ಮನೆ ರಾಜ್ಯ ದೂರದರ್ಶನ ನೇರ ಪ್ರಸಾರ ಕಾರ್ಯಕ್ರಮದ ವೇಳೆ ಕೃಷಿ ವಿವಿ ನಿರ್ದೇಶಕ ಸಾವು

ದೂರದರ್ಶನ ನೇರ ಪ್ರಸಾರ ಕಾರ್ಯಕ್ರಮದ ವೇಳೆ ಕೃಷಿ ವಿವಿ ನಿರ್ದೇಶಕ ಸಾವು

0

ತಿರುವನಂತಪುರಂ: ದೂರದರ್ಶನ ನೇರ ಪ್ರಸಾರ ಕಾರ್ಯಕ್ರಮದ ವೇಳೆ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಅನಿ. ಎಸ್. ದಾಸ್ (59) ಅವರು ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಶುಕ್ರವಾರ ಕೇರಳದ ತಿರುವನಂತಪುರಂನಲ್ಲಿರುವ ದೂರದರ್ಶನ ವಾಹಿನಿಯಲ್ಲಿ ಕೃಷಿ ದರ್ಶನ ಕಾರ್ಯಕ್ರಮದ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಘಟನೆ ನಡೆದ ಕೂಡಲೇ ಅವರನ್ನು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ದಾಸ್ ಅವರು ಕೇರಳ ಫೀಡ್ಸ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು ಮತ್ತು ಕೇರಳ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂವಹನ ಕೇಂದ್ರದ ಮುಖ್ಯಸ್ಥರಾಗಿದ್ದರು.

ಹಿಂದಿನ ಲೇಖನಕಾಂಗ್ರೆಸ್ ನವರಿಗೆ ಸದ್ಬುದ್ದಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
ಮುಂದಿನ ಲೇಖನಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮಹಾ ದ್ರೋಹ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