ಮನೆ ಯೋಗಾಸನ ಏಕಪಾದ ಬಕಾಸನ

ಏಕಪಾದ ಬಕಾಸನ

0

 ಅಭ್ಯಾಸ ಕ್ರಮ :

1. ಮೊದಲು, ‘ಸಾಲಂಬಶಿರ್ಷಾನ’ವನ್ನು ಮಾಡಿ ಮುಗಿಸಬೇಕು.

Join Our Whatsapp Group

2. ಬಳಿಕ,ಉಸಿರನ್ನು ಹೊರ ಬಿಟ್ಟು ಕಾಲುಗಳೆರಡನ್ನೂ ನೆಲಕ್ಕೆ ಸಮಾಂತರವಾಗುವ ವರೆಗೆ ಕೆಳಕ್ಕಿಳಿಸಿ ಇಡಬೇಕು. ಆಮೇಲೆ,ಬಲಮಂಡಿಯನ್ನು ಭಾಗಿಸಿ, ‘ಬಕಾಸನ’ದಲ್ಲಿರುವಂತೆ ಎಡಕಣಕಾಲು ಆದಷ್ಟು ಕಂಕುಳಿನ ಬಳಿಗೆ ಬರುವಂತೆ ಅದನ್ನು ಎಡಗೈಮೇಲ್ದೋಳೀನ ಹಿಂಬದಿಗೆ ಒರಗಿಸಿಡಬೇಕು. ಈಗ ಬಲಗಾಲನ್ನು ಬಲ ಗಡೆಗೆ ಬಲ ತೋಳಿನ ಮುಂದಕ್ಕೆ ಸರಿಯುವವರೆಗೂ ತಿರುಗಿಸಿ, ಬಲತೊಡೆಯ ಒಳಬದಿಯು ಬಲಗೈ ಮೇಲ್ದೋಳಿನ  ಹಿಂಬದಿಯನ್ನು ತಾಕುವಂತೆ ಇಡಬೇಕು.

3. ಉಸಿರನ್ನು ಹೊರದೂಡಿ,ಮುಂಡವನ್ನು ಮೇಲಕ್ಕೆ ಸೆಳೆದೆತ್ತಿ, ತಲೆಯನ್ನು ನೆಲದಿಂದ ಮೇಲೆ ಬ್ಬಿಸಿ ಕತ್ತನ್ನು ಮುಂದೂಡಬೇಕು. ಈಗ ಬಲಗಾಲನ್ನು ಮುಂಗಡೆಗೆ ತಂದು,ನೆಲ ಮುಟ್ಟುವಂತೆ ಅದನ್ನು ಮುಂಭಾಗಕ್ಕೆ ಹಿಗ್ಗಸಿ ಚಾಚಿಡಬೇಕು ಆ ಬಳಿಕ ತೊಳುಗಳನ್ನು ನೇರವಾಗಿ ಚಾಚಿ ಸಮತೋರಿಸಬೇಕು.

4. ಈ ಭಂಗಿಯ ಸ್ಥಿತಿಯಲ್ಲಿ ಬೆನ್ನೆಲುಬನ್ನೂ ಮತ್ತು ಬಲಗಾಲನ್ನು ಮುಂಚಾಚಿ, ಸುಮಾರು 10 20 ಸೆಕೆಂಡುಗಳ ಕಾಲ,ಸಾಮಾನ್ಯ ಉಸಿರಾಟ ನಡೆಸುತ್ತ ನಡೆಸಬೇಕು.

5. ಈಗ ಬಲಮಂಡಿಯನ್ನು ಭಾಗಿಸಿ, ತಲೆಯನ್ನು ನೆಲದ ಮೇಲೊರಗಿಸಿ ಮತ್ತೆ ‚ಸಾಲಂಬಶಿರ್ಷಾಸನ ಎರಡಾ’ದ ಭಂಗಿಗೆ ಬಂದು ನಿಲ್ಲಬೇಕು. 

6. ಈ ಆಸನದ ಭಂಗಿಯನ್ನು ಇನ್ನೊಂದು ಕಡೆಗೂ ಮಾಡಿ, ಅದರಲ್ಲಿ ಅಷ್ಟೇ ಕಾಲ ನಿಲ್ಲಬೇಕು.ಇಲ್ಲಿ ಎಡಗಾಲನ್ನು ನೇರವಾಗಿ ಮುಂಗಡೆಗೆ ಚಾಚಿಟ್ಟು, ಬಾಗಿಸಿದ ಎಡಗಾಲನ್ನು ಬಲಗೈಮೇಲ್ದೋಳಿನ ಹಿಂಬದಿಗೆ ಒರಗಿಸಿಡಬೇಕು.

