ಮನೆ ರಾಜ್ಯ ಕಾಂಗ್ರೆಸ್ ನಲ್ಲಿ ಹೊಂದಾಣಿಕೆ ಇಲ್ಲ:  ಸಚಿವ ಬಿ.ಸಿ ಪಾಟೀಲ್

ಕಾಂಗ್ರೆಸ್ ನಲ್ಲಿ ಹೊಂದಾಣಿಕೆ ಇಲ್ಲ:  ಸಚಿವ ಬಿ.ಸಿ ಪಾಟೀಲ್

0

ಹಾಸನ(Hassan): ಕಾಂಗ್ರೆಸ್ ನಲ್ಲಿ ಹೊಂದಾಣಿಕೆ ಇಲ್ಲ. ಆಂತರಿಕ ಕಚ್ಚಾಟ ಹೆಚ್ಚಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

ಇಂದು ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ನಮ್ಮ ಸರ್ವೆ ಪ್ರಕಾರ ನಾವು 150 ಸೀಟ್ ಪಡೆದು ಅಧಿಕಾರಕ್ಕೆ ಬರುತ್ತೇವೆ.  ಕಾಂಗ್ರೆಸ್ ನಲ್ಲಿ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ ಪಕ್ಷ  ನಿರ್ಮಾಮ ಆಗಿದೆ. ಇದಕ್ಕೆ ಎಲ್ಲೂ ನೆಲೆ ಇಲ್ಲಂತಾಗಿದೆ. ಆದರೂ  ಸಹ ಅಧಿಕಾರಕ್ಕೆ ಬರುತ್ತೇವೆಂಬ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.

ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಶೀಘ್ರವೇ ಸಂಪುಟ ವಿಸ್ತರಣೆಯಾಗಲೆಂದು ಹಾರೈಸುವೆ ಎಂದು ಬಿ.ಸಿ ಪಾಟೀಲ್ ತಿಳಿಸಿದರು.

ಪ್ರತ್ಯೇಕ ರಾಜ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬಿ.ಸಿ ಪಾಟೀಲ್,  ಇದು ಸಚಿವ ಉಮೇಶ್ ಕತ್ತಿ ಅವರ ವೈಯಕ್ತಿಕ ಅಭಿಪ್ರಾಯ. ಎಲ್ಲರೂ ಮನ್ನಣೆ ಕೊಡಬೇಕು ಅಂತಿಲ್ಲ. ಸಮಯ ಸಂದರ್ಭ ಬಂಧಾಗ ಏನು ಬೇಕಾದರೂ ಆಗಬಹುದು ಎಂದರು.

ಹಿಂದಿನ ಲೇಖನಅಗ್ನಿಪಥ ಯೋಜನೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ: ಮುಂದಿನ ವಾರ ವಿಚಾರಣೆ
ಮುಂದಿನ ಲೇಖನಕಾಳಿ ಮಾತೆ ಕೈಯಲ್ಲಿ ಸಿಗರೇಟ್:  ನಿರ್ದೇಶಕಿ ಲೀನಾ ವಿರುದ್ಧ ದೂರು ದಾಖಲು