ಮನೆ ಯೋಗಾಸನ ಪಾದಹಸ್ತಾಸನ

ಪಾದಹಸ್ತಾಸನ

0

ʼಪಾದʼವೆಂದರೆ ಹೆಜ್ಜೆ ʼಹಸ್ತʼವೆಂದರೆ ಕೈ. ಕಾಲು ಕೈಗಳ ಆಧಾರದ ಮೇಲೆ ಶರೀರವನ್ನು ನಿಲ್ಲಿಸುವ ಭಂಗಿಯಾದುದರಿಂದ ಈ ಹೆಸರು ಈ ಆಸನಕ್ಕಳವಡಿಸಿದೆ.

ಅಭ್ಯಾಸ ಕ್ರಮ :-

೧. ಮೊದಲು ತಡಾಸನದಲ್ಲಿ ನಿಲ್ಲಬೇಕು. ಬಳಿಕ ಕಾಲುಗಳನ್ನು ಒಂದಡಿ ಅಂತರವಿರುವಂತೆ ಅಗಲಿಸಬೇಕು.

೨. ಉಸಿರನ್ನು ಹೊರಕ್ಕೆ ಬಿಟ್ಟು, ಮುಂದಕ್ಕೆ ಬಾಗಿ, ಬಳಿಕ ಕಾಲುಗಳನ್ನು ಮಂಡಿಗಳ ಹತ್ತಿರ ಬಗ್ಗಿಸದೆಯೇ ಅಂಗೈಗಳೆರಡನ್ನು ಅಂಗಾಲುಗಳೆರಡರ ಕೆಳಗೆ ಜೋಡಿಸಲು ಕೈಗಳನ್ನು ಕೆಳಕ್ಕೆ ಚಾಚಿ, ನಿಲ್ಲಬೇಕು.

೩. ಅನಂತರ ತಲೆಯನ್ನ ಮೇಲೆತ್ತಿ, ಬೆನ್ನಿನಲ್ಲಿ ಸಾಧ್ಯವಾದಷ್ಟು ನಿಮ್ನತೆ (ತಗ್ಗು) ಉಂಟಾಗುವಂತೆ ಯತ್ನಿಸಬೇಕು. ಮಂಡಿಗಳಲ್ಲಿಯ ಬಿಗಿತನವನ್ನು ಸಡಿಲಿಸದೆ, ಈ ಸ್ಥಿತಿಯಲ್ಲಿ ಸಾಧ್ಯವಾದಷ್ಟು ಸಲ ಉಸಿರಾಟವನ್ನು ನಡೆಸಬೇಕು.

೪. ಈಗ ಉಸಿರನ್ನು ಹೊರಕ್ಕೆ ಬಿಟ್ಟು, ಮೊಣಕೈಗಳನ್ನು ಬಗ್ಗಿಸಿ, ಪಾದಗಳನ್ನು ಅಂಗೈಗಳಿಂದ ಮೇಲೆಳದು, ತಲೆಯನ್ನು ಮಂಡಿಗಳ ಮಧ್ಯೆ ಸೇರಿಸಲು ಅದನ್ನು ಅತ್ತಿತ್ತ ಅಲುಗಾಡಿಸಬೇಕು. ಈ ಭಂಗಿಯಲ್ಲಿ ಸುಮಾರು 20 ಸೆಕೆಂಡುಗಳ ಕಾಲವಿದ್ದು, ಆಗ ಸಾಮಾನ್ಯ ರೀತಿಯಲ್ಲಿ ಉಸಿರಾಟ ನಡೆಸಬೇಕು.

೫. ಆ ಬಳಿಕ ಉಸಿರನ್ನು ಒಳಕ್ಕೆಳೆದು, ತಲೆಯನ್ನು ಮೇಲೆತ್ತಿ, ತಲೆಯನ್ನು ನೇರವಾಗಿ ಎತ್ತಿ ನಿಲ್ಲಿಸಬೇಕು. ಈಗಲೂ ಎರಡು ಸಲ ಶ್ವಾಸೋಚ್ಛಾಸನಗಳನ್ನು ಸಾಮಾನ್ಯ ರೀತಿಯಲ್ಲಿ ನಡೆಸಬೇಕು.

೬.ಕೊನೆಯಲ್ಲಿ, ಶ್ವಾಸವನ್ನು ಒಳಕ್ಕೆಳೆದು, ʼತಾಡಾಸನʼಕ್ಕೆ ಹಿಂದಿರುಗಿ ನಿಲ್ಲಬೇಕು.

