ಚೆನ್ನೈ ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ (ಎನ್‌ಎಸ್‌ಇ) ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ಅವರ ಸಲಹೆಗಾರರಾಗಿದ್ದ ಆನಂದ್ ಸುಬ್ರಮಣಿಯನ್ ಅವರನ್ನು ಸಿಬಿಐ ಗುರುವಾರ ರಾತ್ರಿ ಬಂಧಿಸಿದೆ.
ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ (ಎನ್‌ಎಸ್‌ಇ) ಹಗರಣದ ಸಂಬಂಧ ಎನ್‌ಎಸ್‌ಇನ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆಗಿದ್ದ ಆನಂದ್ ಸುಬ್ರಮಣಿಯನ್ ಅವರನ್ನು ಬಂಧಿಸಲಾಗಿದೆ.ಸುಬ್ರಮಣಿಯನ್ ಅವರು 2013ರ ಏಪ್ರಿಲ್ 1 ರಿಂದ ಮುಖ್ಯ ಕಾರ್ಯತಂತ್ರ ಸಲಹೆಗಾರರಾಗಿದ್ದರು. ನಂತರ 2015ರ ಏಪ್ರಿಲ್ 1 ರಿಂದ ಅಕ್ಟೋಬರ್ 21, 2016 ರವರೆಗೆ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಚಿತ್ರಾ ರಾಮಕೃಷ್ಣ ಅವರಿಗೆಸಲಹೆಗಾರರಾಗಿ ಮರು ನೇಮಕಗೊಂಡಿದ್ದರು.
ಸಿಬಿಐ ಇತ್ತೀಚೆಗೆ ಚಿತ್ರಾ ರಾಮಕೃಷ್ಣ, ಆನಂದ್ ಸುಬ್ರಮಣಿಯನ್ ಮತ್ತು ರವಿ ನಾರಾಯಣ್ ಅವರ ವಿಚಾರಣೆ ಆರಂಭಿಸಿತ್ತು. 2018 ರ ಪ್ರಕರಣದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಎಸ್‌ಎಸ್‌ಇ ಮತ್ತು ಸೆಬಿಯ ಅಪರಿಚಿತ ಅಧಿಕಾರಿಗಳು ಎಸ್‌ಎಸ್‌ಇಯ ಸರ್ವರ್ ಆರ್ಕಿಟೆಕ್ಚರ್‌ಗೆ ಆದ್ಯತೆಯ ಪ್ರವೇಶ ಪಡೆದಿದ್ದಲ್ಲದೆ, ಕೊಲೊಕೇಶನ್ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಹೊಸ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇವರು ಎಲ್ಲರನ್ನೂ ಮುಂಬೈ ಮತ್ತು ದೆಹಲಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.