7. ಈ ಭಂಗಿಯನ್ನು ಪೂರ್ಣಗೊಳಿಸಲು ಎರಡು ಹಾದಿಗಳಿವೆ. ಮೊದಲನೆಯದರಲ್ಲಿ ಮುಂಭಾಗಕ್ಕೆ ಚಾಚಿಟ್ಟಿದ್ದ ಕಾಲನ್ನು ಬಾಗಿಸಿ, ಆಮೇಲೆ ‘ಶೀರ್ಷಾಸನ’ಕ್ಕೆರಿ,ಅನಂತರ ಕಾಲುಗಳನ್ನು ಕೆಳಗಿಳಿಸಬೇಕು. ಈ ಮಾರ್ಗದಲ್ಲಿ ಪೂರ್ಣ ನೈಪುಣ್ಯವನ್ನು ಪಡೆದುದಾದರೆ,ಬಳಿಕ ಇನ್ನೊಂದು ಮಾರ್ಗವನ್ನು ಕೈಗೊಳ್ಳಬಹುದು ಇದರಲ್ಲಿ ಕಾಲುಗಳನ್ನು ಮುಂಗಡೆಗೆ ನೆರವಾಗಿ ಚಾಚಿ ಬಳಿಕ ಮೊಣಕೈಗಳನ್ನು ಬಾಗಿಸಿ, ಬಗ್ಗಿಸಿದ ಕಾಲನ್ನು ಹಿಂದಕ್ಕೆ ಹಿಗ್ಗಿಸಿ, ನೆಲಕ್ಕೆ ತಾಕಿಸುವಂತೆ ಅದನ್ನು ಸಮಾಂತರವಾಗಿ ರಿಸಬೇಕು.ಅಲ್ಲದೇ ಇಡೀ ದೇಹವನ್ನೂ ತಲೆಯನ್ನು ನೆಲ ಬಿಟ್ಟು ಮೇಲೆರಿಸಬೇಕು. ಇದೇ ಏಕಪಾದ ‘ಕೌಂಡಿನ್ಯಾಸನಎರಡರ’ಭಂಗಿ  ಆ ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು.ತಲೆಯನ್ನು ನೆಲದ ಮೇಲೊರಗಿಸಿ, ಕಾಲುಗಳೆರಡನ್ನು ಬಾಗಿಸಿ, ಮತ್ತೆ ‘ಶೀರ್ಷಾಸನಎರಡ’ಕ್ಕೆರಬೇಕು. ಅನಂತರ  ’ಊರ್ಧ್ವ ಧನುರಾಸನ’ಕ್ಕೆ ಸರಿದು,ಅದರ ಹಿಂದೆಯೇ ‘ವಿಪರೀತಚಕ್ರಾಸನ’ದ ಭಂಗಿಗಳನ್ನು ಅಭ್ಯಸಿಸಬೇಕು.

 ಪರಿಣಾಮಗಳು :

      ಈ ಅಭ್ಯಾಸದಿಂದ ಕಿಬ್ಬೊಟೆಯೊಳಗಿನ ಅಂಗಗಳೂ, ಮತ್ತು ಮಾಂಸಖಂಡಗಳು ಹಾಗೆಯೇ ಕೈಗಳು, ಎದೆ ಬೆನ್ನು ಇವೆಲ್ಲವೂ ಅಧಿಕಶಕ್ತಿಯನ್ನು ಗಳಿಸುವುವು. ಈ ಭಂಗಿಯಲ್ಲಿ ನಮ್ಮ ದೇಹವು ಭಾರವನ್ನೆತ್ತುವ ಯಂತ್ರವನ್ನು ಹೋಲುತ್ತದೆ.ಅಲ್ಲದೆ ಅವು ಯಾವ ದಿಕ್ಕಿಗೆ ಚಲಿಸುತ್ತವೆಯೋ ಆಯಾ ದಿಕ್ಕುಗಳಲ್ಲಿಯ ಅವಯವಗಳು ಭಾರವನ್ನು ಹೊತ್ತು ಆ ಮೂಲಕ ಶಕ್ತಿಯನ್ನು ಪಡೆಯುವವು.