ಮನೆ ಮನೆ ಮದ್ದು ಪಪ್ಪಾಯ

ಪಪ್ಪಾಯ

0

 ಉಪಯುಕ್ತ ಭಾಗಗಳು

ಎಲೆ, ಹಣ್ಣು, ಬೀಜ ಮತ್ತು ಅಂಟುದ್ರವ.

Join Our Whatsapp Group

ಪೋಷಕಾಂಶಗಳು (100 ಗ್ರಾಂ ಹಣ್ಣಿನಲ್ಲಿ )

ತೇವಾಂಶ    — 92 ಗ್ರಾಂ

ಸಸಾರಜನಕ —0.6ಗ್ರಾಂ

ಕೊಬ್ಬು  — 0.1ಗ್ರಾಂ

 ಖನಿಜಾಂಶ  — 0.5ಗ್ರಾಂ

ಶರ್ಕರಪಿಷ್ಟಗಳು — 7.2ಗ್ರಾಂ

ನಾರು — 0.8ಗ್ರಾಂ

ಶಕ್ತಿ   — 72ಕ್ಯಾಲೊರಿ

ಸುಣ್ಣ —17మి. గ్రాం

ಕಬ್ಬಿಣ —0.5మి. గ్రాం

ಥಯಾಮಿನ್ —0.04

ರೈಬೋಪ್ಲೇವಿನ್ —0.25 ಮಿ. ಗ್ರಾಂ

ನಯಾಸಿನ್ —0.2మి. గ్రాం

‘ಸಿ’ ಜೀವಸತ್ವ —57ಮಿ. ಗ್ರಾಂ

‘ಎ’ ಜೀವಸತ್ವ —2500ఐయు

 ಔಷಧೀಯ ಗುಣಗಳು

೦ ಪಪ್ಪಾಯ ಹಣ್ಣು ಜೀರ್ಣಕಾರಿಯಾಗಿದ್ದು ಜೀರ್ಣಾಂಗದ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ಇದರಲ್ಲಿರುವ ಪೆಪೇನ್ ಆಹಾರದಲ್ಲಿರುವ ಪ್ರೋಟೀನ್ ಳನ್ನು ಜೀರ್ಣಿಸುವಲ್ಲಿ ಸಹಕಾರಿಯಾಗಿದೆ. ಈ ಅಂಶವು ಜೀರ್ಣಾಂಗಗಳು ಉತ್ಪಾದಿಸುವ ವೆಪ್ಪಿನ್ ಮತ್ತು ಟ್ರಿಪ್ಟಿನ್ ಎಂಬ ರಸದೂತಗಳ ಕಾರ್ಯವನ್ನು ತಾನೇ ನಿರ್ವಹಿಸಿ ಜೀರ್ಣ ಗೊಳಿಸುವ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಅಲ್ಲದೇ ಜೀರ್ಣಾಂಗದಲ್ಲಿ ತಲೆದೋರುವ ಹಾನಿಕಾರಕ ಕ್ರಿಮಿಗಳನ್ನು ನಾಶಗೊಳಿಸುವ ಕಾರ್ಯವನ್ನು ಸಹ ಮಾಡುತ್ತದೆ.

೨ ವಿಲಮಿನ್ ‘ಎ’ ಅಧಿಕವಾಗಿರುವುದರಿಂದ ಪಪ್ಪಾಯ ಸೇವನೆಯು ಕಣ್ಣಿನ ಆರೋಗ್ಯಕ್ಕೆ ಸಹಕಾರಿ ಇರುಳುಗಣ್ಣು ನಿವಾರಣೆಗೆ ಸಹಾಯಕಾರಿ.

, 3. ಗಾಯಗಳಾದಾಗ ಪಪ್ಪಾಯ ಹಣ್ಣಿನ ತಿರುಳನ್ನು ಲೇಪಿಸಿದಲ್ಲಿ ಗಾಯ ಬೇಗನೇ ಮಾಡುತ್ತದೆ. ಲೇಪಿಸುವುದು ಮಾತ್ರವಲ್ಲ ಸೇವಿಸುವುದೂ ಉತ್ತಮ.

