ಮನೆ ರಾಷ್ಟ್ರೀಯ ಕೇರಳ: ಕಾಡಾನೆ ತುಳಿತಕ್ಕೆ ಮಹಿಳೆ ಸಾವು

ಕೇರಳ: ಕಾಡಾನೆ ತುಳಿತಕ್ಕೆ ಮಹಿಳೆ ಸಾವು

0

ಕೇರಳ(Kerala): ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಅರಣ್ಯ ಪ್ರದೇಶದ ಸಮೀಪದಲ್ಲಿ ಕಾಡಾನೆಯೊಂದು ಬುಡಕಟ್ಟು ಮಹಿಳೆಯ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿರುವ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.

ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಜಾನುವಾರುಗಳು ಜೋರಾಗಿ ಶಬ್ದ ಮಾಡುತ್ತಿದ್ದುದನ್ನು ಕೇಳಿಸಿಕೊಂಡ ಮಹಿಳೆ ಏನಾಗುತ್ತಿದೆ ಎಂದು ನೋಡಲು ತನ್ನ ಪತಿಯೊಂದಿಗೆ ಹೊರಗೆ ಬಂದಾಗ ಅವರ ಪತಿ ಶೌಚಾಲಯಕ್ಕೆ ತೆರಳಿದ್ದಾರೆ. ಆದರೆ ಮಹಿಳೆ ದನದ ಕೊಟ್ಟಿಗೆಯೊಳಗೆ ಹೋಗಿದ್ದು, ಕೊಟ್ಟಿಗೆ ಒಳಗೆ ಕತ್ತಲಿದ್ದ ಕಾರಣ ಆನೆ ನಿಂತಿರುವುದು ಅವರಿಗೆ ಗೋಚರಿಸಿಲ್ಲ. ಮಹಿಳೆ ಆನೆಯ ಹತ್ತಿರಕ್ಕೆ ಹೋದಾಗ ದಾಳಿ ಮಾಡಿ ಸ್ಥಳದಲ್ಲೇ ತುಳಿದು ಸಾಯಿಸಿದೆ.

ಘಟನೆ ಸಂಭವಿಸಿದ ಸ್ಥಳದಿಂದ ಕೇವಲ 150 ಮೀಟರ್ ದೂರದಲ್ಲಿ ದಟ್ಟಾರಣ್ಯದ ಗಡಿ ಆರಂಭವಾಗುತ್ತದೆ. ಹೀಗಾಗಿ ಅಲ್ಲಿ ಸದಾ ಕಾವಲಿಗಿರುವ ಅರಣ್ಯ ಅಧಿಕಾರಿಗಳು ಘಟನೆ ನಡೆದ ಕೂಡಲೇ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಕಾಡಾನೆಯನ್ನು ಬೆದರಿಸಿ ಮರಳಿ ಕಾಡಿಗೆ ಸಾಗಿಸಲು ಸಫಲರಾಗಿದ್ದಾರೆ ಎಂದು ಪ್ರದೇಶದ ರೇಂಜ್ ಫಾರೆಸ್ಟ್ ಆಫೀಸರ್ ತಿಳಿಸಿದ್ದಾರೆ.

ಹಿಂದಿನ ಲೇಖನಶ್ರೀ ಜ್ಯೋತಿರ್ಭೀಮೇಶ್ವರ ವ್ರತ ವಿಶೇಷ
ಮುಂದಿನ ಲೇಖನಜು.31 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