಂದ್ರಾ ಶ್ರೀ ಗುರು ರಾಯ ರಾಘವೇಂದ್ರ

ಭೋ ಯತಿ ವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ ||ಭೋ||

ಕಂಡ ಕಂಡ ಕಡೆಗೇ ,ತಿರುಗಿ ಬೆಂಡಾದೆನು ಕೊನೆಗೇ… ||

ಕಂಡ ಕಂಡವರನು ಕೊಂಡಾಡುತ ನಿಮ್ಮ || 2 ||

ಕಂಡೆ ಕಟ್ಟ ಕಡೆಗೇ ಶ್ರೀ ಗುರು ರಾಯ ರಾಘವೇಂದ್ರ ||

ಭೋ ಯತಿ ವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ ||

ನಿಯಮವು ಎನಗೆಲ್ಲೀ ಇರುವುದು ಆ ಕಾಮಾಧಮನಲ್ಲಿ |

ಭೋ ಮಹಾಮಹಿಮನೆ ಪಾಮರ ನಾ ನಿಮ್ಮ |

ನಾಮ ಒಂದೇ ಬಲ್ಲೆ ಶ್ರೀ ಗುರು ರಾಯ ರಾಘವೇಂದ್ರ |

ಭೋ ಮಹಾ ಮಹಿಮನೆ ಪಾಮರ ನಾ ನಿಮ್ಮ |

ನಾಮ ಒಂದೇ ಬಲ್ಲೇ ಶ್ರೀ ಗುರು ರಾಯ ರಾಘವೇಂದ್ರ ||

ಭೋ ಯತಿ ವರದೇಂದ್ರ

ಶ್ರೀ ಗುರು ರಾಯ ರಾಘವೇಂದ್ರ ||ಭೋ||

ಮಂತ್ರವ ನಾನರಿಯೇ ಶ್ರೀ ಮನ್ ಮಂತ್ರಾಲಯ ದೊರೆಯೇ |

ಅಂತರಂಗದೊಳು ನಿಂತು ಪ್ರೇರಿಸುವ |

ಅನಂತ್ರಾಧೀಶನರಿಯೆ ಶ್ರೀ ಗುರು ರಾಯ ರಾಘವೇಂದ್ರ

ಭೋ ಯತಿ ವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ ||

||ಕಾಯೋ||

ಹಿಂದಿನ ಲೇಖನಗುಂಡು ಹಾರಿಸಿ ಕುಖ್ಯಾತ ಗ್ಯಾಂಗ್‌ ಸ್ಟರ್ ಜರ್ನೈಲ್ ಸಿಂಗ್ ಹತ್ಯೆಗೈದ ಮುಸುಕುಧಾರಿಗಳು
ಮುಂದಿನ ಲೇಖನಗೋರಕ್ಷಾಸನ