4. ಮೂಲವ್ಯಾಧಿಯಿಂದ ಬಳಲುವವರಿಗೆ ಪಪ್ಪಾಯ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗಿ ನೋವು, ಉರಿ ಕಡಿಮೆಯಾಗುತ್ತದೆ.

5.ಪದೇ ಪದೇ ಗರ್ಭಪಾತವಾಗುವ ಸ್ತ್ರೀಯರು ಗರ್ಭಧರಿಸಿದ ಆರಂಭದ ದಿನಗಳಲ್ಲಿ ಪಪ್ಪಾಯ ಹಣ್ಣಿನ ಮತ್ತು ಕಾಯಿಯ ಸೇವನೆ ಮಾಡಬಾರದು.

6.ನರದೌರ್ಬಲ್ಯವಿರುವವರು ಮತ್ತು ಹೃದ್ರೋಗದಿಂದ ಬಳಲುವವರಿಗೆ ಪಪ್ಪಾಯ ಸೇವನೆ ಉತ್ತಮವಾದುದು

.7.ಬಾಣಂತಿಯರು ಕಾಯಿಯ ಪಲ್ಯ ಸೇವಿಸಿದಲ್ಲಿ ಎದೆಹಾಲು ಹೆಚ್ಚುತ್ತದೆ.

8.ಕಾಯಿಯ ರಸವನ್ನು ಬಾಯಿಹುಣ್ಣಿಗೆ ಲೇಪಿಸುವುದರಿಂದ ಬೇಗನೇ ಮಾಯುತ್ತದೆ.

9. ಭೀದಿಯಿದ್ದಲ್ಲಿ ಹಣ್ಣಿನ ರಸ ಗಂಟೆಗೊಂದು ಬಾರಿ ಕುಡಿಯುತ್ತಿದ್ದಲ್ಲಿ (4-5 ಚಮಚೆ) ನಿಯಂತ್ರಣಕ್ಕೆ ಬರುತ್ತದೆ.

10. ಹುಳಕಡ್ಡಿ ಮತ್ತು ಇತರ ಚರ್ಮರೋಗಗಳಲ್ಲಿ ಪಪ್ಪಾಯದ ಹಾಲಿನಂತಹ ಅಂಟು ಅಂಟಾದ ದ್ರವವನ್ನು ಲೇಪಿಸಬೇಕು.

11. ಮಲಬದ್ಧತೆಯಿಂದ ಬಳಲುವವರು ಪ್ರತಿದಿನ ಊಟದ ನಂತರ ಪಪ್ಪಾಯ ಸೇವನೆ ಮಾಡಬೇಕು.

12.ಊತ ಮತ್ತು ನೋವು ಇರುವ ಜಾಗಕ್ಕೆ ಪಪ್ಪಾಯ ಎಲೆಗಳನ್ನು ಬಿಸಿ ಮಾಡಿ ಕಟ್ಟಬೇಕು.

13. ಪಪ್ಪಾಯವು ಪೋಷಕಾಂಶಗಳ ಆಗರವಾಗಿರುವುದರಿಂದ ಮಕ್ಕಳಿಗೆ ನೀಡುವುದರಿಂದ ಬೆಳವಣಿಗೆ ಉತ್ತಮವಾಗಿರುವುದಲ್ಲದೇ ರೋಗ ನಿರೋಧಕಶಕ್ತಿಯೂ ಹೆಚ್ಚುತ್ತದೆ

14. ಮೊಡವೆಗಳಿಗೆ ಮತ್ತು ಗುಳ್ಳೆಗಳಿಗೆ ಪಪ್ಪಾಯ ತಿರುಳನ್ನು ಲೇಪಿಸಿದಲ್ಲಿ ಬೇಗನೇ ಮಾಯುತ್ತದೆ.

