ಮನೆ ಯೋಗಾಸನ ಸರ್ವಾಂಗಸನದಲ್ಲಿ ಪೀಡಾಸನ

ಸರ್ವಾಂಗಸನದಲ್ಲಿ ಪೀಡಾಸನ

0

 ‘ಪೀಡ’ವೆಂದರೆ ಗರ್ಭಕೋಶದಲ್ಲಿಯ ಭ್ರೂಣ. ಇದು ಕೂಡ ‘ಸರ್ವಾಂಗಾಸನ’ದ ವ್ಯತ್ಯಾಸ್ತ ಭಂಗಿಗಳಲ್ಲೊಂದು ಅಲ್ಲದೆ ಹಿಂದಿನ ಭಂಗಿಗಳಿಂದ ಮುಂದುವರೆದುದು. ಇದರಲ್ಲಿ ಕಾಲುಗಳಿಂದ ’ಪದ್ಮಾಸನ’ ರಚಿಸಿ, ಅದನ್ನು ಬಗ್ಗಿಸಿ,ತಲೆಯ ಬಳಿಗೆ ತಂದು ಅಲ್ಲಿಯೇ ನೆಲೆಸಿಡಬೇಕಾಗುವುದು ಈ ಭಂಗಿಯು ಗರ್ಭಕೋಶದಲ್ಲಿಯ ಭ್ರೂಣವನ್ನು ಹೋಲುವುದರಿಂದ ಆಸನಕ್ಕೆ ಈ ಹೆಸರ.

Join Our Whatsapp Group

 ಅಭ್ಯಾಸ ಕ್ರಮ

1. ‘ಸರ್ವಾಂಗಸನ’ದಲ್ಲಿಯ ‘ಊರ್ಧ್ವಪದ್ಮಾಸನ’ದಿಂದ ರಂಭಿಸಿ,ಅಲ್ಲಿಂದ ಮುಂದೆ ಉಸಿರನ್ನು ಹೊರಕ್ಕೆ ಬಿಟ್ಟು ಅಡಗಿಸಿದ ಕಾಲುಗಳ ಹೆಣಿಗೆಯನ್ನು ಟೊಂಕದಿಂದ ಕೆಳಕ್ಕೆ ಬಗ್ಗಿಸಿ, ಬಳಿಕ ತಲೆ ಯೆಡೆಗೆ ಬರುವಂತೆ ತಗ್ಗಿಸಬೇಕು.

2. ಅನಂತರ ಈ ಕಾಲುಗಳ ಅಡ್ಡ ಹೆಣಿಗೆಯನ್ನು ತಲೆಯಮೇಲೆ ನೆಲೆಸುವಂತೆ ಮಾಡಬೇಕು.

3. ಬಳಿಕ,ಬೆನ್ನಿನಿಂದ ಕೈಗಳನ್ನು ತೆಗೆದು,ಅವುಗಳಿಂದ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು ಹೀಗೆ ಹಿಡಿತವನ್ನು ಬಿಗಿಮಾಡುವಾಗ ಕಾಲುಗಳನ್ನು ಚೆನ್ನಾಗಿ ನೆಲೆಸುವಂತೆ ಮಾಡಲು ಮುಂಡವನ್ನು ಕತ್ತಿನ ಬಳಿ ಸರಿಪಡಿಸಬೇಕು.

4. ಈ ಭಂಗಿಯಲ್ಲಿ ಸಾಮಾನ್ಯ ಉಸಿರಾಟದಿಂದ, ಸುಮಾರು 20 30 ಸೆಕೆಂಡುಗಳ ಕಾಲ ನೆಲೆಸಿ ‘ಸರ್ವಾಂಗಸನ’ದ ‘ಊರ್ಧ್ವಪದ್ಮಾಸ’ನದ ಭಂಗಿಗೆ ಮತ್ತೆ ಹಿಂದಿರುಗಬೇಕು.