ಸೃಷ್ಟಿಕರ್ತನಾದ ಪರಶಿವನ್ನು ಜಗತ್ತಿನ ಕಲ್ಯಾಣಕ್ಕೋಸ್ಕರ ಪಾರ್ವತಾದೇವಿಗೆ ಸಾಮುದ್ರಕ ಶಾಸ್ತ್ರವನ್ನು, ಅದರ ಲಕ್ಷಣವನ್ನು ಸವಿಸ್ತಾರವಾಗಿ ಹೇಳಿರುವನು. ಆದರೆ ನಾವಿಲ್ಲಿ ಅದರ ಸಂಕ್ಷಿಪ್ತ ಸಾರವನ್ನು ಎಲ್ಲರಿಗೂ ತಿಳಿಯುವಂತೆ ಸುಲಭ ಶೈಲಿಯಲ್ಲಿ ಹೇಳಿದ್ದೇವೆ. ಹಸ್ತ ಸಾಮುದ್ರಿಕ ಶಾಸ್ತ್ರಜ್ಞನು ಗಂಡಸರ ಬಲಗೈಯನ್ನೂ, ಹೆಣ್ಣು ಮಕ್ಕಳ ಎಡಗೈಯನ್ನು ನೋಡತಕ್ಕದ್ದು.ಅಂಗೈಕೆಳಗೆ ಅಡ್ಡ ಇರುವ ಗೆರೆಗಳು ಕಂಕಣ ರೇಖೆ, ಇವು ಎರಡು ಇದ್ದರೆ ರಾಜಭೋಗಿಯು 3 ಇದ್ದರೆ ಸಾಧಾರಣ ಸುಖಿಯು ಸ್ತ್ರೀ ಲಂಪಟನೂ ಇರುವನು ನಾಲ್ಕು ಇದ್ದರೆ ರಾಜಭೋಗಿಯೂ ಆಗುತ್ತಾನೆ. ಕಿರಿಬೆರಳಿನ ಕೆಳ ಭಾಗದಲ್ಲಿ ಸ್ವಲ್ಪ ದೂರದಲ್ಲಿರುವ ದೊಡ್ಡ ಅಡ್ಡ ರೇಖೆಯು ಆಯುಷ್ಯ ಹಿರೇಕೆಯು ಈ ಗೆರೆಯು ಆಯುಷ್ಯ ರೇಖೆಯು. ಈ ಗೆರೆಯು ಹೆಬ್ಬರಳಿನ ಹತ್ತಿರವಿರುವ ಬೆರಳನ್ನು ದಾಟಿದ್ದರೆ ನೂರು ವರುಷ ಆಯುಷವೆಂದು ತಿಳಿಯಬೇಕು.ಆದರೆ,
ಈ ಗೆರೆಯು ಯಾವ ಬೆರಳಿನವರೆಗೆ ಹೋಗಿರುವುದೋ ನೋಡಿ ಬೆರಳಿನ 25 ವರ್ಷಗಳಂತೆ ಕಿರುಬೆರಳಿನಿಂದ ಎಣಿಕೆ ಮಾಡಲು ಎಷ್ಟು ವರ್ಷಗಳಾಗುತ್ತವೆಯೋ, ಅಷ್ಟು ವರ್ಷ ಆಯುಷ್ಯವೆಂದು ತಿಳಿಯತಕ್ಕದ್ದು. ಈ ಗೆರೆಯ ಮಧ್ಯದಲ್ಲಿ ಕೆಲವು ಅಡ್ಡ ರೇಖೆಗಳು ಒಡೆದಿದ್ದರೆ ಅವು ಕಂಟಕಗಳೆಂದು ತಿಳಿಯಬೇಕು..