ಮನೆ ರಾಜಕೀಯ ವಿಪಕ್ಷ ನಾಯಕರು ಹುಚ್ಚರ ರೀತಿ ಆಡುತ್ತಿದ್ದಾರೆ: ಸಚಿವ ಭೋಸರಾಜು

ವಿಪಕ್ಷ ನಾಯಕರು ಹುಚ್ಚರ ರೀತಿ ಆಡುತ್ತಿದ್ದಾರೆ: ಸಚಿವ ಭೋಸರಾಜು

0

ರಾಯಚೂರು: ಮುಡಾ ಪ್ರಕರಣದಲ್ಲಿ ವಿಪಕ್ಷ ನಾಯಕರು ಹುಚ್ಚರ ರೀತಿ ಆಡುತ್ತಿದ್ದಾರೆ. ಅವರ ಮಾತುಗಳಿಗೆ ಅರ್ಥವಿದೆಯೇ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾ‌ನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ದೂರಿದರು.

Join Our Whatsapp Group

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯರನ್ನು ಸಿಎಂ‌ ಸ್ಥಾನದಿಂದ ಇಳಿಸಿದರೆ ಕಾಂಗ್ರೆಸ್ ದುರ್ಬಲವಾಗುತ್ತಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಆದರೆ,‌ ನಮ್ಮದು ಸಂಪೂರ್ಣ ಜನಾಶೀರ್ವಾದದಿಂದ ಬಂದ ಸರ್ಕಾರ. 135 ಸ್ಥಾನ ಪಡೆದು ಅಧಿಕಾರಕ್ಕೆ ಬಂದ ಯಾವುದೇ ಪಕ್ಷಗಳು ಇತ್ತೀಚೆಗೆ ಬಂದಿಲ್ಲ. ಸಿಎಂ ಪತ್ನಿ ಪಾರ್ವತಿಯವರು ಎಲ್ಲ ನಿವೇಶನ ಮರಳಿ ನೀಡಿದ್ದು, ಸಿಎಂ ರಾಜೀನಾಮೆ ಕೊಡುವ ಮಾತೇ ಇಲ್ಲ ಎಂದರು.

ಬಿಜೆಪಿಯವರು ಆರಂಭದಿಂದಲೇ ಸರ್ಕಾರ ಪತನ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. 14 ಶಾಸಕರನ್ನು ಸಂಪರ್ಕಿಸಿ ನೂರಾರು ಕೋಟಿ ಆಮಿಷವೊಡ್ಡಿದ್ದಾರೆ. ತನಿಖಾ ಸಂಸ್ಥೆಗಳಿಂದಲೂ ಶಾಸಕರ ಮೇಲೆ ಒತ್ತಡ ಹೇರುವ ಕೆಲಸವಾಗುತ್ತಿದೆ ಎಂದು ದೂರಿದರು.

ಆರ್.ಅಶೋಕ್ ವಿರುದ್ಧ ಕೇಸ್ ಆಗಿದೆ. ಬಿಎಸ್ ವೈ ವಿರುದ್ಧ ಪ್ರಕರಣಗಳಿವೆ. ನಮ್ಮ ಪಕ್ಷದಲ್ಲಿ ಸಾವಿರ ಕೋಟಿ ಇಟ್ಟುಕೊಂಡು ಸಿಎಂ ಆಗಲು ಸಿದ್ಧರಿದ್ದಾರೆ ಎಂದು ಅವರದ್ದೇ ಪಕ್ಷದ ಯತ್ನಾಳ್ ಆರೋಪಿಸುತ್ತಿದ್ದಾರೆ. ಅವರ ಮಾತಿಗೆ ಯಾರು ಉತ್ತರ ಕೊಡುತ್ತಿಲ್ಲ. ಅವರ ಪಕ್ಷವನ್ನು ಸರಿಯಾದ ರೀತಿಯಲ್ಲಿ ಇಟ್ಡುಕೊಳ್ಳಲಾಗದ ಸ್ಥಿತಿ ಬಿಜೆಪಿಯಲ್ಲಿದೆ. ಬಿಜೆಪಿಯವರ ಭ್ರಷ್ಟಾಚಾರದಲ್ಲಿ ಮೋದಿಯವರು ಭಾಗಿಯಾಗಿದ್ದಾರೆ. ಇಡೀ ಪ್ರಪಂಚದಲ್ಲಿ ಯಾರು ಮಾಡದಷ್ಟು ಭ್ರಷ್ಟಾಚಾರವನ್ನು ಬಾಂಡ್ ಹಗರಣದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.