ಮೂಲಾ ನಕ್ಷತ್ರದ ಕ್ಷೇತ್ರವ್ಯಾಪ್ತಿ ಶೂನ್ಯ (0) ಅಂಶದಿಂದ 13 ಅಂಶ 20 ಕಲಾ ಧನುರಾಶಿಯವರೆಗೆ. ರಾಶಿ ಸ್ವಾಮಿ- ಬೃಹಸ್ಪತಿ, ನಕ್ಷತ್ರ ಸ್ವಾಮಿ – ಕೇತು, ನಕ್ಷತ್ರ ದೇವತೆ – ನಿಯತಿ (ರಕ್ಷಸ್ಸು), ಆಕಾಶ ಭಾಗ – ದಕ್ಷಿಣ, ತಾರಾಸಮೂಹ- 11, ನಾಮಾಕ್ಷರ – ಯೇ, ಯೋ, ಬಾ, ಬಿ. ಈ ನಕ್ಷತ್ರ ಪ್ರತಿನಿಧಿಸುವ ಜಾತಕನ ಶರೀರ ಭಾಗ – ನಿತಂಬ, ತೊಡೆಗಳು, ಉರ್ವಸ್ಟಿ ಶೋಣಿಫಲ, ನಿತಂಬಾಗ್ರ, ನಾಡಿಗಳು.
* ಮೂಲಾ ನಕ್ಷತ್ರದ ಜಾತಕನ ಸ್ವರೂಪ :
ಉದಾರ, ಪ್ರಾಮಾಣಿಕ, ಅನ್ಯರಿಗೆ ಸಮ್ಮಾನ ನೀಡುವ ಪ್ರವೃತ್ತಿಯವ, ಅನ್ಯರ ಮೇಲೆ ಆಂತರಿಕ ಮಟ್ಟದಲ್ಲಿ ನೇತೃತ್ವ ವಹಿಸುವ ಸಾಮರ್ಥ್ಯವಿರುವವ, ಆಜ್ಞೆ ನೀಡುವವ, ಸಲಹಾಕಾರ, ಸ್ನೇಹಪೂರ್ಣ, ಎಲ್ಲರೊಡನೆ ಕೂಡಿಕೊಂಡು ಹೋಗುವವ, ಪ್ರಸನ್ನಚಿತ್ತ ಶಿಸ್ತುಪ್ರಿಯ, ಕಾನೂನು ಮತ್ತು ನೀತಿಯ ಪಾಲನೆ ಮಾಡುವವ, ಪ್ರಾಚೀನತೆಯ ಭಕ್ತ ಅಂಧವಿಶ್ವಾಸಿ, ಕ್ಷಮಾಶೀಲ, ಲೋಕಹಿತದ ಕಾರ್ಯಗಳನ್ನು ಮಾಡುವವ, ಧಾರ್ಮಿಕ ಕೃತ್ಯಗಳ ಮೇಲೆ ಅಪವ್ಯಯ ಮಾಡುವವ, ಆಶಾವಾದಿ, ವಿನೋದ-ಹಾಸ್ಯದಲ್ಲಿ ಜಿಗಿದಾಡುವವ, ಸದಾ ಚಿಂತನಶೀಲ, ಸಾಮಾಜಿಕ ಕಾರ್ಯಗಳಲ್ಲಿ ನಿರತ, ಅಹಂಕಾರಿ, ಶ್ರೀಮಂತ, ಸಂತೋಷ ಪ್ರವೃತ್ತಿಯವ, ಲಘು ಅಥವಾ ದುಂಡಗಾದ ಶರೀರದವ, ದೃಢನಿಶ್ಚಯಿ, ವಿಶ್ವಾಸಪಾತ್ರ.
* ತೃತೀಯ ಚರಣದ ಸ್ವಾಮಿ ಕೇತು-ಬುಧ ಸಾಹಿತ್ಯ ಅಥವಾ ಪತ್ರಕರ್ತತೆಯಲ್ಲಿ ಅಭಿರುಚಿ ಉಂಟುಮಾಡುವರು.
* ಚತುರ್ಥಚರಣದ ಸ್ವಾಮಿ ಕೇತು-ಚಂದ್ರ ಜಾತಕನಲ್ಲಿಯ ಕಲ್ಪನೆಗೆ ಹೊಳಪು ತುಂಬುವರು.
