ಮನೆ ಸುದ್ದಿ ಜಾಲ ಜನರ ಮನಸೂರೆಗೊಂಡ ಪಾರಂಪರಿಕ ತಟ್ಟೆ, ಲೋಟ ಗಡಿಗೆ, ಮಡಕೆಗಳು

ಜನರ ಮನಸೂರೆಗೊಂಡ ಪಾರಂಪರಿಕ ತಟ್ಟೆ, ಲೋಟ ಗಡಿಗೆ, ಮಡಕೆಗಳು

0

ಹಳೆಪಾತ್ರೆ, ಹಳೆ ಗಡಿಗೆ, ಹಳೆ ಮಡಕೆ,ಸೇರಿದಂತೆ ದಶಕಗಳ ಹಿಂದೆ ನಮ್ಮ ಪೂರ್ವಜರು ಬಳಸುತ್ತಿದ್ದ ಪಾತ್ರೆಗಳು, ಕೃಷಿ ಪರಿಕಗಳು, ಆಯುಧಗಳು, ಉಡುಗೆ, ತೊಡುಗೆಗಳನ್ನ ವೀಕ್ಷಿಸಿದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.            

Join Our Whatsapp Group

 ನಗರದ  ಮಹಾರಾಣಿ ಮಹಿಳಾ ಕಲಾ ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಮಂಗಳವಾರ ಆಯೋಜಿಸಿದ್ದ ”ನಮ್ಮ ಪರಂಪರೆಯ ವಸ್ತುಗಳು- ಒಂದು ನೋಟ” ಎಂಬ ಪುರಾತನ ಕಾಲದ ಪಳೆಯುಳಿಕೆಗಳ ವಸ್ತುಗಳ ಪ್ರದರ್ಶನದಲ್ಲಿ ಇತಿಹಾಸದ ವಿಭಾಗದ ವಿದ್ಯಾರ್ಥಿನಿಯರು, ಶಿಕ್ಷಕರು ಸಂಗ್ರಹಿಸಿ ಪ್ರದರ್ಶನಕ್ಕಿಟ್ಟಿದ್ದು, ಜನಮನ ಸೆಳೆಯುತ್ತಿರುವುದಷ್ಟೇ ಅಲ್ಲದೆ, ಅಪ್ಪಟ ಗ್ರಾಮೀಣ ಸೊಗಡನ್ನು ಪಸರಿಸಿತು.                   

ಪ್ರದರ್ಶನದಲ್ಲಿ ಹಳೆಯ ಅಡುಗೆ ಸಾಮಾಗ್ರಿಗಳು, ಪಾತ್ರೆಗಳು, ಮಾಪನ ಸಾಮಗ್ರಿಗಳು, ಕೃಷಿ ಸಲಕರಣೆಗಳು, ಆಯುಧಗಳು, ಉಡುಗೆ- ತೊಡುಗೆಗಳು, ದೀಪಗಳು, ಹಳೆಯ ಕಾಲದ ಕಾಲು ಒರೆಸುವ ಬಟ್ಟೆ, ಬಿಸುಕಲ್ಲು ಶಾವಿಗೆ ಮಾಡುವ ಸಾಧನ, ಕೃಷಿಗೆ ಬಳಸುವ ಬಲರಾಮ, ಕೂರಿಗೆ, ಕುಂಟೆ ಬಾಯಿಕುಕ್ಕೆ, ಎತ್ತಿನಗಾಡಿ, ನೇಗಿಲು, ಮಡಕೆ, ಕುಡಿಕೆಗಳು,ಮುಚ್ಚುವ ತಟ್ಟೆ, ಒಲೆ,ಕೋಡಮಗೆ, ಹಿತ್ತಾಳೆಯ ದೊಡ್ಡ ಪಾತ್ರೆಗಳು, ತಾಂಬೂಲ ಇಡುವ ಪೆಟ್ಟಿಗೆ, ಪಣೇರಿ ಪೆಟ್ಟಿಗೆಗಳು, ಎಲ್ಲರ ಗಮನ ಸೆಳೆದವು.   

 ಮಾಪನ ಸಾಮಗ್ರಿಗಳಾದ ಸೇರು,ನಿಟಿವೆ,ಚಿಟ್ಟೆ, ಅಡಿಸೇರು,ಆಯುಧಗಳಾದ ಖಡ್ಗ, ಖುರುಪಿ, ಕುಡುಗೋಲು,ಹಳೆ ಕಾಲದ ರೇಡಿಯೋಗಳು,ಹಳೆಯ ಗಡಿಯಾರಗಳು,ತೊಟ್ಟಿಲು, ಮಹಿಳಾ ಅಲಂಕಾರಿಕ ಸಾಮಗ್ರಿಗಳು,ಹಳೇ ಕಾಲದ ಕನ್ನಡಿ, ಕಂದೀಲು,ಚಹಾ  ಕೇಟಲ್, ಬೀಸಣಿಗೆ, ಬುಟ್ಟಿ, ವನಕೆ ,ಸಣಕ್ಕೆ ,ಟೋಪ್ಪಿಗೆ ,ಕೌದಿ ,ಟಿಪ್ಪು ಸುಲ್ತಾನ್  ಯುದ್ಧಕ್ಕಾಗಿ ಬಳಸಿದ ಗುಂಡು ಸೇರಿದಂತೆ ಉಡುಪುಗಳು ,ಹಳೆ ಕಾಲದ ನಾಣ್ಯಗಳು ಭಾರತೀಯ ಪರಂಪರೆಯನ್ನು ಮತ್ತೆ ನೆನಪಿಸಿದರು

ವಸ್ತು ಪ್ರದರ್ಶನವನ್ನು ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ.ವಸಂತ್ ಕುಮಾರ್ ಉದ್ಘಾಟಿಸಿದರು ಇತಿಹಾಸದ ವಿಭಾಗದ ಮುಖ್ಯಸ್ಥ ಎಚ್.ಎಂ. ಬಸವರಾಜು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.