ಈ ಆಯುಷ್ಯ ರೇಖೆಯ ಕೆಳಗೆ ಇರುವ ದೊಡ್ಡ ರೇಖೆಯೇ ಸ್ತ್ರೀ ರೇಖೆಯು ಹೆಬ್ಬೆರಳಿನ ಕೆಳಗೆ ಒಳ ಮಗ್ಗಲಿಗೆ ಮಣಿಕಟ್ಟಿನ ಸ್ಥಳದಿಂದ ಹುಟ್ಟಿ ಮೇಲಕ್ಕೆ ಹೋಗಿ ಸ್ತ್ರೀ ರೇಖೆ ಕೂಡಿರುವ ರೇಖೆಯು, ಪುರುಷ ರೇಖೆಯು ಈ ಸ್ತ್ರೀ ಪುರುಷ ರೇಖೆಗಳೆರಡೂ ತರ್ಜಿನೀ ಹೆಬ್ಬೆರಳುಗಳ ನಡುವೆ ಕೂಡಿರುತ್ತವೆ. ಹೀಗೆ ಈ ಎರಡೂ ಗೆರೆಗಳು ಕೂಡಿದ್ದರೆ ಗಂಡ ಹೆಂಡತಿ ಪರಸ್ಪರ ಪ್ರೀತಿಯಿಂದ ಇರುವರು. ನೀ ಎರಡೂ ರೇಖೆಗಳು ಕೂಡಿ ರದಿದ್ದರೆ ಪ್ರೀತಿ ಕಡಿಮೆ. ಅಲ್ಲದೆ ಮಧ್ಯದಲ್ಲಿಯೇ ವಿಯೋಗವಾದರೂ ಆಗಬಹುದು. ಪುರುಷ ರೇಖೆಗಳು ಮುಂದೆ ಹೋಗದಿದ್ದರೆ ಗಂಡು ಸಂತಾನ ಹೆಚ್ಚಿಂತಲೂ, ಸ್ತ್ರೀ ರೇಖೆ ಮುಂದೆ ಹೋಗಿದ್ದರೆ ಹೆಣ್ಣು ಸಂತಾನ ಹೆಚ್ಚಿಂತಲೂ,ಇವೆರಡೂ ಗೆರೆಗಳು ಕೂಡಿ ಮುಂದೆ ಕಾಣದಿದ್ದರೆ ಯಾವ ಕಾಣದಿದ್ದರೆ ಯಾವ ಸಂತಾನವಿಲ್ಲ ವೆಂತಲೂ ತಿಳಿದುಕೊಳ್ಳಬೇಕು.ಒಂದು ವೇಳೆ ಸಂತಾನ ಪ್ರಾಪ್ತವಾದರೂ ಅವು ಬಹಳ ಕಾಲ ಬದುಕಲಾರರು ಎಂದು ತಿಳಿಯಬೇಕು ಅಂಗೈಯಲ್ಲಿ ಆಯುಷ್ಯ ಹಾಗೂ ಸ್ತ್ರೀ ಪುರುಷ ರೇಖೆಗಳು ಸ್ಪಷ್ಟವಾಗಿದ್ದರೆ ಸಂಪತ್ತುಂಟಾಗುವುದು. ಚಿತ್ರ ಪತ್ರಾರಾಗಿ ಅಡ್ಡ ದಿಡ್ಡಿ ಗೆರೆಗಳಿದ್ದರೆ ದುಃಖಿಯಾಗುವನು. ಅಂಗೈ ಕೆಳಭಾಗದಲ್ಲಿ ಮಣಿಕಟ್ಟಿನಿಂದ ಹುಟ್ಟಿ ಸ್ತ್ರೀ ಪುರುಷ ರೇಖೆಗಳ ನಡುವೆ ಹಾಯ್ದು ಮೆಲ್ಲಕ್ಕೆ ಆಯುಷ್ಯ ರೇಖೆಯವರೆಗೆ ಹೋಗಿರುವ ದೊಡ್ಡ ಉದ್ದಗೆರೆಯು ಧನ ರೇಖೆಯು. ಈ ಗೆರೆಯು ಸ್ಪಷ್ಟವಾಗಿದ್ದಷ್ಟೂ ಉತ್ತಮ ಈತನು ವಿಶೇಷ ಧನ ಸಂಪತ್ತು ಗಳಿಸುವನೆಂದು ಅರ್ಥ ಈ ಗೆರೆಗಳು ಅಡ್ಡಗೆರೆಗಳು ಇದ್ದರೆ ಹಣವು ಸಂಪತ್ತು ಆಗಾಗ್ಗೆ ನಷ್ಟವಾಗುತ್ತಿರುವುದು ಖರ್ಚಾಗುತ್ತಿರುವದು ಸಂಭವಿಸುತ್ತದೆ ಮತ್ತು ಈ ರೇಖೆಯಲ್ಲಿ ಕತ್ತರಿ ಆಕಾರದ ಗೆರೆಗಳಿದ್ದರೆ ಎಷ್ಟು ಸಂಪತ್ತುಗಳಿಸಿದರು ಈತನಲ್ಲಿ ದುಡ್ಡು ನಿಲ್ಲುವುದಿಲ್ಲವೆಂದು ತಿಳಿಯಬೇಕು. ಇನ್ನು ಆಯುಷ್ಯ ರೇಖೆಯ ಮೇಲೆ ಉಗುರು ಬೆರಳಿನ ಕೆಳಗೆ ಇರುವ ಗೆರೆಯು ವಿದ್ಯಾರೇಖೆಯು ಇದು ಎಷ್ಟು ಸ್ವಚ್ಛ ವಿರುವದೋ ಅಷ್ಟು ಉತ್ತಮ ವಿದ್ಯಾವಂತನಾಗುವನು. ಅಲ್ಲದೆ ಈ ರೇಖೆಗೆ ಎಷು ಟಿಸಿಲುಗಳು ಒಡೆದಿರುವವೋ ಅಷ್ಟು ವಿದ್ಯೆ ಗಳಲ್ಲಿ ಪಾರಂಗತನಾಗಿ ಇರುವನು. ಹೀಗೆ ವಿದ್ಯಾ ರೇಖೆಗೆ ಶಾಖೆಗಳು ಇಲ್ಲದ ಪಕ್ಷದಲ್ಲಿ ವಿದ್ಯೆ ಕಡಿಮೆಯೆಂದೇ ಹೇಳಬೇಕಾಗುವುದು. ಕಿರುಬೆರಳಿನ ಕೆಳಗೆ ಅಂಗೈ ಎಡಮಗ್ಗಲಿನ ಹೊರ ಭಾಗದಲ್ಲಿ ಆಯುಷ್ಯ ರೇಖೆಯ ಮೇಲೆ ಇರತಕ್ಕ ಅಡ್ಡ ಚಿಕ್ಕ ಗೆರೆಗಳು ಪತ್ನಿ ರೇಖೆಗಳು ಈ ಗೆರೆಗಳು ಎಷ್ಟು ಇರುವವೋ ಅಷ್ಟು ಮಂದಿ ಹೆಂಡತಿಯರು ಇಲ್ಲವೇ ನಿಶ್ಚಯಮಾಡಿ ಬಿಡೋಣವು ಅಥವಾ ಅಷ್ಟು ಸ್ತ್ರೀಯರ ಸಂಗ ಸುಖವಿದೆಯೆಂದು ತಿಳಿಯಬಹುದು.
