ಮನೆ ರಾಜ್ಯ ಪಂಚಾಯಿತಿಗಳು, ಅನುಷ್ಠಾನ ಇಲಾಖೆಗಳಿಗೆ ನರೇಗಾ ಪ್ರಶಸ್ತಿ ಘೋಷಣೆ

ಪಂಚಾಯಿತಿಗಳು, ಅನುಷ್ಠಾನ ಇಲಾಖೆಗಳಿಗೆ ನರೇಗಾ ಪ್ರಶಸ್ತಿ ಘೋಷಣೆ

0

ಬೆಂಗಳೂರು: ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಠಾನದಲ್ಲಿ 2023-24ನೆ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪಂಚಾಯತಿಗಳು ಮತ್ತು ಅನುಷ್ಠಾನ ಇಲಾಖೆಗಳಿಗೆ ನರೇಗಾ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.

Join Our Whatsapp Group

ಅತ್ಯುತ್ತಮ ಜಿಲ್ಲಾ ಪಂಚಾಯತ್‌ ಪುರಸ್ಕಾರಕ್ಕೆ, ಬೆಂಗಳೂರು ವಿಭಾಗೀಯ– ದಾವಣಗೆರೆ ಜಿಲ್ಲಾ ಪಂಚಾಯಿತಿ, ಬೆಳಗಾವಿ ವಿಭಾಗೀಯ– ಬಾಗಲಕೋಟೆ ಜಿಲ್ಲಾ ಪಂಚಾಯಿತಿ, ಕಲಬುರಗಿ ವಿಭಾಗೀಯ– ಬಳ್ಳಾರಿ ಜಿಲ್ಲಾ ಪಂಚಾಯಿತಿ ಹಾಗೂ ಮೈಸೂರು ವಿಭಾಗೀಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಆಯ್ಕೆಯಾಗಿದೆ.