ಮನೆ ಸುದ್ದಿ ಜಾಲ ಪ್ರಧಾನಿ ಮೋದಿ ಕಾಶ್ಮೀರ ಭೇಟಿಗೆ ಕ್ಯಾತೆ ತೆಗೆದ ಪಾಕಿಸ್ತಾನ

ಪ್ರಧಾನಿ ಮೋದಿ ಕಾಶ್ಮೀರ ಭೇಟಿಗೆ ಕ್ಯಾತೆ ತೆಗೆದ ಪಾಕಿಸ್ತಾನ

0

ಇಸ್ಲಾಮಾಬಾದ್ (Islamabad )-ಭಾರತದ ಪ್ರಧಾನಿ (PM) ನರೇಂದ್ರ ಮೋದಿ (Narendra Modi) ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ವಿಚಾರವಾಗಿ ಪಾಕಿಸ್ತಾನ ಸರ್ಕಾರ (Pakistan government) ಮತ್ತೆ ಕ್ಯಾತೆ ತೆಗೆದಿದೆ.

ಪ್ರಧಾನಿ ನರೇಂದ್ರ ಮೋದಿಯವರ ಕಾಶ್ಮೀರ ಭೇಟಿ ಮತ್ತು ಚೆನಾಬ್ ನದಿಯಲ್ಲಿ ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿರುವದನ್ನು ಪಾಕಿಸ್ತಾನ ವಿರೋಧಿಸಿದ್ದು, ಇದು ಸಿಂಧೂ ಜಲ ಒಪ್ಪಂದದ ನೇರ ಉಲ್ಲಂಘನೆ ಎಂದು ಹೇಳಿಕೊಂಡಿದೆ.

ಪ್ರಧಾನಿ ಮೋದಿಯವರ ಕಣಿವೆ ಭೇಟಿಯನ್ನು ಕಣಿವೆಯಲ್ಲಿ ನಕಲಿ ಸಹಜತೆಯನ್ನು ತೋರಿಸಲು ಮತ್ತೊಂದು ತಂತ್ರ ಎಂದು ಬಣ್ಣಿಸಿದೆ.

ಈ ಕುರಿತು ಪಾಕ್ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, 5 ಆಗಸ್ಟ್ 2019 ರಿಂದ, ಕಾಶ್ಮೀರದಲ್ಲಿನ ನಿಜವಾದ ಆಧಾರವಾಗಿರುವ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಭಾರತವು ಇಂತಹ ಹತಾಶ ಪ್ರಯತ್ನಗಳನ್ನು ಮಾಡುತ್ತಿದ್ದು ಇದನ್ನು ಅಂತಾರಾಷ್ಟ್ರೀಯ ಸಮುದಾಯವು ಗಮನಿಸುತ್ತಿದೆ ಎಂದು ಹೇಳಿದೆ.

2019 ರ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪ್ರಧಾನಿ ಮೋದಿ ಅವರು ಭಾನುವಾರ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಈ ಯೋಜನೆಯಡಿಯಲ್ಲಿ ಕಿಶ್ತ್ವಾರ್‌ನ ಚೆನಾಬ್ ನದಿಯಲ್ಲಿ ಸುಮಾರು 5,300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿರುವ 850 ಎಂಡ್ಲ್ಯು ಸೌಲಭ್ಯ ಮತ್ತು 4,500 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅದೇ ನದಿಯಲ್ಲಿ 540 ಎಂಡ್ಲ್ಯು ಕ್ವಾರ್ ಜಲವಿದ್ಯುತ್ ಯೋಜನೆಗೆ ನಿರ್ಮಿಸಲಾಗುವುದು ಎನ್ನಲಾಗಿದೆ.