ಮನೆ ಆರೋಗ್ಯ ಬೆಂಗಳೂರಿನ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಹಾಕದಿದ್ದರೆ ಮೇ 1 ರಿಂದ ದಂಡ

ಬೆಂಗಳೂರಿನ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಹಾಕದಿದ್ದರೆ ಮೇ 1 ರಿಂದ ದಂಡ

0

ಬೆಂಗಳೂರು(Bengaluru): ಈಗಾಗಲೇ ರಾಜ್ಯ ಸರ್ಕಾರ(State Governament) ಸಾರ್ವಜನಿಕ ಸ್ಥಳಗಳಲ್ಲಿ(Public Places) ಮಾಸ್ಕ್(Mask) ಕಡ್ಡಾಯಗೊಳಿಸಿ(Compulsory) ಆದೇಶ(Order) ಹೊರಡಿಸಿದ್ದು, ದಂಡ(Penalty) ಹಾಕುವ ಕುರಿತು ಇನ್ನೂ ತೀರ್ಮಾನಿಸಿಲ್ಲ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್(Covid) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮಾನಿಸಿದೆ.

ಏಪ್ರಿಲ್ ಅಂತ್ಯದವವರೆಗೆ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಬಿಬಿಎಂಪಪಿ ಮಾರ್ಷಲ್ ಗಳು ಮಾಸ್ಕ್ ಹಾಕುವಂತೆ ಜನರಿಗೆ ಅರಿವು ಮೂಡಿಸಲಿದ್ದು, ಮೇ 1 ರಿಂದದ ಮಾಸ್ಕ್ ಹಾಕದವರಿಗೆ 250 ರೂ.ದಂಡ ವಿಧಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಬುಧವಾರದ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರದಲ್ಲಿ 114 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1648 ಆಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಎರಡು ಅಡಿಗಳ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಮಾಸ್ಕ್ ಹಾಕದಿದ್ದರೆ ಎಷ್ಟು ದಂಡ ವಿಧಿಸಬೇಕು? ಎಂದು ಸ್ಥಳೀಯ ಆಡಳಿತ ತೀರ್ಮಾನ ಕೈಗೊಳ್ಳಲಿದೆ.

ಹಿಂದಿನ ಲೇಖನʻಹಿಂದಿ ರಾಷ್ಟ್ರ ಭಾಷೆʼ ಎಂದ ಬಾಲಿವುಡ್‌ ನಟ ಅಜಯ್‌ ದೇವಗನ್‌ ಗೆ ಸಿದ್ದು, ಹೆಚ್ಡಿಕೆ ಸೇರಿದಂತೆ ಹಲವರಿಂದ ತಿರುಗೇಟು
ಮುಂದಿನ ಲೇಖನಪುಲ್ವಾಮದಲ್ಲಿ ಇಬ್ಬರು ಉಗ್ರರ; ಹತ್ಯೆಗೈದ ಸೇನೆ