ಪಾದಾಂಗುಷ್ಟಾಸನ ಮತ್ತು ಪಾದಹಸ್ತಾಸನಗಳ ಅಭ್ಯಾಸದಿಂದಾಗುವ ಪರಿಣಾಮಗಳು :-

ಈ ಆಸನಗಳಿಂದ ಕಿಬ್ಬೊಟ್ಟೆಯೊಳಗಿನ ಅಂಗಗಳು ಹುರುಪುಗೊಂಡು, ಜೀರ್ಣರಸಗಳ ಉತ್ಪತ್ತಿ ಹೆಚ್ಚುವುದು. ಮೂತ್ರವಲ್ಲದೆ ಪಿತ್ತಜನಕಾಂಗ ಮತ್ತು ಗುಲ್ಮಗಳ ಚಟುವಟಿಕೆಗಳು ಅಧಿಕವಾಗುತ್ತದೆ. ಈ ಆಸನಭ್ಯಾಸದ ಪರಿಣಾಮವಾಗಿ ಹೊಟ್ಟೆ ಉಬ್ಬರ, ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲದ್ರವ (Gastric juice) ಇವುಗಳಿಂದ ಪೀಡಿತರಾದವರು ಈ ಬೇನೆಯಿಂದ ಪಾರಾಗುವರು.

ಬೆನ್ನಿನಲ್ಲಿ ನಿಮ್ನತೆಯುಂಟುಮಾಡುವ ಅಭ್ಯಾಸದಿಂದ, ಜಾರಿಬಿದ್ದ ಬೆನ್ನು ಮೂಳೆಯ ದುಂಡುಬಿಲ್ಲೆಗಳು ಸ್ವಸ್ಥಾನದಲ್ಲಿ ನಿಲ್ಲಲು ಅನುಕೂಲಿಸುತ್ತದೆ. ಬೆನ್ನುಮೂಳೆಯಲ್ಲಿ ಇಂಥ ಸ್ಥಾನ ಪಲ್ಲಟದಿಂದಾಗುವ ಬಿಲ್ಲೆಗಳುಳ್ಳವರು, ಮಂಡಿಗಳ ನಡುವೆ ತಲೆಯನ್ನು ಸೇರಿಸುವ ಆಸನಭ್ಯಾಸದಲ್ಲಿ ತೊಡಗಬಾರದು. ಈ ಗ್ರಂಥಕರ್ತರು, ಸ್ಥಳಪಲ್ಲಟವಾಗಿ ಜಾರಿದ ಬೆನ್ನುಮೂಳೆಯ ದುಂಡು ಬಿಲ್ಲೆಗಳುಳ್ಳ ಅವರ ವಿಷಯದಲ್ಲಿ ಬೆನ್ನನ್ನು ನಿಮ್ನಾಮಾಡುವ ಅಭ್ಯಾಸ ಪ್ರಯೋಗ ನಡೆಸಿ, ಅವರಿಗೆ ಉತ್ತಮಫಲವನ್ನು ದೊರಕಿಸುವುದುಂಟು. ಆದರೆ ಈ ಭಂಗಿಯ ಅಭ್ಯಾಸದಲ್ಲಿ ತೊಡಗಲೆಳೆಸುವವರು, ಇದರಲ್ಲಿ ಪರಿಣಿತಿಯನ್ನು ಪಡೆದು ಗುರುಗಳ ಮಾರ್ಗದರ್ಶನವನ್ನು ಪಡೆಯಬೇಕಾದದ್ದು ಅತ್ಯಗತ್ಯ. ಏಕೆಂದರೆ ಬೆನ್ನಿನ ಭಾಗದಲ್ಲಿ ವಿಧವಾದ ನಿಮ್ನತೆಯನ್ನು ತತ್ ಕ್ಷಣ ಸಾಧಿಸಲು ಬಲು ಕಷ್ಟ. ಈ ಭಂಗಿಯ ಅಭ್ಯಾಸಕ್ಕೆ ತೊಡಗುವ ಮುನ್ನ ಇದಕ್ಕಿಂತಲೂ ಸರಳವಾದ ಅಭ್ಯಾಸಗಳಲ್ಲಿ ನೈಪುಣ್ಯತೆಯನ್ನು ಪಡೆದಿರಬೇಕು.

ಹಿಂದಿನ ಲೇಖನಹುಣಸೆ ಹಣ್ಣು (TAMRIND)
ಮುಂದಿನ ಲೇಖನಹಾಸ್ಯ