ಮನೆ ಕಾನೂನು ಅಗ್ನಿಪಥ ಯೋಜನೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ: ಮುಂದಿನ ವಾರ ವಿಚಾರಣೆ

ಅಗ್ನಿಪಥ ಯೋಜನೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ: ಮುಂದಿನ ವಾರ ವಿಚಾರಣೆ

0

ನವದೆಹಲಿ(New Delhi): ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮುಂದಿನ ವಾರ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಾಹಿತಿ ನೀಡಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ.ಮಹೇಶ್ವರಿ ಅವರನ್ನು ಒಳಗೊಂಡ ಪೀಠ, ಅಗ್ನಿಪಥ ಯೋಜನೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಸೂಕ್ತ ಪೀಠವು ಮುಂದಿನ ವಾರ ನಡೆಸಲಿದೆ ಎಂದು ತಿಳಿಸಿದೆ.

ಯೋಜನೆಯ ವಿರುದ್ಧ ಅರ್ಜಿ ಸಲ್ಲಿಸಿರುವ ವಕೀಲರು, ‘ಭಾರತೀಯ ವಾಯುಪಡೆಯ ಆಕಾಂಕ್ಷಿಗಳು ತರಬೇತಿ ಪಡೆದು ನೇಮಕಾತಿ ಪತ್ರಗಳಿಗಾಗಿ ಕಾಯುತ್ತಿದ್ದಾರೆ. ಆದರೆ, ಈಗ ಅವರ ವೃತ್ತಿಜೀವನವನ್ನು 20 ವರ್ಷಗಳಿಂದ ನಾಲ್ಕು ವರ್ಷಗಳಿಗೆ ಮೊಟಕುಗೊಳಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ,

ಇದು ತುರ್ತು ವಿಚಾರಣೆ ಮಾಡಬೇಕಾದ ವಿಷಯ. ಕಾರಣ, ಲಕ್ಷಾಂತರ ಆಕಾಂಕ್ಷಿಗಳ ವೃತ್ತಿಜೀವನವು ಅಪಾಯದಲ್ಲಿದೆ ಎಂದು ವಕೀಲರು ಹೇಳಿದ್ದಾರೆ.