ಮನೆ ರಾಜಕೀಯ ಫೆಬ್ರವರಿ ಎರಡನೇ ವಾರದಲ್ಲಿ ಜನಪರ ಬಜೆಟ್ ಮಂಡನೆ: ಸಿಎಂ ಬೊಮ್ಮಾಯಿ

ಫೆಬ್ರವರಿ ಎರಡನೇ ವಾರದಲ್ಲಿ ಜನಪರ ಬಜೆಟ್ ಮಂಡನೆ: ಸಿಎಂ ಬೊಮ್ಮಾಯಿ

0

ದಾವಣಗೆರೆ: ಫೆಬ್ರುವರಿ ಎರಡನೇ ವಾರದಲ್ಲಿ ಜನಪರ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಹರಿಹರದಲ್ಲಿ ನಡೆಯುತ್ತಿರುವ ಹರಜಾತ್ರೆಗೆ ಹೊರಡುವ ಮುನ್ನ ಇಲ್ಲಿನ ಜಿಎಂಐಟಿ ಅತಿಥಿ ಗೃಹದಲ್ಲಿ ಪತ್ರಕರ್ತರ ಜೊತೆ ಅವರು ಮಾತನಾಡಿದರು.

ಡಿಸೆಂಬರ್ ತಿಂಗಳವರೆಗೂ ಎಲ್ಲಾ ಬಾಬ್ತುಗಳಲ್ಲೂ ಆದಾಯ ಸಂಗ್ರಹ ಗುರಿ ಮೀರಿ ಸಾಧನೆಯಾಗಿದೆ. ಹಣಕಾಸು, ಮುದ್ರಾಂಕ ಶುಲ್ಕ, ಅಬಕಾರಿ ತೆರಿಗೆ ಎಲ್ಲವೂ ಹೆಚ್ಚಾಗಿ ಸಂಗ್ರಹವಾಗಿದೆ. ಅದರ ಅನುಗುಣವಾಗಿ ಬಜೆಟ್‌ ಗಾತ್ರ ತೀರ್ಮಾನ ಮಾಡಲು ಹಲವು ಸಭೆಗಳ ಅವಶ್ಯಕತೆ ಇದೆ. ಬೇರೆ ಬೇರೆ ಇಲಾಖೆಗಳ ಜೊತೆ ಸಂಕ್ರಾಂತಿಯ ನಂತರ ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ಹೇಳಿದರು.

ಕರ್ನಾಟಕದಿಂದ ಉಡುಪುಗಳ ರಫ್ತು ಹೆಚ್ಚುತ್ತಿದ್ದು, ಜವಳಿ ಉದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 25 ಟೆಕ್ಸ್‌’ಟೈಲ್‌ ಪಾರ್ಕ್‌’ಗಳನ್ನು ಆರಂಭಿಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಹೇಳಿದರು.

ಎಸ್‌’ಸಿ, ಎಸ್‌’ಟಿ ಮೀಸಲಾತಿ ಬಗ್ಗೆ ಮೊದಲು ಸುಗ್ರೀವಾಜ್ಞೆ ಹೊರಡಿಸಿದ್ದೆವು. ಬೆಳಗಾವಿ ಅಧಿವೇಶನದಲ್ಲಿ ಕಾನೂನು ಮಾಡಿದ್ದೇವೆ. ಈಗ ಕೇಂದ್ರಕ್ಕೆ ಕಳುಹಿಸುತ್ತೇವೆ. ತಮಿಳುನಾಡು ಮಾದರಿಯಲ್ಲೇ ಷೆಡ್ಯುಲ್‌ 9 ಸೇರಿಸಲು ಕೇಂದ್ರದ ಜೊತೆ ಮಾತನಾಡಿದ್ದೇವೆ. ಈಗಾಗಲೇ ಮೊದಲ ಹೆಜ್ಜೆ ಇಟ್ಟಿದ್ದೇವೆ. ಮೀಸಲಾತಿ ವಿರೋಧಿಸುವವರು ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಹಿಂದಿನ ಲೇಖನನ್ಯೂಜಿಲೆಂಡ್ ವಿರುದ್ಧ T20 ಸರಣಿ: ಭಾರತ ತಂಡದಲ್ಲಿ ಕೊಹ್ಲಿ, ರೋಹಿತ್‌’ಗಿಲ್ಲ ಸ್ಥಾನ
ಮುಂದಿನ ಲೇಖನಸಾರಾ ಅಬೂಬಕ್ಕರ್ ದಿಟ್ಟ ಕನ್ನಡ ಬರಹಗಾರ್ತಿ: ಅರವಿಂದ ಮಾಲಗತ್ತಿ