15.ಕೂದಲಿನ ಆರೋಗ್ಯಕ್ಕೆ : ಹದಿನೈದು ದಿನಗಳಿಗೊಮ್ಮೆ ಚೆನ್ನಾಗಿ ಹಣ್ಣಾಗಿರುವ ಪಪ್ಪಾಯನ್ನು ದೊಡ್ಡದಾದರೆ ಎರಡು ತುಂಡು, ಚಿಕ್ಕದಾದರೆ ನಾಲ್ಕು ತುಂಡನ್ನು ತೆಗೆದುಕೊಳ್ಳಬೇಕು. ಸಿಪ್ಪೆ, ತಿರುಳು, ಬೀಜ ಸಮೇತ ನುಣ್ಣಗೆ ಅರೆಯಬೇಕು. ಇದನ್ನು ತಲೆಗೆ ಲೇಪ ಹಾಕಿ ಅರ್ಧಗಂಟೆಯ ನಂತರ ತೊಳೆಯಬೇಕು. ಇದರಿಂದ ಕೂದಲು ಕಾಂತಿಯುಕ್ತ ಮತ್ತು ಆರೋಗ್ಯಕರವಾಗುತ್ತದೆ.

16.ಗರ್ಭಿಣಿಯರಿಗೆ : ಗರ್ಭ ಧರಿಸಿದ ಆರಂಭದ ಎರಡು ಮೂರು ತಿಂಗಳು ಪಪ್ಪಾಯ ತಿನ್ನುವುದು ಒಳ್ಳೆಯದಲ್ಲವಾದರೂ ಮೂರು ತಿಂಗಳ ನಂತರ ಒಂಭತ್ತು ತಿಂಗಳು ತುಂಬುವವರೆಗೆ ಯಾವುದೇ ಅನುಮಾನವಿಲ್ಲದೇ ಪಪ್ಪಾಯ ಸೇವನೆ ಮಾಡಬಹುದು. ಎಲ್ಲ ಬಗೆಯ ಪೋಷಕಾಂಶಗಳೂ ಇರುವುದರಿಂದ ತಾಯಿ, ಮಗುವಿನ ಆರೋಗ್ಯಕ್ಕೆಬಹಳ ಒಳ್ಳೆಯದು ನಾನು ನನ್ನ ಎರಡನೆಯ ಮಗುವಿನ ಗರ್ಭ ಧರಿಸಿದಾಗ ಹಿತ್ತಲಲ್ಲೇ ಬೆಳೆದಿದ್ದ ಪಪ್ಪಾಯವನ್ನು ಪ್ರತಿದಿನ ತಿನ್ನುತ್ತಿದ್ದ ಸಹಜ ಸುಲಭ ಹೆರಿಗೆ ಆಯಿತು ಮಗುವೂ ಆರೋಗ್ಯವಾಗಿತ್ತು.

 ಸಂಶೋಧನೆ

1. ಮಲೇಷಿಯಾದಲ್ಲಿ ನಡೆದ ಸಂಶೋಧನೆಯ ಪ್ರಕಾರ ಉಷ್ಣವಲಯದಲ್ಲಿ ಬೆಳೆಯ ಲಾಗುವ ಪಪ್ಪಾಯ ಹಣ್ಣುಗಳನ್ನು ನಾಲ್ಕು ವಾರಗಳ ಕಾಲ ಪ್ರತಿದಿನ ಸೇವಿಸಿದವರಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಶೇ. 19.2ರಷ್ಟು ಕಡಿಮೆಯಾಗಿರುವುದು ದೃಢಪಟ್ಟಿದೆ.

2. ಬ್ರೆಜಿಲ್‌ನಲ್ಲಿ ನಡೆಸಿದ ಸಂಶೋಧನೆಯೊಂದರ ಪ್ರಕಾರ ಪಪ್ಪಾಯ ಬೀಜವು ಗರ್ಭನಿರೋಧಕ ಗುಣಹೊಂದಿದೆಯೆಂದು ದೃಢಪಟ್ಟಿದೆ. ಆದ್ದರಿಂದ ಬೀಜದಿಂದ ಗರ್ಭನಿರೋಧಕ ಮಾತ್ರೆಗಳನ್ನು ತಯಾರಿಸುವತ್ತ ಗಮನಹರಿಸಿದ್ದಾರೆ.