ಮನೆ ಸ್ಥಳೀಯ ಬೈಕ್ ಏರಿ ಮತದಾನ ಜಾಗೃತಿ ಮೂಡಿಸಿದ ಅಧಿಕಾರಿಗಳು

ಬೈಕ್ ಏರಿ ಮತದಾನ ಜಾಗೃತಿ ಮೂಡಿಸಿದ ಅಧಿಕಾರಿಗಳು

0

ಮೈಸೂರು: ಲೋಕ ಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ‌ ಮಂಗಳವಾರ ನಂಜನಗೂಡು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಅಧಿಕಾರಿಗಳು ಬೈಕ್‌ ಜಾಥಾ ಮೂಲಕ ಕಡ್ಡಾಯ ‌ಮತದಾನದ‌ ಅರಿವು ಮೂಡಿಸಿದರು.

Join Our Whatsapp Group

ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಜಗನಾಥ್ ಮೂರ್ತಿ ಅವರು ಮಾತನಾಡಿ, ಶಕ್ತಿಯುತವಾದ ಹಾಗೂ ಹೆಚ್ಚು ಪರಿಣಾಮಕಾರಿಯಾದ ಮತದಾನವನ್ನು ಕಡ್ಡಾಯವಾಗಿ ಮಾಡಬೇಕು, ಮತ ಚಲಾಯಿಸುವುದು. ಸಂವಿಧಾನದ ಹಕ್ಕಾಗಿದ್ದು 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಯು‌ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂದರು.

    ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ‌ಪಂಚಾಯಿತಿ ಸಿಬ್ಬಂದಿಗಳು ಮತದಾನ ಘೋಷವಾಕ್ಯಗಳ ಫಲಕ‌ ಹಿಡಿದು ದ್ವಿಚಕ್ರ ವಾಹನ‌ ಏರಿ‌ ತಾಲ್ಲೂಕು ಪಂಚಾಯಿತಿಯಿಂದ ಅಂಬೇಡ್ಕರ್ ವೃತ್ತ,  ಶ್ರೀಕಂಠೇಶ್ವರ ದೇವಸ್ತಾನ, ಎಂ.ಜಿ.ರಸ್ತೆ, ಮಾರುಕಟ್ಟೆ ರಸ್ತೆ, ದೇವಿರಮ್ಮನಹಳ್ಳಿ ಗೇಟ್ ಸರ್ಕಲ್‌  ಸೇರಿದಂತೆ ನಗರದ ಪ್ರಮು‌ಖ ರಸ್ತೆಗಳಲ್ಲಿ‌ ಸಾಗಿ  ಏಪ್ರಿಲ್ 26 ರಂದು ತಪ್ಪದೇ ಮತ ಚಲಾಯಿಸುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ‌ ಕಾರ್ಯನಿರ್ವಾಹಕ ಅಧಿಕಾರಿ‌ ಪೂರ್ಣಿಮಾ, ಸಹಾಯಕ ನಿರ್ದೇಶಕರಾದ ಶಿವಕುಮಾರ್    ತಾಲ್ಲೂಕು ಹಾಗೂ ಗ್ರಾಮ ಪಂಚಾಯಿ ಸಿಬ್ಬಂದಿಗಳು ಹಾಜರಿದ್ದರು.