ಮನೆ ಆರೋಗ್ಯ ಉತ್ತರ ಕೊರಿಯಾದಲ್ಲಿ  ಒಮಿಕ್ರಾನ್‌ ಮೊದಲ ಸೋಂಕು ಪತ್ತೆ: 2 ದಿನ ಲಾಕ್ ಡೌನ್

ಉತ್ತರ ಕೊರಿಯಾದಲ್ಲಿ  ಒಮಿಕ್ರಾನ್‌ ಮೊದಲ ಸೋಂಕು ಪತ್ತೆ: 2 ದಿನ ಲಾಕ್ ಡೌನ್

0

ಸಿಯೋಲ್(ದಕ್ಷಿಣ ಕೊರಿಯಾ): ಇದೇ ಮೊದಲ ಬಾರಿಗೆ ಕೋವಿಡ್ ವೈರಸ್​ನ ರೂಪಾಂತರಿ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ ಎಂದು ಉತ್ತರ ಕೊರಿಯಾ ಸರ್ಕಾರದ ಸುದ್ದಿಸಂಸ್ಥೆ ವರದಿ ಮಾಡಿದೆ.

ಒಮಿಕ್ರಾನ್ ಕಾಣಿಸಿಕೊಂಡ ಕಾರಣ ದೇಶದಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾಂಕ್ರಾಮಿಕವನ್ನು ತೊಡೆದು ಹಾಕಲು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪ್ರತಿಜ್ಞೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಒಮಿಕ್ರಾನ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಿಮ್ ಜಾಂಗ್ ಉನ್ ಸೇರಿದಂತೆ ಉನ್ನತಾಧಿಕಾರಿಗಳು ಪಾಲಿಟ್‌ಬ್ಯೂರೊ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ವೈರಸ್ ಕಾಣಿಸಿಕೊಂಡ ಪ್ರದೇಶಗಳನ್ನು ಎರಡು ದಿನಗಳ ಕಾಲ ಲಾಕ್​​ಡೌನ್​ ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಒಮಿಕ್ರಾನ್ ವೈರಸ್ ಪತ್ತೆಯಾಗುವ ಮೂಲಕ ಉತ್ತರ ಕೊರಿಯಾ ಕೋವಿಡ್ ವೈರಸ್ ಮುಕ್ತ ಎಂಬ ಪಟ್ಟದಿಂದ ಕೆಳಗಿಳಿದಿದೆ ಎಂದು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಹಿಂದಿನ ಲೇಖನಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌
ಮುಂದಿನ ಲೇಖನತಾಜ್ ಮಹಲ್ ವಿವಾದ: ಅರ್ಜಿದಾರನ ವಿರುದ್ಧ ಅಲಹಾಬಾದ್  ಹೈಕೋರ್ಟ್ ಗರಂ