ಮನೆ ಕಾನೂನು ಮಗಳ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿಗೆ 20 ವರ್ಷ ಜೈಲು

ಮಗಳ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿಗೆ 20 ವರ್ಷ ಜೈಲು

0

ಬೆಂಗಳೂರು: 2022 ರಲ್ಲಿ ಮಗಳ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ ಸಾಬೀತಾದ ಹಿನ್ನಲೆ ಆರೋಪಿ ತಂದೆಗೆ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸಿ ನ್ಯಾಯಾಧೀಶರಾದ ಎನ್ ನರಸಮ್ಮ ಅವರು ಆದೇಶಿಸಿದ್ದಾರೆ.

ಅತ್ಯಾಚಾರ ನಡೆಸಿ ಆಕೆಯನ್ನ ಗರ್ಭವತಿಯನ್ನಾಗಿ ಮಾಡಿದ್ದ ಆರೋಪದ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಬಿ.ಎನ್ ಲೋಹಿತ್ ತನಿಖೆ ನಡೆಸಿ ಐದನೆ ಅಧಿಕ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.

ಇದೀಗ  ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದ್ದು, ನೊಂದ ಬಾಲಕಿಗೆ ಜಿಲ್ಲಾ ಮತ್ತು ಕಾನೂನು ಪ್ರಾಧಿಕಾರದಿಂದ ಏಳು ಲಕ್ಷ ಪರಿಹಾರ ನೀಡುವಂತೆ ಶಿಫಾರಸ್ಸು ಮಾಡಲಾಗಿದೆ.

ಇನ್ನು ನಿನ್ನೆಯಷ್ಟೇ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿತ್ತು. ಕೂಡಲೇ ಎಚ್ಚೆತ್ತ ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ತುಮಕೂರಿನ ಶಾಂತಿನಗರದ ಗೂಡ್ ಶೆಡ್ ಕಾಲೋನಿ ನಿವಾಸಿಯಾಗಿರುವ ಹಾಗೂ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಷಫಿ ಎಂಬಾತ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಇನ್ನು ಇತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದರು.

ಹಿಂದಿನ ಲೇಖನಹಳೇ ವೈಷಮ್ಯ: ಅಡಿಕೆ ಸಸಿ, ತೊಂಡೆ ಬೆಳೆ ನಾಶ   
ಮುಂದಿನ ಲೇಖನನಾಪತ್ತೆಯಾಗಿದ್ದ ವ್ಯಕ್ತಿ ಶವ ಗುಂಡಿಯಲ್ಲಿ ಪತ್ತೆ: ಪತ್ನಿ-ನಾದಿನಿಯಿಂದ ಹತ್ಯೆ- ಇಬ್ಬರ ಬಂಧನ