ಮನೆ ತಂತ್ರಜ್ಞಾನ ಚೌಕಾಕಾರದ ಚಕ್ರ ಇರುವ ಸೈಕಲ್ ಬಂದಿದೆ ನೋಡಿ!

ಚೌಕಾಕಾರದ ಚಕ್ರ ಇರುವ ಸೈಕಲ್ ಬಂದಿದೆ ನೋಡಿ!

0

ಇತ್ತೀಚಿಗೆ ಇಂಥದ್ದೊಂದು ಚೌಕದ ಚಕ್ರಗಳಿರುವ ಸೈಕಲ್ ವಿಡಿಯೋವೊಂದು ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

Join Our Whatsapp Group

ಅಂದಹಾಗೆ ಇಂಜಿನಿಯರ್ ಸೆರ್ಗಿ ಗೋರ್ಡಿಯೆವ್ ಅವರು ತಮ್ಮ ವಿಶಿಷ್ಟವಾದ ಆವಿಷ್ಕಾರವನ್ನು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ.

ವೃತ್ತಿಯಲ್ಲಿ ಇಂಜಿನಿಯರಿಂಗ್ ಆಗಿರುವ ಸೆರ್ಗಿ ಅವರು ದ ಕ್ಯೂ ಎಂಬ ಹೆಸರಿನ ಇನ್ನೋವೇಟಿವ್ ಯುಟ್ಯೂಬ್ ಚಾನಲ್ ಅನ್ನು ನಡೆಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಅವರು ಚೌಕಾಕಾರದ ಚಕ್ರಗಳನ್ನು ಹೊಂದಿರುವ ಸೈಕಲ್ ವಿಡಿಯೋ ಹಂಚಿಕೊಂಡಿದ್ದು ನೆಟ್ಟಿಗರನ್ನು ಬೆರಗುಗೊಳಿಸಿದೆ.

ಕುತೂಹಲಕಾರಿ ವೀಡಿಯೋದಲ್ಲಿ ಸೈಕಲ್ ಸಾಮಾನ್ಯ ಕಪ್ಪು ಬಣ್ಣದ್ದಾಗಿದೆ. ಆದರೆ ಅದರಲ್ಲಿರುವ ಚೌಕಾಕಾರದ ಚಕ್ರಗಳು ಮಾತ್ರ ವಿಶೇಷ ಆಕರ್ಷಣೆಯಾಗಿದೆ. ವ್ಯಕ್ತಿಯೊಬ್ಬ ಸೈಕಲ್ ಹತ್ತಿ ಪೆಡಲ್ ತುಳಿಯಲು ಆರಂಭಿಸಿದಾಗ ಅದು ನಿಧಾನಕ್ಕೆ ವೇಗ ಪಡೆಯುತ್ತದೆ. ಅಲ್ಲದೇ ಸರಾಗವಾಗಿ ಮುಂದಕ್ಕೆ ಚಲಿಸುತ್ತದೆ. ಪ್ರಾಯೋಗಿಕ ಬೈಸಿಕಲ್ನ ಸಂಪೂರ್ಣ ವೀಡಿಯೊವನ್ನು ತಮ್ಮ ಕ್ಯೂ ಯೂಟ್ಯೂಬ್ ಚಾನೆಲ್ನಲ್ಲಿಯೂ ಹಂಚಿಕೊಂಡಿದ್ದಾರೆ.

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಇನ್ನು, ಚೌಕ ಆಕಾರದ ಚಕ್ರಗಳನ್ನು ಹೊಂದಿರುವ ಸೈಕಲ್ ಕಲ್ಪನೆಯ ಬಗ್ಗೆ ನೆಟ್ಟಿಗರ ಪ್ರತಿಕ್ರಿಯೆಯು ಗೊಂದಲಮಯವಾಗಿತ್ತು. ಬಹಳಷ್ಟು ಜನರು ಚೌಕ ಚಕ್ರದ ಕಲ್ಪನೆಯನ್ನು ತಿರಸ್ಕರಿಸಿದ್ದಾರೆ. ಕೆಲವರು ಕ್ರಿಯೇಟಿವಿಟಿಯನ್ನು ಆನಂದಿಸಿದರು. ಇನ್ನೂ ಕೆಲವರು ಚೌಕ ಚಕ್ರಗಳು ತಾಂತ್ರಿಕವಾಗಿ “ಚಕ್ರಗಳು” ಅಲ್ಲ ಎಂದು ವಾದಿಸಿದರು. ಮತೊಬ್ಬರು ಅಂತಹ ಬೈಸಿಕಲ್ ಅನ್ನು ತಯಾರಿಸುವ ಹಿಂದಿನ ಪ್ರೇರಣೆಗಳನ್ನು ಪ್ರಶ್ನಿಸಿದರು.

