ಶಿರಸಿ: ತಾಲ್ಲೂಕಿನ ಬನವಾಸಿಗೆ ಮಂಗಳವಾರ ಕದಂಬೋತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಹಲವೆಡೆ ಪೇ ಸಿ.ಎಂ. ಪೋಸ್ಟರ್ ಗಳನ್ನು ಸೋಮವಾರ ರಾತ್ರಿ ಅಂಟಿಸಲಾಗಿದೆ.
ರಾಜ್ಯದ ಹಲವೆಡೆ ನಡೆಯುತ್ತಿದ್ದ ಪೇ ಸಿಎಂ ಪೋಸ್ಟರ್ ಅಭಿಯಾನ ಈಗ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕ್ಷೇತ್ರಕ್ಕೂ ಕಾಲಿಟ್ಟಿದೆ.
ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪೋಸ್ಟರ್ ಅನ್ನು ಹಾಕಿ ಆಹಾರದ ‘ಕಿಟ್ ಸ್ಕ್ಯಾಮ್’ಗೆ ಪೇ ಸಿಎಂ ಮಾಡಿ’ ಹಾಗೂ ‘ಡೀಲ್ ನಿಮ್ದು, ಕಮಿಷನ್ ನಮ್ದು’ ಎಂದು ಬರೆದು ಬನವಾಸಿಯ ರಸ್ತೆಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ.
Saval TV on YouTube