ಮನೆ ಸ್ಥಳೀಯ ಜನವರಿ 2025 ರಲ್ಲಿ ಮೈಸೂರು ಫೆಸ್ಟ್ ಆಯೋಜನೆ: ಎಂ ಕೆ ಸವಿತಾ

ಜನವರಿ 2025 ರಲ್ಲಿ ಮೈಸೂರು ಫೆಸ್ಟ್ ಆಯೋಜನೆ: ಎಂ ಕೆ ಸವಿತಾ

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೂಡಿಕೆದಾರರು ಸಹಕರಿಸಿ

0

ಮೈಸೂರು: ಮೈಸೂರು ಪ್ರವಾಸಿ ಜಿಲ್ಲೆಯಾಗಿದ್ದು, ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೈಗಾರಿಕೋದ್ಯಮಿಗಳು, ಹೂಡಿಕೆದಾರರು ಕೈಜೋಡಿಸಿ ಸಹಕರಿಸಿ ಎಂದು ಪ್ರವಾಸೋಧ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ ಕೆ ಸವಿತಾ ಅವರು ತಿಳಿಸಿದರು.

Join Our Whatsapp Group

ಇಂದು ನಗರದ ಮಯೂರ ಹೋಟೆಲ್ ನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೇರ ಪಾಲದಾರರೊಂದಿಗೆ ಸಭೆ ನಡೆಸಿ  ಮಾತನಾಡಿದರು.

ಮೈಸೂರು ಪ್ರವಾಸೋಧ್ಯಮ ನಗರವಾಗಿದ್ದು ಪ್ರವಾಸೋಧ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಇದರಿಂದ ಮೈಸೂರು ನಗರದ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಆಗುತ್ತದೆ. ಪ್ರವಾಸಿ ತಾಣಗಳ ಅಭಿವೃದ್ಧಿಯಿಂದ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಿಲ್ಲೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರ ಹೆಚ್ಚು ಭೇಟಿಯಿಂದ ಹೋಟೆಲ್, ರೆಸ್ಟೋರೆಂಟ್ ಉದ್ಯಮ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.

ಜನವರಿ 2025 ಕ್ಕೆ ಮೈಸೂರು ಫೆಸ್ಟ್ ಮಾಡುವ ಯೋಜನೆ ಇದ್ದು, ಇದನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುವ ಕುರಿತು ಚಿಂತಿಸಲಾಗುತ್ತಿದೆ. ಇದರಲ್ಲಿ ಚಿತ್ರ ಸಂತೆ, ಪುಡ್ ಪೇಸ್ಟ್ ಆಯೋಜಿಸಲಾಗುವುದು. ಮೈಸೂರು ಫೆಸ್ಟ್ ಗೆ ಹೊರ ಜಿಲ್ಲೆ ಹೊರ ರಾಜ್ಯಗಳ ಜನರನ್ನು ಆಕರ್ಷಿಸುವ ರೀತಿ ಮಾಡುವ ಯೋಜನೆ ರೂಪಿಸಲಾಗುವುದು. ಮನರಂಜನೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮೈಸೂರು ಸುಗಂಧ ಕಾರ್ಯಕ್ರಮ ಅದ್ಭುತವಾಗಿ ಯಶಸ್ವಿಯಾಗಿ 3 ದಿನಗಳ ಕಾಲ ನಡೆಯಿತು. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ವಿಜೇತ ಸಂಗೀತ ವಿದ್ವಾಂಸರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕರ್ನಾಟಕ ಮ್ಯೂಸಿಕ್ ನ ದಾಸ ಸಾಹಿತ್ಯ, ಪುರಂದರ ದಾಸ, ಕನಕದಾಸರ ಕೀರ್ತನೆಗಳ ಸಂಗೀತ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದಿತು ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಾಗೂ ಮೈಸೂರು ಫೆಸ್ಟ್ ಕಾರ್ಯಕ್ರಮಕ್ಕೆ ಸಹಕರಿಸಿದ ನೇರ ಪಾಲುದಾರರಿಗೆ ಧನ್ಯವಾದ ತಿಳಿಸಿ ಸನ್ಮಾನಿಸಲಾಯಿತು.

ಸಭೆಯಲ್ಲಿ  ಹೋಟೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ ಕೆ ಹರೀಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ಹೋಟೆಲ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ನಾರಾಯಣ ಗೌಡ, ಸ್ಕಾಲ್‌ ಇಂಟರ್‌ ನ್ಯಾಷನಲ್‌ ಮೈಸೂರು ವಿಭಾಗದ ಅಧ್ಯಕ್ಷ ಜಯಕುಮಾರ್,  ಮೈಸೂರು ಸಂಘ ಸಂಸ್ಧೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್. ಪ್ರಶಾಂತ್ , ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಲಿಂಗರಾಜು, ಹೋಟೆಲ್ ಜೇಡ್ ಗಾರ್ಡ್ ನ್ ಭರತ್ ಗೌಡ, ಪೈ ವಿಸ್ತಾ ಹೋಟೇಲ್ ಮಹೇಶ್ ಕುಮಾರ್, ಫೈನ್ ಆರ್ಟ್ಸ್ ನ ಅಶೋಕ್ ಹಾಗೂ ಇತರರು ಉಪಸ್ಥಿತರಿದ್ದರು.