ಮನೆ ರಾಜಕೀಯ ಮಂಡ್ಯದ ಮಾಜಿ ಸಂಸದ ಎಲ್.ಆರ್.ಎಸ್ ಆಡಿಯೋ ವೈರಲ್: ೨೦೨೩ರ ವಿಧಾನಸಭಾ ಚುನಾವಣೆಗೆ ೩೦ ಕೋಟಿ ಖರ್ಚು

ಮಂಡ್ಯದ ಮಾಜಿ ಸಂಸದ ಎಲ್.ಆರ್.ಎಸ್ ಆಡಿಯೋ ವೈರಲ್: ೨೦೨೩ರ ವಿಧಾನಸಭಾ ಚುನಾವಣೆಗೆ ೩೦ ಕೋಟಿ ಖರ್ಚು

0

ಮಂಡ್ಯ: ಮುಂದಿನ ೨೦೨೩ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಮೂರು ಪಕ್ಷಗಳು, ಮುಖಂಡರು ತಯಾರಿ ನಡೆಸುತ್ತಿರುವ ಬೆನ್ನಲ್ಲೇ, ಮಾಜಿ ಸಂಸದ ಎಲ್ ಆರ್. ಶಿವರಾಮೇಗೌಡ ಜೆಡಿಎಸ್ ಕಾರ್ಯಕರ್ತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಕೊಪ್ಪ ಹೋಬಳಿಯ ಜೆಡಿಎಸ್ ಮಹಿಳೆ ಕಾರ್ಯಕರ್ತೆ ಜೊತೆ ಎಲ್.ಆರ್.ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾದ ೩೭ ನಿಮಿಷ ೫೪ ಸೆಂಕೆಡ್ ನ ಆಡಿಯೋ ಇದಾಗಿದೆ.
೨೦೨೩ ವಿಧಾನಸಭಾ ಚುನಾವಣೆಗೆ ನಾಗಮಂಗಲ ಜೆಡಿಎಸ್ ಅಭ್ಯರ್ಥಿಯಾಗಿ ನಾನೇ ಕಣಕ್ಕೆ ಇಳಿಯುತ್ತೇನೆ. ೩೦ ಕೋಟಿ ರು ಖರ್ಚು ಮಾಡುವೆ ಆಡಿಯೋ ದಲ್ಲಿ ಎಂಎಲ್‌ಸಿ ಚುನಾವಣೆಗೆ ೨೭ ಕೋಟಿ ಖರ್ಚು ಮಾಡಿದ್ದೆ. ೬ ತಿಂಗಳಿಗೆ ಎಂಪಿ ಚುನಾವಣೆಗೆ ೩೦ ಕೋಟಿ ಖರ್ಚು ಮಾಡಿದ್ದೆ ಎಂದು ಶಿವರಾಮೇಗೌಡರು ಆಡಿಯೋನಲ್ಲಿ ಹೇಳಿದ್ದಾರೆ.

ಮಾಜಿ ಸಂಸದ ಎಲ್ ಆರ್. ಶಿವರಾಮೇಗೌಡ ಜೆಡಿಎಸ್ ಕಾರ್ಯಕರ್ತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ


೩೦ ಕೋಟಿ ಖರ್ಚು ಮಾಡಲಿದ್ದೇನೆ:
ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ ೩೦ ಕೋಟಿ ಖರ್ಚು ಮಾಡುತ್ತೇನೆ ಎಂದು ಪ್ರಕಟಿಸಿರುವ ಶಿವರಾಮೇಗೌಡರು, ನನ್ನದು ೮ ಸ್ಕೂಲ್ ಇದೆ ತಿಂಗಳಿಗೆ ೩ ಕೋಟಿ ಸಂಬಳ ಕೊಡುತ್ತೇನೆ. ನಾಗಮಂಗಲ ವಿಧಾನಸಭೆ ಚುನಾವಣೆಗೆ ೧೦ ತಿಂಗಳ ಸಂಬಳದಷ್ಟೆ ಹಣಬೇಕು. ಅಷ್ಟು ಹಣವನ್ನು ಖರ್ಚು ಮಾಡುತ್ತೇನೆ. ತಮಗೆ ಬೆಂಬಲ ನೀಡಬೇಕು ಎಂದು ಮಹಿಳಾ ಕಾರ್ಯಕರ್ತೆ ಜೊತೆ ಮಾತನಾಡಿದ್ದಾರೆ.
ಸಭೆಗೆ ಆಹ್ವಾನಿಸಲು ಕರೆ ಮಾಡಿದ್ದಾರೆ ಎನ್ನಲಾದ ಆಡಿಯೋ:
ಈ ಆಡಿಯೊ ಕಳೆದ ಮೂರು ದಿನಗಳ ಹಿಂದೆಯಷ್ಟೆ ನಾಗಮಂಗಲ ಕ್ಷೇತ್ರದ ಕೊಪ್ಪಗೆ ಭೇಟಿ ನೀಡಿದ್ದ ಎಲ್.ಆರ್.ಶಿವರಾಮೇಗೌಡ. ಅಲ್ಲಿನ ಸಭೆಗೆ ಮಹಿಳಾ ಕಾರ್ಯಕರ್ತೆಗೆ ಆಹ್ವಾನಿಸಲು ಕರೆ ಮಾಡಿದ್ದಾರೆ ಎನ್ನಲಾಗಿರುವ ಆಡಿಯೋ ಇದಾಗಿದೆ.
ಸದ್ಯ ನಾಗಮಂಗಲ ಜೆಡಿಎಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಶಿವರಾಮೇಗೌಡರು, ನಾಗಮಂಗಲದ ಜೆಡಿಎಸ್ ಶಾಸಕರ ವಿರುದ್ಧವು ಆಡಿಯೋದಲ್ಲಿ ಚರ್ಚೆ ಮಾಡಿದ್ದಾರೆ. ನಾನು ಎರಡು ಸಲ ಎಂಎಲ್‌ಎ ಆಗಿದ್ದೇನೆ. ಆತ ಮಾಡಿದ ಕೆಲಸಕ್ಕಿಂತ ತಾತ ನಂತಹ ಕೆಲಸ ಮಾಡಬಹುದು ಎಂದಿದ್ದಾರೆ.
ಸುರೇಶ್ ಗೌಡ ನನಗೆ ಕಳೆದ ಲೋಕಸಭೆ ಟಿಕೆಟ್ ತಪ್ಪಿಸಿದ. ನಿಖಿಲ್ ಕುಮಾರ್ ಸ್ವಾಮಿ ಚುನಾವಣೆಗೆ ನಿಲ್ಲಿಸಿ ಅವರ ಮನೆಗೆ ಕಂಟಕ ತಂದ್ರು ನನಗು ಕಂಟಕ ತಂದರು. ಮುಂದಿನ ಬಾರಿ ಚುನಾವಣೆಗೆ ನಾನು ನಿಂತುಕೊಳ್ಳುತ್ತೇನೆ. ನನಗೆ ಬೆಂಬಲಕೊಡಿ ಎಂದು ಆಡಿಯೋದಲ್ಲಿ ಮನವಿ ಮಾಡಿರುವ ಅವರು, ಐದು ಬಾರಿ ಕಾಂಗ್ರೆಸ್ ನಿಂದ ನಿಂತು ಸೋತಿದ್ದೇನೆ. ಎಲ್ಲವು ಕಡಿಮೆ ಅಂತರದಿAದ ಸೋತಿದ್ದು ಎಂದಿದ್ದಾರೆ

ಜಿ.ಮಾದೇಗೌಡರ ಬಗ್ಗೆ ಲಘು ಮಾತು:
ದಿವಂಗತ ಜಿ.ಮಾದೇಗೌಡರ ಬಗ್ಗೆಯೂ ಲಘುವಾಗಿ ಮಾತನಾಡಿರುವ ಶಿವರಾಮೇಗೌಡರು, ಜಿ.ಮಾದೇಗೌಡರು ಆಗ ಸಂಸದರಾಗಿದ್ದರು. ಮಾದೇಗೌಡ ೨೦ ವರ್ಷದ ಹಿಂದೆಯೇ ಸಾಯಬೇಕಿತ್ತು, ಮೊನ್ನೆ ಸತ್ತ. ಅದರಿಂದಲೇ ಜಿ.ಮಾದೇಗೌಡರ ವಿರೋಧದಿಂದ ಸೋತೆ ಎಂದು ಆಡಿಯೋದಲ್ಲಿ ಹೇಳಿದ್ದಾರೆ.

ಹಿಂದಿನ ಲೇಖನಸಚಿವರ  ಕಾರ್ಯವೈಖರಿ ವಿರುದ್ಧ ಸಿಎಂ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ ಎಂ.ಪಿ.ರೇಣುಕಾಚಾರ್ಯ
ಮುಂದಿನ ಲೇಖನಇಬ್ಬರು ವಯಸ್ಕರು ಮದುವೆ ಅಥವಾ ಲಿವ್-ಇನ್-ರಿಲೇಶನ್‌ಶಿಪ್ ಮೂಲಕ ಒಟ್ಟಿಗೆ ಇರುವಾಗ ನೈತಿಕ ಪೋಲಿಸ್‌ಗಿರಿಯನ್ನು ಅನುಮತಿಸಲಾಗುವುದಿಲ್ಲ: ಮಧ್ಯಪ್ರದೇಶ ಹೈಕೋರ್ಟ್