ಮನೆ ರಾಜಕೀಯ ಪಂಚಮಸಾಲಿ ಸಮುದಾಯ ಕಡೆಗಣನೆ: ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸಲಾಗುವುದು- ಬಸವರಾಜ ಬೊಮ್ಮಾಯಿ

ಪಂಚಮಸಾಲಿ ಸಮುದಾಯ ಕಡೆಗಣನೆ: ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸಲಾಗುವುದು- ಬಸವರಾಜ ಬೊಮ್ಮಾಯಿ

0

ಗದಗ: ಬಿಜೆಪಿ ಪಂಚಮಸಾಲಿ ಸಮುದಾಯವನ್ನು ಕಡೆಗಣಿಸುತ್ತಿದೆ ಎಂದಿರುವ ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸ್ವಾಮೀಜಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Join Our Whatsapp Group

ಗದಗದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಶ್ರೀಗಳು ಸಮಾಜದ ಬಗ್ಗೆ ಕಳಕಳಿಯಿಂದ ಮಾತನಾಡಿದ್ದಾರೆ ಎಂದರು. ಇದೇ ವೇಳೆ, ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳು ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ, ಆ ಬಗ್ಗೆ ಮಾಹಿತಿ ಇಲ್ಲ ಎಂದರು.

ನನಗೆ ರಾಜ್ಯದ ಹಳ್ಳಿಹಳ್ಳಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತಿದೆ. ನನ್ನಷ್ಟು ಹಳ್ಳಿ ತಿರುಗುವವರು ಯಾರೂ ಇಲ್ಲ. ನನಗೆ ಹಳ್ಳಿಗಳ ಸಂಪರ್ಕ ಇದೆ. ಸಮಯ ವ್ಯರ್ಥ ಮಾಡದೇ ಪ್ರಚಾರ ಮಾಡುತ್ತಿದ್ದೇನೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಹಳ್ಳಿಹಳ್ಳಿಗಳಲ್ಲಿ ಪ್ರಚಾರವಾಗುತ್ತಿದೆ ಎಂದು ತಿಳಿಸಿದರು.

ಹಿಂದಿನ ಲೇಖನಎಳನೀರು ಸೇವಿಸಿ ಹಲವು ಮಂದಿ ಅಸ್ವಸ್ಥರಾದ ಪ್ರಕರಣ: ಮಂಗಳೂರಿನ ಬೊಂಡ ಫ್ಯಾಕ್ಟರಿ ಬಂದ್ ​ಗೆ ಆದೇಶ
ಮುಂದಿನ ಲೇಖನಕನ್ನಡದಲ್ಲಿ ತೆರೆಕಾಣಲಿದೆ ‘ಲವ್‌ ಯು ಶಂಕರ್‌’