ಮನೆ ಸುದ್ದಿ ಜಾಲ ಎನ್ ಟಿಎಂ ಶಾಲೆ ಸ್ಥಳಾಂತರ: ಪೀಠೋಪಕರಣ ವಾಹನಕ್ಕೆ ಅಡ್ಡ ಮಲಗಿ ಪ್ರತಿಭಟನೆ

ಎನ್ ಟಿಎಂ ಶಾಲೆ ಸ್ಥಳಾಂತರ: ಪೀಠೋಪಕರಣ ವಾಹನಕ್ಕೆ ಅಡ್ಡ ಮಲಗಿ ಪ್ರತಿಭಟನೆ

0

ಮೈಸೂರು: ಎನ್ ಟಿಎಂ ಶಾಲೆಯನ್ನು ಜೂನಿಯರ್ ಮಹಾರಾಣಿ ಶಾಲೆಗೆ ಸ್ಥಳಾಂತರ ಮಾಡಲಾಗಿದ್ದು,  ಪೀಠೋಕರಣ ಸ್ಥಳಾಂತರ ಮಾಡುತ್ತಿರುವ ವಾಹನಕ್ಕೆ ಅಡ್ಡ ಮಲಗಿ ಕನ್ನಡಪರ ಹೋರಾಟಗಾರ ಸಾ ರಾ ಸುದರ್ಶನ್ ಪ್ರತಿಭಟನೆ ನಡೆಸಿದರು.

ವಿವೇಕ ಸ್ಮಾರಕ ನಿರ್ಮಾಣ ವಿರೋಧಿಸಿ ಹಾಗೂ ಎನ್ ಟಿಎಂ ಶಾಲೆಯ ಉಳಿವಿಗಾಗಿ ವಿವಿಧ ಸಂಘಟನೆಗಳು ನಿರಂತರ ಹೋರಾಟ ಮಾಡಿದ್ದವು.  ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾರದ್ಯ ನೇತೃತ್ವದಲ್ಲಿ ಎನ್ ಟಿ ಎಂ ಶಾಲಾ ಕಟ್ಟಡ ಎದುರಿನ ಜೂನಿಯರ್ ಮಹಾರಾಣಿ ಶಾಲೆಗೆ ಸ್ಥಳಾಂತರ ಮಾಡಲಾಗಿದೆ. ಪೀಠೋಪಕರಣ ಸ್ಥಳಾಂತರಿಸಲಾಯಿತು. ನಾಳೆಯಿಂದ ಜೂನಿಯರ್ ಮಹಾರಾಣಿ ಕಾಲೇಜಿನಲ್ಲಿ ಮಕ್ಕಳಿಗೆ ಪಾಠ  ನಡೆಯಲಿದೆ.

ಇನ್ನು ಎನ್ ಟಿ ಎಂ ಶಾಲೆಯ ಸ್ಥಳಾಂತರಕ್ಕೆ ಕನ್ನಡಪರ ಹೋರಾಟಗಾರ ಸಾ ರಾ ಸುದರ್ಶನ್ ಅಡ್ಡಿಪಡಿಸಿ, ಶಿಕ್ಷಣ ಇಲಾಖೆಯ ಅದೇಶ ಖಂಡಿಸಿ ಶವಾಸನ ಸತ್ಯಾಗ್ರಹ ನಡೆಸಿದರು. ರಾಜಿಗೆ ಕರೆದು ಈ ರೀತಿ ಮಾಡಿದ್ದಾರೆ. ಸರ್ಕಾರದ ಅದೇಶ ಏನೇ ಮಾಡಿದ್ರು ನಮ್ಮ ಹೆಣಗಳ ಮೇಲೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಹಿತಕರ ಘಟನೆ ಆಗದಂತೆ  ಶಾಲೆಯ ಮುಂಭಾಗದ ನಾರಾಯಣ ಶಾಸ್ತ್ರಿ ರಸ್ತೆ ಬಂದ್ ಮಾಡಲಾಗಿದ್ದು, ಸಂಚಾರ ನಡೆಸದಂತೆ ಪೊಲೀಸರಿಂದ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.