ಒಬ್ಬ ಬಳಕೆದಾರರು, “ನಾವು 100 ವರ್ಷಗಳ ಹಿಂದೆ ಏರ್ ಶಿಪ್ ಗಳು ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದ್ದೇವೆ. ಇಂದು ನಾವು ಇದನ್ನು ನೀಡಿದ್ದೇವೆ ” ಎಂದು ಬರೆದಿದ್ದಾರೆ. “ಏಲಿಯನ್ ಗಳು ಈ ವೀಡಿಯೊವನ್ನು ನೋಡಿದ್ದಾರೆ. ಹಡಗನ್ನು ತಿರುಗಿಸಿ ಮತ್ತೊಂದು ನಕ್ಷತ್ರಪುಂಜದತ್ತ ಹೊರಟಿದ್ದಾರೆ” ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.

“ಅದು ವಿಸ್ಮಯಕಾರಿಯಾಗಿ ತೃಪ್ತಿಕರವಾಗಿ ಕಾಣುತ್ತದೆ,” ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಮತ್ತೊಬ್ಬರು “ನಾನು ಪ್ರಯೋಗವನ್ನು ಇಷ್ಟಪಡುತ್ತೇನೆ ಆದರೆ ನನ್ನ ಮೆದುಳು ಅದನ್ನು ತಿರಸ್ಕರಿಸುತ್ತದೆ” ಎಂಬುದಾಗಿ ಬರೆದಿದ್ದಾರೆ. ಇನ್ನು ಟ್ವಿಟ್ಟರ್ನ ಈ ವೈರಲ್ ವೀಡಿಯೊ 20.9 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಆದರೆ ಸೈಕಲ್ ಇರಲಿ, ಬೈಕ್ ಇರಲಿ ಅಥವಾ ಇನ್ಯಾವುದೇ ವಾಹನದ ಚಕ್ರವಿರಲಿ, ಅದರ ಬಗ್ಗೆ ಎಲ್ಲರಿಗೂ ಒಂದು ಕಲ್ಪನೆ ಇದೆ.

ಆದರೆ ಈ ಸೈಕಲ್ ಮಾತ್ರ ಜನರನ್ನು ಅಚ್ಚರಿಗೊಳಿಸಿದ್ದು ಸುಳ್ಳಲ್ಲ. ವೃತ್ತಾಕಾರದ ಚಕ್ರಗಳ ಪರಿಕಲ್ಪನೆಯು ಶತಮಾನಗಳಷ್ಟು ಹಳೆಯದಾದರೂ, ಭೌತಶಾಸ್ತ್ರ ಮತ್ತು ಎಂಜಿನಿಯರಿಂಗ್ನಲ್ಲಿ ಇದು ಒಂದು ಒಂದು ಪ್ರಮುಖ ಆವಿಷ್ಕಾರವಾಗಿದೆ.

ಒಟ್ಟಾರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ದಿನ ದಿನವೂ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿರುತ್ತವೆ. ಹೊಸ ಆವಿಷ್ಕಾರಗಳಿಂದ ಬಹಳಷ್ಟು ಉಪಯೋಗಗಳಾಗುತ್ತವೆ. ಕೆಲಸಗಳು ಸುಲಭವಾಗುತ್ತವೆ. ಕೆಲವಷ್ಟನ್ನು ಜನರು ಆಗಿಂದಾಗ್ಗೆ ಒಪ್ಪಿಕೊಳ್ಳದೇ ಹೋದರೂ ಕಾಲಾನಂತರದಲ್ಲಿ ಅದಕ್ಕೆ ಒಗ್ಗಿಕೊಳ್ಳುತ್ತಾರೆ. ಆದರೆ ಚೌಕಾಕಾರದ ಚಕ್ರಗಳನ್ನು ಹೊಂದಿರುವ ಸೈಕಲ್ನಂಥ ಆವಿಷ್ಕಾರಗಳನ್ನು ಜನರು ಬೇಗನೇ ಒಪ್ಪಿಕೊಳ್ಳುವುದು ಕಷ್ಟ. ಆದರೂ ಇದನ್ನು ತಂತ್ರಜ್ಞಾನ ಕ್ಷೇತ್ರದಲ್ಲಿನ ವಿಶಿಷ್ಟ ಆವಿಷ್ಕಾರ ಎಂದೇ ಹೇಳಬಹುದು.

ಹಿಂದಿನ ಲೇಖನಕ್ಷೇತ್ರದ ಅಭಿವೃದ್ಧಿಯನ್ನು ನೆನೆದು ಗೋಪಾಲಯ್ಯನವರಿಗೆ ಮತ ನೀಡಿ: ಹೇಮಲತಾ ಗೋಪಾಲಯ್ಯ
ಮುಂದಿನ ಲೇಖನನಂಜನಗೂಡು: ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ಆರೋಪಿಯ ಬಂಧನ