ಮನೆ ರಾಜ್ಯ 200 ಜನರನ್ನು ಕೆಲಸದಿಂದ ತೆಗೆದ ಓಲಾ ಕ್ಯಾಬ್ಸ್​​​ ಸಂಸ್ಥೆ: ಸೂಕ್ತ ಪರಿಹಾರ ನೀಡುವಂತೆ ಸುರೇಶ್​​ ಕುಮಾರ್...

200 ಜನರನ್ನು ಕೆಲಸದಿಂದ ತೆಗೆದ ಓಲಾ ಕ್ಯಾಬ್ಸ್​​​ ಸಂಸ್ಥೆ: ಸೂಕ್ತ ಪರಿಹಾರ ನೀಡುವಂತೆ ಸುರೇಶ್​​ ಕುಮಾರ್ ಆಗ್ರಹ

0

ಬೆಂಗಳೂರು: ಕಾರ್ಮಿಕರ ದಿನಾಚರಣೆ ದಿನದಂದು ಕೋರಮಂಗಲದಲ್ಲಿರುವ ಓಲಾ ಕ್ಯಾಬ್ಸ್ ಸಂಸ್ಥೆಯಲ್ಲಿ 200 ಜನರನ್ನು ಕೆಲಸದಿಂದ ತೆಗೆದು ಹಾಕುವ ಮೂಲಕ ಆಘಾತ ಉಂಟುಮಾಡಿದೆ. ಹೀಗಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ​​ಗೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದು, 200 ಜನರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಅಥವಾ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಶಾಸಕ ಸುರೇಶ್ ಕುಮಾರ್ ಆಗ್ರಹ ಮಾಡಿದ್ದಾರೆ.

Join Our Whatsapp Group

ಶಾಸಕ ಸುರೇಶ್ ಕುಮಾರ್​ ಬರೆದ ಪತ್ರದಲ್ಲೇನಿದೆ?

ಭಾರತವೂ ಸೇರಿದಂತೆ ವಿಶ್ವದಾದ್ಯಂತ ಮೇ 1 ರಂದು “ಕಾರ್ಮಿಕ ದಿನಾಚರಣೆ” ಯನ್ನಾಗಿ ಆಚರಿಸುತ್ತಾರೆ. ಕಾರ್ಮಿಕರ ಒಳತಿಗೋಸ್ಕರ ಕಾರ್ಮಿಕರ ಕಲ್ಯಾಣವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರಲ್ಲಿ ಆತ್ಮವಿಶ್ವಾಸ ತುಂಬಿಸುವ ಉದ್ದೇಶದಿಂದ ರೂಪಿಸಿರುವ ಕಾರ್ಯಕ್ರಮವಿದು. ಬೆಂಗಳೂರಿನಲ್ಲಿ ಒಂದು ಖಾಸಗಿ ಸಂಸ್ಥೆ ಮೇ ದಿನಾಚರಣೆಗೆ ತನ್ನ ಸಂಸ್ಥೆಯ ಸಿಬ್ಬಂದಿಗೆ ಮರೆಯಲಾಗದ “ಮೇ ಡೇ” ಕೊಡುಗೆಯನ್ನು ನೀಡಿ, ಅಘಾತ ಉಂಟು ಮಾಡಿದೆ.

ಈ ಸಂಸ್ಥೆಯಲ್ಲಿ ಮೇ ದಿನಾಚರಣೆಗೆ ಎರಡು ದಿನಗಳ ಹಿಂದೆ ಏನು ಕಾರಣ ಇಲ್ಲದೆ ಸುಮಾರು 200 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಕಾರ್ಮಿಕ ಕಾಯ್ದೆಯ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ, ಸಂಸ್ಥೆ ತೆಗೆದುಕೊಂಡಿರುವ ಈ ಕ್ರಮ ಯಾವುದೇ ಕಾರಣದಿಂದಲೂ ಸಹನೀಯವಲ್ಲ. ಯಾವುದೇ ತಪ್ಪು ಇಲ್ಲದೆ ಬೀದಿಗೆ ಬಿದ್ದಿರುವ ಈ ಇನ್ನೂರು ಕುಟುಂಬಗಳ ನೆರವಿಗೆ ಸರ್ಕಾರ ಧಾವಿಸಬೇಕಾಗಿದೆ.

ಈ 200 ವ್ಯಕ್ತಿಗಳನ್ನು ಕೆಲಸಕ್ಕೆ ಮತ್ತೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ, ಸೂಕ್ತ ಪರಿಹಾರ ಧನವನ್ನು ಕೊಟ್ಟು ಇಷ್ಟು ವರ್ಷ ಕೆಲಸ ಮಾಡಿದ ಕಾರ್ಮಿಕರಿಗೆ ಸೂಕ್ತ ಗೌರವದಿಂದ ವಿದಾಯ ನೀಡುವಂತೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳಲಾಗಿದೆ.

ಇದೇ ರೀತಿಯ ಕಾರ್ಯ ವಿರೋಧಿ ಪ್ರಕರಣಗಳು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ತೀರಾ ಹೆಚ್ಚಾಗುತ್ತಿದೆ. ಸರ್ಕಾರದ ಗಮನಕ್ಕೆ ಬಂದ ತಕ್ಷಣ ಕಾರ್ಮಿಕರಿಗೆ ರಕ್ಷಣೆ ಕೊಡುವ ಕಾರ್ಯ ಮಾಡಬೇಕು ಎಂದು ಹೇಳಿದ್ದಾರೆ.

ಹಿಂದಿನ ಲೇಖನವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು
ಮುಂದಿನ ಲೇಖನನೀತಿ ಸಂಹಿತೆ ಉಲ್ಲಂಘನೆ: ಶಾಸಕ ಕಾಗೆಗೆ ಚುನಾವಣೆ ಆಯೋಗ ನೋಟಿಸ್‌