ಮನೆ ರಾಜಕೀಯ ಬಿಎಸ್ವೈ, ಸಿದ್ದು, ಹೆಚ್ಡಿಕೆ, ಡಿಕೆಶಿ ನಿತ್ಯ ಮಾತನಾಡುತ್ತಾರೆ: ಬಸನಗೌಡ ಪಾಟೀಲ ಯತ್ನಾಳ

ಬಿಎಸ್ವೈ, ಸಿದ್ದು, ಹೆಚ್ಡಿಕೆ, ಡಿಕೆಶಿ ನಿತ್ಯ ಮಾತನಾಡುತ್ತಾರೆ: ಬಸನಗೌಡ ಪಾಟೀಲ ಯತ್ನಾಳ

0

ಬೆಳಗಾವಿ (Belagavi)-ಬಿಎಸ್ವೈ, ಸಿದ್ದರಾಮಯ್ಯ, ಹೆಚ್ಡಿಕೆ, ಡಿಕೆಶಿ ಇವರೆಲ್ಲರೂ ನಿತ್ಯ ರಾತ್ರಿ ಮಾತನಾಡುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagowda Patil Yatnal) ಆರೋಪಿಸಿದ್ದಾರೆ.

ಜಿಲ್ಲೆಯ ಗೋಕಾಕದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ಮಹಾನ್‌ ನಾಯಕ ಬಿ.ಎಸ್.ಯಡಿಯೂರಪ್ಪ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮೊದಲಾದವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಎಲ್ಲರೂ ನಿತ್ಯ ರಾತ್ರಿ ಮಾತನಾಡುತ್ತಾರೆ ಎಂದು ಆಪಾದಿಸಿದ್ದಾರೆ.

ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿರುವ ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದ ಅವರು, ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಹಾಗೂ ಮೋಸ ಮಾಡಿದವರಲ್ಲಿ ನಮ್ಮಲ್ಲಿನ (ಬಿಜೆಪಿ) ಮಹಾನ್‌ ನಾಯಕರೊಬ್ಬರ ಪುತ್ರನ ಪಾತ್ರವಿದೆ ಎಂದು ಆರೋಪಿಸಿದರು.

ಹಿಂದಿನ ಲೇಖನನೇಮಕಾತಿ ಆದೇಶಕ್ಕೂ ಮುನ್ನವೇ ಪಿಎಸ್‌ ಐ ಸಮವಸ್ತ್ರ ಧರಿಸಿ ಪೋಸ್‌ ಕೊಟ್ಟಿದ್ದ ಕಾನ್‌ ಸ್ಟೇಬಲ್‌ ಅಮಾನತು  
ಮುಂದಿನ ಲೇಖನಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡದಿದ್ದರೆ ಮನೆಗೆ ಹೋಗುತ್ತೀರಿ: ಬೊಮ್ಮಾಯಿಗೆ ಯತ್ನಾಳ ಎಚ್ಚರಿಕೆ