ಮನೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌: ಬೆಳ್ಳಿ ಪದಕದ ಸಹ ವಿಜೇತೆ ಎಂದು ಘೋಷಿಸಲು ವಿನೇಶ್‌ ಪೋಗಟ್‌ ಮಾಡಿದ್ದ ಮನವಿ ತಿರಸ್ಕರಿಸಿದ...

ಒಲಿಂಪಿಕ್ಸ್‌: ಬೆಳ್ಳಿ ಪದಕದ ಸಹ ವಿಜೇತೆ ಎಂದು ಘೋಷಿಸಲು ವಿನೇಶ್‌ ಪೋಗಟ್‌ ಮಾಡಿದ್ದ ಮನವಿ ತಿರಸ್ಕರಿಸಿದ ಸಿಎಎಸ್‌

0

ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ 2024 ರ 50 ಕೆಜಿ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕಾಗಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ ಅರ್ಜಿಯನ್ನು ಪ್ಯಾರಿಸ್‌ನ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ತಿರಸ್ಕರಿಸಿದೆ.

Join Our Whatsapp Group

ಫೋಗಟ್ ಅವರ ಅರ್ಜಿಯನ್ನು ಆಗಸ್ಟ್ 9 ರಂದು, ಸಿಎಎಸ್ ದಾಖಲಿಸಿಕೊಂಡಿತ್ತು. ಆಸ್ಟ್ರೇಲಿಯಾದ ಫೆಡರಲ್ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಡಾ ಅನ್ನಾಬೆಲ್ಲೆ ಬೆನೆಟ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಲಾಗಿತ್ತು. ಬೆನೆಟ್ ಅವರ ಮುಂದೆ ವಿಚಾರಣೆಯು ಅದೇ ದಿನ ನಡೆದು ಮುಕ್ತಾಯವಾಗಿತ್ತು.

ಪೋಗಟ್‌ ಅವರು ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯ ಫೈನಲ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಸುಮಾರು 100 ಗ್ರಾಂ ಹೆಚ್ಚುವರಿ ದೈಹಿಕ ತೂಕ ಇಳಿಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಿ ವಿಶ್ವ ಕುಸ್ತಿ ಒಕ್ಕೂಟ (ಯುಡಬ್ಲ್ಯೂಡಬ್ಲ್ಯೂ) ನಿರ್ಧಾರ ಕೈಗೊಂಡಿತ್ತು.ಈ ಅನರ್ಹತೆ ಪ್ರಶ್ನಿಸಿ ಆಗಸ್ಟ್ 7ರಂದು ಪೋಗಟ್‌ ಅವರು ಸಿಎಎಸ್‌ ಮೆಟ್ಟಿಲೇರಿದ್ದರು.

ಅನರ್ಹತೆಯ ನಂತರ, ಫೋಗಟ್ ಆಗಸ್ಟ್ 7 ರಂದು ಯುಡಬ್ಲ್ಯೂಡಬ್ಲ್ಯೂನ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಆಗಸ್ಟ್ 9 ರಂದು ಸಿಎಎಸ್‌ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಪತ್ರಿಕಾ ಹೇಳಿಕೆಯಲ್ಲಿ, ಅರ್ಜಿದಾರೆಯು (ವಿನೇಶ್‌) ಆಕ್ಷೇಪಿತ ಯುಡಬ್ಲ್ಯೂಡಬ್ಲ್ಯೂ ನಿರ್ಧಾರ ರದ್ದುಗೊಳಿಸಿ ತನಗೆ ಬೆಳ್ಳಿ ಪದಕವನ್ನು (ಸಹವಿಜೇತೆ ಎಂದು ಪರಿಗಣಿಸಿ) ನೀಡಬೇಕೆಂದು ವಿನಂತಿಸಿದ್ದಾರೆ ಎಂದು ತಿಳಿಸಿತ್ತು. ಯುಡಬ್ಲ್ಯೂಡಬ್ಲ್ಯೂ ನಿರ್ಧಾರವನ್ನು ರದ್ದುಗೊಳಿಸಬೇಕು. ಫೈನಲ್‌ ಪಂದ್ಯ ನಡೆಯುವ ಮುನ್ನ ಹೊಸದಾಗಿ ತೂಕ ನಿರ್ಧರಿಸಿ ತಾವು ಫೈನಲ್‌ನಲ್ಲಿ ಭಾಗವಹಿಸಲು ಅರ್ಹರೆಂದು ಘೋಷಿಸಬೇಕು ಎಂದು ಪೋಗಟ್‌ ಮನವಿ ಮಾಡಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಲಾಗಿತ್ತು.

ಅಲ್ಲದೆ, “ಸಿಇಎಸ್ ಅಡ್ ಹಾಕ್ ವಿಭಾಗದ ಪ್ರಕ್ರಿಯೆಯು ವೇಗವಾಗಿದ್ದರೂ ಅರ್ಜಿಯ ಅರ್ಹತೆ ಕುರಿತು ಒಂದು ಗಂಟೆಯೊಳಗೆ ತೀರ್ಪು ನೀಡಲು ಸಾಧ್ಯವಾಗಿರುವುದಿಲ್ಲ, ಏಕೆಂದರೆ ಇದಕ್ಕೆ ಮೊದಲಿಗೆ ಪ್ರತಿವಾದಿ ಯುಡಬ್ಲ್ಯೂಡಬ್ಲ್ಯೂವನ್ನು ಆಲಿಸಬೇಕಾಗಿರುತ್ತಿತ್ತು. ಆದಾಗ್ಯೂ, ಪ್ರಕ್ರಿಯೆ ನಡೆಯುತ್ತಿದ್ದು ಅರ್ಜಿದಾರೆಯು ಆಕ್ಷೇಪಿತ ಯುಡಬ್ಲ್ಯೂಡಬ್ಲ್ಯೂ ನಿರ್ಧಾರ ರದ್ದುಗೊಳಿಸಿ ತನಗೆ ಬೆಳ್ಳಿ ಪದಕವನ್ನು (ಸಹವಿಜೇತೆ ಎಂದು ಪರಿಗಣಿಸಿ) ನೀಡಬೇಕೆಂದು ವಿನಂತಿಸಿದ್ದಾರೆ” ಎಂದು ಪ್ರಕಟಣೆ ಹೇಳಿತ್ತು.