ಬೆರಳಿನ ಹೊರಭಾಗದ ಕೆಳ ಮಗ್ಗಲಿನಲ್ಲಿ ಅಡ್ಡ ಇರುವ ರೇಖೆಗಳು ಸಂತಾನ ರೇಖೆಗಳು. ತುಂಡು ತುಂಡಾದಂಥವು ಹೆಣ್ಣು ಮಕ್ಕಳ ಸಂಖ್ಯೆಯನ್ನು, ಜಡೆಯಂತೆ ಉದ್ದವಾಗಿರತಕ್ಕವು ಗಂಡು.ಮಕ್ಕಳ ಸಂಖ್ಯೆಯನ್ನೂ ತಿಳಿಸುತ್ತೇವೆ ಗೆರೆಗಳು ಇದ್ದಷ್ಟು ಮಕ್ಕಳ ಸಂಖ್ಯೆಯನ್ನು ತಿಳಿಸುತ್ತೇವೆ ಅದರಲ್ಲಿ ಸ್ಪಷ್ಟವಾಗಿ ಇದ್ದ ರೇಖೆಗಳಷ್ಟು ಸಂತಾನ ಸ್ಥಿರವೆಂತಲೂ, ಚಿತ್ತಾಗಿ ಮಬ್ಬಾಗಿ ಇರುವಷ್ಟು ರೇಖೆಗಳ ಸಂಖ್ಯೆಯಷ್ಟು ಸಂತಾನ ನಷ್ಟವೆಂತಲೂ ತಿಳಿಯಬೇಕು.ಹೆಬ್ಬೆರಳಿನ ಮೇಲುಗಣ್ಣಿಯಲ್ಲಿ ಗೋದಿಯ ಕಾಳಿನ ಹಾಗೆ ಎರಡು ಗೆರೆಗಳು ಕೂಡಿರುವುದೇ ಸಂಪತ್ತು ರೇಖೆಯು. ಈ ಗೆರೆಯು ಸ್ಪಷ್ಟವಾಗಿದ್ದಷ್ಟು ಅನ್ನ ಹಣ ಸಂಪದಭಿವೃದ್ಧಿಯು ಈತನು ಸದಾ ಮೃಷ್ಟಾನ್ನ ಭೋಜನ ಸುಖಿಯು ಆಗುವನು ಎಲ್ಲ ಬೆರಳುಗಳು ಉದ್ದವಾಗಿದ್ದರೆ ಭೋಗಶಾಲಿಯು.ಬೆರಳುಗಳನ್ನು ಒಂದಕ್ಕೊಂದು ಜೋಡಿಸಿದರೆ ಬಿರಳುಗಳ ನಡುವೆ ಸಂದುಗಳು ಉಳಿಯದಿದ್ದರೆ ಧನವಂತನಾಗುತ್ತಾನೆ ಸಂದುಗಳು ಉಳಿದರೆ ದುಂದುಗಾರ ನಾಗುತ್ತಾನೆ ಈತನಲ್ಲಿ ಸಂಪತ್ತು ವೃದ್ದಿಯಾಗುವುದಿಲ್ಲ. ಒಂದು ಕೈ ಐದು ಬೆರಳುಗಳಲ್ಲಿ ಒಂದು ಚಕ್ರ ವಿದ್ದರೆ ಯಾವತ್ತೂ ಸೌಖ್ಯದಿಂದಿದ್ದು ಭೋಗಿಯಾಗುವನು. ಎರಡು ಚಕ್ರವಿದ್ದರೆ ಸರ್ವರಿಂದಲೂ ಯಾವಾಗಲೂ ಮುರ್ಯಾದೆ ಹೋದಂತಕ್ಕವಾನಾಗಿರುವನು ಮೂರು ಚಕ್ರವಿದ್ದರೆ ಲೋಕ ಸಂಚಾರಿಯು.ಪ್ರಯಾಣದಲ್ಲಿ ಸೌಖ್ಯ ಸುಖ ಅನುಭವಿಸುವನು. ನಾಲ್ಕು ಚಕ್ರಗಳುಳ್ಳವನು ಪಂಡಿತನು, ಚತುರ ಗುಣವುಳ್ಳವನ್ನು ಬುದ್ಧಿಶಾಲಿಯೂ ಆಗುವನು. 5 ಚಕ್ರಗಳುಳ್ಳವನು ಸನ್ಯಾಸಿಯು ಆಗುತ್ತಾನೆಂದು ತಿಳಿಯುವದು.
