ಕೆ.ಆರ್.ಪೇಟೆ: ರೈತರೊಬ್ಬರು ತಮ್ಮ ಹಿಡುವಳಿ ಜಮೀನಿನಲ್ಲಿ ಹಾಕಲಾಗಿದ್ದ, ಅಡಕ್ಕೆ ಸಸಿ, ತೊಂಡೆ ಬೆಳೆಯನ್ನು ಕಿತ್ತು ಹಾಕಿ, ರಕ್ಷಣೆಗಾಗಿ ಹಾಕಿದ ಸೋಲಾರ್ ತಂತಿ ಬೇಲಿ, ಸಿಸಿ ಕ್ಯಾಮೆರಾ ಗಳನ್ನು ಹಾಳು ಮಾಡಿ ಲಕ್ಷಾಂತರ ನಾಶ ಮಾಡಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಶಿಮುರುಕನಹಳ್ಳಿ ಗ್ರಾಮದ ಲೇ.ನರಸೇಗೌಡರ ಮಗ ಎಂ.ಎನ್. ಗೋಕರ್ಣ ಅವರು ತಮಗೆ ಸೇರಿದ ಸರ್ವೇ ನಂಬರ್ 25/6 ರಲ್ಲಿರುವ ಹಿಡುವಳಿ ಜಮೀನಿನಲ್ಲಿ ಬೆಳೆಯಲಿದ್ದ 33 ಅಡಿಕೆ ಗಿಡಗಳು, ತೊಂಡೆ ಬೆಳೆ, ತೊಂಡೆ ಬಳ್ಳಿಗೆ ಹಬ್ಬಲು ಹಾಕಿದ ಕಲ್ಲಿನ ಚಪ್ಪರ ಹಾಗೂ ಸೋಲಾರ್ ತಂತಿಬೇಲಿ, ಸಿಸಿ ಕ್ಯಾಮೆರಾಗಳನ್ನು ಅದೇ ಗ್ರಾಮದ ರಾಮೇಗೌಡ, ಕುಮಾರ, ಕಾಂತರಾಜು, ಜಗದೀಶ್, ಅನಿತಾ, ದಿನೇಶ, ಅರ್ಪಿತ, ನಿಂಗೇಗೌಡ, ಬಸವರಾಜು, ವೆಂಕಟೇಶ್, ಪರಮಶಿವ, ಕುಳ್ಳೇ ಗೌಡ ಅವರು ನಮ್ಮ ಕುಟುಂಬದ ಮೇಲಿನ ಹಳೆಯ ವೈಶ್ಯದಿಂದ ನಾಶ ಮಾಡಿದ್ದಾರೆ.
ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಅಲ್ಲದೆ ನಮ್ಮ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿರುವ ವಿಚಾರವು ಸಿ.ಸಿ. ಕ್ಯಾಮೆರಾ ಫೋಟೋಸ್ ನಲ್ಲಿ ದಾಖಲಾಗಿದೆ ಎಂದು ಗೋಕರ್ಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ನಮ್ಮ ತಾಯಿ ಪುಟ್ಟಲಕ್ಷ್ಮಮ್ಮ ಹಾಗೂ ಪತ್ನಿ ಹರ್ಷಿತ ಅವರ ಜಮೀನಿನ ಕಡೆಗೆ ಹೋಗಿದ್ದಾಗ, ಈ ಮೇಲ್ಕಂಡ ವ್ಯಕ್ತಿಗಳು ಅವ್ಯಾಚ ಶಬ್ದದಿಂದ ನಿಂದಿಸಿ, ಬೆದರಿಕೆಯನ್ನು ಹಾಕಿರುತ್ತಾರೆ. ಇದರಿಂದ ನಮ್ಮ ಕುಟುಂಬದವರು ಜಮೀನಿನ ಬಳಿ ಹೋಗಲು ಭಯಪಡುತ್ತಿದ್ದಾರೆ. ಹಾಗಾಗಿ ಅಡಕೆ, ತೊಂಡೆ ಬೆಳೆ ನಾಶ ಮಾಡಿ ಬೆಳೆ ರಕ್ಷಣೆಗಾಗಿ ಹಾಕಿದ ಸೋಲಾರ್ ತಂತಿ ಬೇಲಿ, ಸಿ.ಸಿ. ಕ್ಯಾಮೆರಾ ಹೊಡೆದು ಹಾಕಿ ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕಿರುವ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಗೋಕರ್ಣ ಅವರ ಮನವಿ ಮಾಡಿದ್ದಾರೆ.
ದೂರು ಸ್ವೀಕರಿಸಿದ ಸಬ್ ಇನ್ಸ್ಪೆಕ್ಟರ್ ಸುಬ್ಬಯ್ಯ ಮತ್ತು ಪ್ರಕರಣದ ಕಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.