* ಮೂಲಾ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :
ಧಾರ್ಮಿಕ ಸಂಸ್ಕಾರ ಮಾಡುವವ, ನ್ಯಾಯವಾದಿ, ನ್ಯಾಯಾಧೀಶ, ಅಧ್ಯಾಪಕ, ಪುರೋಹಿತ, ಧರ್ಮಗುರು, ಪುರಾಣ ವಿಶ್ಲೇಷಕ, ಕಥಾವಾಚಕ, ರಾಜದೂತ, ಪಕ್ಷದ ಮುಖ್ಯಸ್ಥ ರಾಜನೀತಿಯಲ್ಲಿ ಅಭಿರುಚಿಯುಳ್ಳವ, ವಿಮರ್ಶಕ, ವಿಶ್ವಸನೀಯ ಕೆಲಸಗಾರ, ಕಾರ್ಯದರ್ಶಿ, ಆಪ್ತ ಸಹಾಯಕ, ವೈದ್ಯ, ದೈಹಿಕ ತಜ್ಞ, ಆಯುರ್ವೇದಾಚಾರ್ಯ, ಸಮಾಜಸೇವಕ, ಪಾರ್ಷದ, ದಿನಸಿ ವ್ಯಾಪಾರಿ, ಕುದುರೆ ರೇಸ್, ದೊಡ್ಡ ಯೋಜನೆಗಳ ಮೂಲಕ ಲಾಭ ಪ್ರಾಪ್ತಿ ಹೊಂದುವವ, ಆಶ್ಚರ್ಯಜನಕ ಕಾರ್ಯಗಳಿಂದ ಶ್ರೀಮಂತ ಅಂತಾರಾಷ್ಟ್ರೀಯ ವ್ಯಾಪಾರ, ವಿಧಾನಸಭೆಯ ಅಧ್ಯಕ್ಷ, ವಿನಿಮಯ ಕೇಂದ್ರ, ನಿರ್ಯಾತಕಾರ, ಜೋತಿಷ ಪ್ರೇಮಿ, ಅಧಿಕಾರಿ, ವ್ಯವಸ್ಥಾಪಕ, ಸಂಪಾದಕ, ಠೋಕ ವ್ಯಾಪಾರಿ,, ಗುಮಾಸ್ತ ಆಪ್ತ ಕಾರ್ಯದರ್ಶಿ, ಸದಸ್ಯ, ಹಿತೈಷಿ ದೈಹಿಕತಜ್ಞ, ಪುಷ್ಪಗಳ ವ್ಯಾಪಾರಿ, ಗಿಡಮೂಲಿಕೆ ಅಥವಾ ಭೂಮಿಗತ ಪದಾರ್ಥಗಳ ವ್ಯಾಪಾರದಲ್ಲಿ ಲಾಭ. ಫಲಗಳು, ಗುಪ್ತಚರ ವಿಭಾಗ, ಲೇಖಕ, ದುಭಾಷಿ (ಅನುವಾದಕಾರ), ವಿಲಾಸಸಾಮಗ್ರಿ,
* ಮೂಲಾ ಜಾತಕನ ರೋಗ :
ಚಟುವಟಿಕೆಯಲ್ಲಿ ವಿರಕ್ತಿ ನಡೆದಾಡಲು ಕಷ್ಟ ವಾತರೋಗ, ಸಂಧಿವಾತ, ಸೊಂಟ ಮತ್ತು ಪುಪ್ಪಸದಲ್ಲಿ ಪೀಡೆಗಳು.
* ★ ವಿಶೇಷ: ಗುರುವಿನ ರಾಶಿ ಮತ್ತು ಕೇತುವಿನ ನಕ್ಷತ್ರದಲ್ಲಿ ಜನಿಸಿದ ಅಧಿಕಾಂಶ ಜಾತಕರು ತಮ್ಮ ಇಚ್ಛಾನುಸಾರ ಕಾರ್ಯ ನಿರ್ವಹಿಸುವವರು, ಪುರಾತನ (ಹಳೆಯ) ಪೀಳಿಗೆಯೊಡನೆ ವಿದ್ರೋಹ ಮಾಡುವವರು, ತಂದೆಗೆ ಕಷ್ಟಕಾರಿಗಳು ಅಥವಾ ತಂದೆಯ ಮೂಲಕ ಕಷ್ಟ ಉದರ ರೋಗ, ಅನ್ಯರ ಮಾತನ್ನು ಒಪ್ಪುವವರು, ಅಲೆಮಾರಿ ಜೀವನದ ಅಭಿರುಚಿಯುಳ್ಳವರು, ಮಾಟ-ಮಂತ್ರಗಳಲ್ಲಿ ವಿಶ್ವಾಸವಿಡುವವರು, ಸ್ವಚ್ಛ ಹಾಗೂ ಸುಂದರ ವಸ್ತ್ರಾಲಂಕಾರದ ಪ್ರಿಯರು, ಶತ್ರುಗಳ ಮೇಲೆ ವಿಜಯ ಪ್ರಾಪ್ತಿ ಹೊಂದುವವರು, ವಿದ್ಯಾಧ್ಯಯನದಲ್ಲಿ ತೀವ್ರ ಇಚ್ಛೆಯುಳ್ಳವರು ಆಗುತ್ತಾರೆ. ಇಂಥ ಜಾತಕರು ಜೋತಿಷ್ಯದ ಮಾನ್ಯತೆಗಳ ಅನುಸಾರ ಜೀವಿತವಾಗಿರುವುದಿಲ್ಲ ಒಂದು ವೇಳೆ ಜೀವಿತವಾಗಿದ್ದರೆ ಅತ್ಯಂತ ವಿಶಿಷ್ಟ ಮಟ್ಟದ ಜಾತಕರಲ್ಲಿ ಒಬ್ಬರಾಗುತ್ತಾರೆ. ಸೂರ್ಯನು ಈ ನಕ್ಷತ್ರದ ಮೇಲೆ ಪುಷ್ಯಮಾಸದ ಆರಂಭದಲ್ಲಿ ಸುಮಾರು ಹದಿಮೂರೂ ಕಾಲು ದಿನಗಳವರೆಗೆ ಇರುತ್ತಾನೆ. ಚಂದ್ರನು ಪ್ರತಿ ಇಪ್ಪತ್ತೇಳು ದಿನದಲ್ಲಿ ಒಂದು ದಿನದ ಅವಧಿ ಯವರೆಗೆ ಈ ನಕ್ಷತ್ರದ ಮೇಲಿರುತ್ತಾನೆ.
ಟಿಪ್ಪಣಿ : ಆಚಾರ್ಯರ ಅಭಿಪ್ರಾಯದಂತೆ, ಮೂಲಾ ನಕ್ಷತ್ರದಲ್ಲಿ ಜನಿಸಿದ ಜಾತಕನಿಗೆ ಇಪ್ಪತ್ತೇಳನೆಯ ದಿನದಂದು ಅವಶ್ಯ ಶಾಂತಿ ವಿಧಾನವನ್ನು ಮಾಡಬೇಕು.
ಈ ನಕ್ಷತ್ರದ ಮೇಲೆ ಕೇತು ಹಾಗೂ ಗುರು ಗೋಚರವರ ಭ್ರಮಣ ಮಾಡಿದರೆ, ಜಾತಕನಿಗೆ ಯಾವುದಾದರೂ ಕಾರ್ಯ ವಿಶೇಷದಲ್ಲಿ ಸಫಲತೆ ಮತ್ತು ಧನ ಪ್ರಾಪ್ತಿಯಾಗಿರುತ್ತದೆ. ಮೂಲ ನಕ್ಷತ್ರದ ಜಾತಕರು ಸದಾ ಸಮಯದ ಸದುಪಯೋಗ ಮಾಡುವವರಾಗುತ್ತಾರೆ. ಆದ್ದರಿಂದ ಅವರು ಜೀವನದಲ್ಲಿ ಅನೇಕ ಸಲ ಗುಪ್ತಲಾಭದಿಂದ • ಲಾಭಾನ್ವಿತರು ಕೂಡ ಆಗುತ್ತಾರೆ. ಬೃಹಸ್ಪತಿ ಮತ್ತು ಕೇತುವಿನ ಮಹಾದೆಕೆ ಮತ್ತು ಅಂತರ್ದೆಶೆಗಳು ಜಾತಕನ ಜೀವನದಲ್ಲಿ ಭಾಗ್ಯಶಾಲಿ ದಿನಗಳಾಗಿರುತ್ತವೆ.
* ಚರಣದ ಸ್ವಾಮಿಯ ಫಲ :
★ ಪ್ರಥಮ ಚರಣದ ಸ್ವಾಮಿ ಕೇತು- ಮಂಗಳ ಜಾತಕನಲ್ಲಿ ಅಧಿಕ ಆವೇಶವನ್ನು
★ದ್ವಿತೀಯ ಚರಣದ ಸ್ವಾಮಿ ಕೇಡು- ಶುಕ್ರ ಕಲೆಗಳ ಕುರಿತು ಜಾತಕನಲ್ಲಿ ಜಾಗೃತಿ ಉಂಟು ಮಾಡುವರು.
★ ತೃತೀಯ ಚರಣದ ಸ್ವಾಮಿ ಕೇತು-ಬುಧ ಸಾಹಿತ್ಯ ಅಥವಾ ಪತ್ರಕರ್ತತೆಯಲ್ಲಿ ಅಭಿರುಚಿ ಉಂಟುಮಾಡುವರು.
★ ಚತುರ್ಥಚರಣದ ಸ್ವಾಮಿ ಕೇತು-ಚಂದ್ರ ಜಾತಕನಲ್ಲಿಯ ಕಲ್ಪನೆಗೆ ಹೊಳಪು ತುಂಬುವರು.