ಮನೆ ರಾಜ್ಯ ಸುಡಾನ್ ನಲ್ಲಿ ಹುಣಸೂರಿನ ಜನ: ಮಾಹಿತಿ ಪಡೆದ ಸಂಸದ ಪ್ರತಾಪ್ ಸಿಂಹ

ಸುಡಾನ್ ನಲ್ಲಿ ಹುಣಸೂರಿನ ಜನ: ಮಾಹಿತಿ ಪಡೆದ ಸಂಸದ ಪ್ರತಾಪ್ ಸಿಂಹ

0

ಹುಣಸೂರು(ಮೈಸೂರು): ಮೂರು ತಿಂಗಳ ಹಿಂದೆ ಆಯುರ್ವೇದ ಔಷಧ ಮತ್ತು ಮಸಾಜ್ ಮಾಡುವ ಪರಿಣಿತರ ತಂಡ ಸುಡಾನ್ ದೇಶದ ಆಲ್ ಬಶೇರ್ ನಗರಕ್ಕೆ ತೆರಳಿ ವ್ಯಾಪಾರ ನಡೆಸಿದ್ದರು. ಇತ್ತೀಚೆಗೆ ಸಂಘರ್ಷ ಆರಂಭವಾಗಿ ನಮ್ಮವರು ಅತಂತ್ರರಾಗಿದ್ದಾರೆ ಎಂದು ಪಕ್ಷಿರಾಜಪುರದ ಯಜಮಾನ ನಂಜುಂಡಸ್ವಾಮಿ ತಿಳಿಸಿದರು.

Join Our Whatsapp Group

ಬ್ಲಾಕ್ ಒಂದರಲ್ಲಿ 30 ಮತ್ತು ಬ್ಲಾಕ್‌ ಎರಡರಲ್ಲಿ 10 ರಿಂದ 15 ಜನರು ತೆರಳಿದ್ದಾರೆ. ಇವರನ್ನು ಕಳೆದ 10 ದಿನದಿಂದ ಒಂದು ಮನೆಯಲ್ಲಿ ಕೂಡಿ ಹಾಕಿದ್ದು,ಇವರಿಗೆ ಅನ್ನ ನೀರು ಇಲ್ಲವಾಗಿದೆ ಎಂದು ಫೋನ್ ಮೂಲಕ ಹೇಳಿದ್ದಾರೆ.

ಮೈಸೂರು ಕೊಡಗು ಸಂಸದ ಪ್ರತಾಪಸಿಂಹ ಗುರುವಾರ ಬೆಳಗ್ಗೆ ಕರೆ ಮಾಡಿ ಸಂಪೂರ್ಣ ವಿವರಣೆ ಪಟ್ಟಿ ಕೇಳಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆದು ತರುವ ಭರವಸೆ ನೀಡಿದ್ದಾರೆ ಎಂದರು.

ರಾಜ್ಯದ ಶಿವಮೊಗ್ಗ, ಹಾಸನ ಮತ್ತು ಮೈಸೂರು ಜಿಲ್ಲೆಯಿಂದ 600 ಜನರು ತೆರಳಿದ್ದಾರೆ ಎಂದು ಮಾಹಿತಿ ನೀಡಿದರು.

ಸುಡಾನ್ ಗೆ ತೆರಳಿದ ಪಕ್ಷಿರಾಜಪುರ ನಿವಾಸಿಗರು ಅರಬಿಕ್ ಭಾಷೆ ಮಾತನಾಡುವುದರಿಂದ ಸ್ಥಳಿಯರೊಂದಿಗೆ ಮಾತನಾಡಿ ಆಗುಹೋಗುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು.