ಮನೆ ಸುದ್ದಿ ಜಾಲ ಮೈಸೂರು: ರೇಷ್ಮೆ ಮತ್ತು ಉದ್ಯಮ ಕುರಿತು ಅಂತರರಾಷ್ಟ್ರೀಯ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮ

ಮೈಸೂರು: ರೇಷ್ಮೆ ಮತ್ತು ಉದ್ಯಮ ಕುರಿತು ಅಂತರರಾಷ್ಟ್ರೀಯ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮ

0

ಮೈಸೂರು(Mysuru): ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಸಿಎಸ್‌ಆರ್‌ಟಿಐ)ಯಲ್ಲಿ ರೇಷ್ಮೆ ಮತ್ತು ಉದ್ಯಮಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಅಭ್ಯರ್ಥಿಗಳಿಗೆ ಆಯೋಜಿಸಿರುವ ತರಬೇತಿ ಕಾರ್ಯಕ್ರಮವನ್ನು ಇಂದು ಉದ್ಘಾಟಿಸಲಾಯಿತು.

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ಐಟಿಇಸಿ) ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೈಸೂರು ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಕೇಂದ್ರದ ನಿರ್ದೇಶಕ ಡಾ.ಜಿ.ಆರ್.ಜನಾರ್ಧನ್‌ ಉದ್ಘಾಟಿಸಿದರು.

ಕೇಂದ್ರ ರೇಷ್ಮೆ ಮಂಡಳಿ, ಸಿ.ಎಸ್‌.ಆರ್‌.ಟಿ.ಐ. ಅಧಿಕಾರಿಗಳು, ವಿಜ್ಞಾನಿಗಳು, ವಿಸ್ತರಣಾ ಸಿಬ್ಬಂದಿ ಪಾಲ್ಗೊಂಡಿದ್ದರು. ಸಿಎಸ್‌ಆರ್‌ಟಿಐ ಪ್ರಭಾರ ನಿರ್ದೇಶಕಿ ಡಾ.ಮೇರಿ ಜೋಸೆಫಾ (ಶೆರಿ) ಎ.ವಿ. ಸ್ವಾಗತಿಸಿದರು.

ವಿದೇಶಿ ವ್ಯವಹಾರಗಳ ಸಲಹೆಗಾರ ದಿಲೀಪ್ ಕುಮಾರ್ ಆರ್. ಪ್ರಾಸ್ತಾವಿಲ ಮಾತನಾಡಿದರು. ಅನುರಾಧಾ ವಂದಿಸಿದರು.

ಹಿಂದಿನ ಲೇಖನಜೋಕು ಜೋಕಾಲಿ
ಮುಂದಿನ ಲೇಖನಅಗ್ನಿವೀರರಾಗಿ ಸೈನ್ಯಕ್ಕೆ ಆಯ್ಕೆಯಾಗಿರುವ 72 ಯುವ ಸೈನಿಕರಿಗೆ ಅಭಿನಂದನೆ