ಮನೆ ರಾಜ್ಯ ಈದ್ಗಾ ಮೈದಾನದಲ್ಲಿ ಗೌರಿ ಗಣೇಶ ಹಬ್ಬ ಆಚರಣೆಗೆ ಅನುಮತಿ: ಸಿಎಂ ಜೊತೆ ಚರ್ಚಿಸಿ ತೀರ್ಮಾನ –...

ಈದ್ಗಾ ಮೈದಾನದಲ್ಲಿ ಗೌರಿ ಗಣೇಶ ಹಬ್ಬ ಆಚರಣೆಗೆ ಅನುಮತಿ: ಸಿಎಂ ಜೊತೆ ಚರ್ಚಿಸಿ ತೀರ್ಮಾನ – ಸಚಿವ ಆರ್.ಅಶೋಕ್

0

ಬೆಂಗಳೂರು(Bengaluru): ಈದ್ಗಾ ಮೈದಾನದಲ್ಲಿ ಗೌರಿ- ಗಣೇಶ್ ಹಬ್ಬ ಆಚರಣೆಗೆ  ಅನುಮತಿ ನೀಡುವ  ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಗೌರಿ ಗಣೇಶ ಹಬ್ಬ ಆಚರಿಸಲು ಅನುಮತಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಪತ್ರ ಬಂದಿದೆ.  ಆದರೆ ಈ ವಿಚಾರದ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ.  ಚಾಮರಾಜ ಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದೆ. ಅಲ್ಲಿ ಏನಾಗಬೇಕು ಎಂದು ಸರ್ಕಾರ ನಿರ್ಧರಿಸುತ್ತೆ. ಬೇರೆ ಯಾರಿಗೂ ಆ ಬಗ್ಗೆ ನಿರ್ಧರಿಸಲು ಅಧಿಕಾರ ಇಲ್ಲ ಎಂದರು.

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕಿತ್ತು ಎಂದು ಪ್ರಶ್ನಿಸಿದ್ಧ ಮಾಜಿ ಸಿಎಂ ಸಿದ‍್ಧರಾಮಯ್ಯಗೆ ತಿರುಗೇಟು ಕೊಟ್ಟ ಸಚಿವ ಆರ್.ಅಶೋಕ್, ಅದು ಮುಸ್ಲೀಂ ಏರಿಯಾ ಅಂದರೇ ಅದು ಪಾಕಿಸ್ತಾನದಲ್ಲಿದೆಯಾ..? ಸಾವರ್ಕರ್ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ವೀರ ಸಾವರ್ಕರ್ ಅವರನ್ನು  ಕಾಂಗ್ರೆಸ್ ನವರು ಒಪ್ಪದೇ ಇರಬಹುದು.  ಆದರೆ ಸಾವರ್ಕರ್  ದೇಶಭಕ್ತ ಎಂದು  ತಿಳಿಸಿದರು.