ಹಸ್ತದಲ್ಲಿ ಆನೆ, ಕುದುರೆ, ಪಲ್ಲಕ್ಕಿ, ಛತ್ರ, ಚಾಮರ, ವಾಹನ, ಧ್ವಜ,ತೇರು, ತೋರಣ, ಸಿಂಹಾಸನ, ಖಡ್ಗ ಇತ್ಯಾದಿ. ಚಿಹ್ನೆಗಳಿದ್ದರೆ ರಾಜಲಕ್ಷಣವೆಂದೂ ಆಯುಧ ಬಿಲ್ಲು ಮುಂತಾದ ಚಿಹ್ನೆಗಳಿದ್ದರೆ ವೀರ ಸಾಹಸಿಯೆಂದೂ ಮತ್ಸ್ಯ, ಆಮೆ, ಕಪ್ಪೆಗಳಿದ್ದರೆ ಭಾಗ್ಯಶಾಲಿಯೆಂದೂ ತಕ್ಕಡಿಯ ಚಿಹ್ನೆಯಿದ್ದರೆ ವ್ಯಾಪಾರ ವ್ಯವಹಾರದಲ್ಲಿ ಕುಶಲತೆ ಯುಳ್ಳವನೆಂದೂ ನೇಗಿಲು, ಚಕ್ಕಡಿ ಚಿಹ್ನೆಗಳಿದ್ದರೆ ಒಕ್ಕಲುತನ ಚೆನ್ನಾಗಿ ನಡೆಸುವವನೆಂತಲೂ ತಿಳಿಯಬೇಕು. ಕೆರೆ ಬಾವಿ ಕೋಟೆ ಕೊತ್ತಲಗಳ ಚಿಹ್ನೆಗಳಿದ್ದರೆ ಬಡತನವನ್ನು ಅನುಭವಿಸುವವನೆಂದೂ, ಪುಸ್ತಕ ಚಿತ್ರ ಮುಂತಾದ ಚಿಹ್ನೆಗಳಿದ್ದರೆ ಪಾಂಡಿತ್ಯ ಪೂರ್ವ ಲಕ್ಷಣಗಳು ಳ್ಳವನೆಂದೂ, ತ್ರಿಶೂಲ ದಂಡ, ಕಮಂಡಗಳು ಮುಂತಾದ ಚಿಹ್ನೆಗಳಿದ್ದರೆ ಭಿಕ್ಷುಕ ಇಲ್ಲವೇ ಜೋಗಿ ಎಂದು ತಿಳಿಯಬೇಕು. ಅಂಗೈಯು ವಿಶಾಲವಾಗಿದ್ದು ಕಾಂತಿಯುಳ್ಳವುಗಳಾಗಿದ್ದರೆ ಆತನು ದೀರ್ಘಾಯುಷಿಯು ಹಾಗೂ ಒಳ್ಳೆ ಸೌಖ್ಯವುಳ್ಳವನುನಮ ಆಗುವನು. ಹಸ್ತವು ತಾಗ್ಗಾಗಿ ಒಣಗಿದ್ದಂತಿದ್ದರೆ ದರಿದ್ರನೂ ಆಗುವನು ಹಸ್ತವು ಉಬ್ಬಾಗಿ ಮಾಂಸ ಭರಿತವಾಗಿ ಮೃದುವಾಗಿದ್ದರೆ ಧರ್ಮದಲ್ಲಿ ಆಸಕ್ತಿಯುಳ್ಳವನ್ನೂ ಧರ್ಮಷ್ಠನೂ. ಆರೋಗ್ಯವಂತನು ಆರೋಗ್ಯವಂತನೂ ಆಗುವನು. ತಲೆಯು ಹಾಗೂ ಹಣೆಯ ದೊಡ್ಡದಿದ್ದರೆ ವಿದ್ವಾಂಸನೂ ದಶಾವಂತನೂ ಆಗುವನು.