ಮನೆ ಅಪರಾಧ ಪುಲ್ವಾಮದಲ್ಲಿ ಇಬ್ಬರು ಉಗ್ರರ; ಹತ್ಯೆಗೈದ ಸೇನೆ

ಪುಲ್ವಾಮದಲ್ಲಿ ಇಬ್ಬರು ಉಗ್ರರ; ಹತ್ಯೆಗೈದ ಸೇನೆ

0

ಪುಲ್ವಾಮಾ(Pulwama): ಜಮ್ಮು ಮತ್ತು ಕಾಶ್ಮೀರದ(Jammu & Kashmir) ಪುಲ್ವಾಮದಲ್ಲಿ ಭಾರತೀಯ ಸೇನಾಪಡೆ(Indian Military) ಇಬ್ಬರು ಉಗ್ರರನ್ನು(Terrorist) ಹೊಡೆದುರುಳಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.

ಹತ್ಯೆಯಾದ ಉಗ್ರರನ್ನು ಅಲ್ ಬದರ್ ಉಗ್ರ ಸಂಘಟನೆಗೆ ಸೇರಿದ ಐಜಾಜ್ ಹಫೀಜ್ ಹಾಗೂ ಶಾಹೀದ್ ಆಯುಬ್ ಎಂದು ಗುರುತಿಸಲಾಗಿದ್ದು, ಇಬ್ಬರಿಂದಲೂ ಎರಡು ಎಕೆ 47 ರೈಫಲ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

ಹತ್ಯೆಯಾದ ಇಬ್ಬರು ಉಗ್ರರು ಈ ಹಿಂದೆ ವಲಸೆ ಕಾರ್ಮಿಕರ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪುಲ್ವಾಮಾದ ಮಿತ್ರಿಗಾಮ್ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಬುಧವಾರ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿ, ಬುಧವಾರ ಓರ್ವ ಉಗ್ರನನ್ನು ಹತ್ಯೆಗೈದಿದ್ದು, ಇಂದು ಬೆಳಿಗ್ಗೆ ಮತ್ತೋರ್ವ ಉಗ್ರನನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಹಿಂದಿನ ಲೇಖನಬೆಂಗಳೂರಿನ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಹಾಕದಿದ್ದರೆ ಮೇ 1 ರಿಂದ ದಂಡ
ಮುಂದಿನ ಲೇಖನವಿದ್ಯುತ್ ಪ್ರವಹಿಸಿ ಯುವಕನ ಸಾವು: ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸಿಎಂ