ಮನೆ ಕ್ರೀಡೆ ಪಾಕ್’ಗೆ ಮುಖಭಂಗ: ಇಂಗ್ಲೆಂಡ್’ಗೆ ಐತಿಹಾಸಿಕ ಟೆಸ್ಟ್ ಸರಣಿ ಜಯ!

ಪಾಕ್’ಗೆ ಮುಖಭಂಗ: ಇಂಗ್ಲೆಂಡ್’ಗೆ ಐತಿಹಾಸಿಕ ಟೆಸ್ಟ್ ಸರಣಿ ಜಯ!

0

ಕರಾಚಿ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಪ್ರವಾಸಿ ಇಂಗ್ಲೆಂಡ್‌ ತಂಡ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆಯಿತು.

ಆ ಮೂಲಕ ಪಾಕಿಸ್ತಾನ ನೆಲದಲ್ಲಿ ಟೆಸ್ಟ್‌ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಮೊದಲ ಪ್ರವಾಸಿ ತಂಡ ಎಂಬ ಸಾಧನೆಗೆ ಇಂಗ್ಲೆಂಡ್‌ ಭಾಜನವಾಯಿತು.

ಗೆಲುವಿಗೆ 167 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಗೆ ನಾಲ್ಕನೇ ದಿನದಾಟದಲ್ಲಿ 55 ರನ್ ಅಗತ್ಯವಿತ್ತು. ಇದನ್ನು ಕೇವಲ 12 ಓವರ್ ನಲ್ಲಿ ಗುರಿ ತಲುಪಿತು. ಬೆನ್ ಡಕೆಟ್ 82 ರನ್ ಗಳಿಸಿ ಅಜೇಯರಾಗುಳಿದರು.

ಪಾಕಿಸ್ಥಾನವು ಮೊದಲ ಇನ್ನಿಂಗ್ಸ್ ನಲ್ಲಿ 304 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್ ನಲ್ಲಿ 216 ರನ್ ಮಾಡಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 354 ರನ್ ಮಾಡಿದರೆ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು 170 ರನ್ ಮಾಡಿ ಜಯ ಗಳಿಸಿತು.

23 ಗೆಲುವು ಕಂಡಿದ್ದ ಕರಾಚಿ ಅಂಗಳದಲ್ಲೂ ಪಾಕಿಸ್ಥಾನಕ್ಕೆ ಈ ಬಾರಿ ಸೋಲು ತಪ್ಪಿಸಲಾಗಲಿಲ್ಲ. ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಪಾಕಿಸ್ಥಾನ ಸೋಲನುಭವಿಸಿತು. ಇದರೊಂದಿಗೆ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಮತ್ತೊಂದು ಟೆಸ್ಟ್ ಸರಣಿ ಗೆದ್ದುಕೊಂಡಿತು.

ಮೂರು ಪಂದ್ಯಗಳಲ್ಲಿ ಶತಕ ಬಾರಿಸಿದ ಇಂಗ್ಲೆಂಡ್ ನ ಹ್ಯಾರಿ ಬ್ರೂಕ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.