ಮೈಸೂರು(Mysuru): ತಲಕಾಡಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಪಾತಾಳೇಶ್ವರ ದೇವಾಲಯವು ಒಂದು.
ಮೂಲಗಳ ಪ್ರಕಾರ ಈ ದೇವಾಲಯವು ತಲಕಾಡಿನಲ್ಲಿ ಗಂಗರು ನಿರ್ಮಿಸಿದ ಮೊಟ್ಟಮೊದಲ ದೇಗುಲಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.
ಪಾತಾಳೇಶ್ವರ ದೇವಾಲಯದಲ್ಲಿ ದಿನದ ವಿವಿಧ ವೇಳೆಯಲ್ಲಿ ವಿವಿಧ ಬಣ್ಣದಿಂದ ಕಾಣುವ ಶಿವಲಿಂಗವು ತನ್ನ ಅಚ್ಚರಿಯಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಈ ಶಿವಲಿಂಗವು ಬೆಳಗಿನ ಜಾವದಲ್ಲಿ ಕೆಂಪಾಗಿ ಕಾಣುತ್ತದೆ. ಮಧ್ಯಾಹ್ನ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ರಾತ್ರಿ ಈ ಲಿಂಗ ಬಿಳಿ ಬಣ್ಣಕ್ಕೆ ತಿರುಗುತ್ತದೆ.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪಂಚಲಿಂಗ ದರ್ಶನ ಸಮಯದಲ್ಲಿ ಇದು ಯಾತ್ರಿಗಳ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ.