ಬೆಂಗಳೂರು (Bengaluru)- ಪೆಟ್ರೋಲ್, ಡೀಸೆಲ್ (Petrol, Diesel) ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ ಹಲವೆಡೆ 110ರ ಗಡಿ, ಡೀಸೆಲ್ ಬೆಲೆ 100 ರೂ. ಗಡಿ ದಾಟಿದೆ.
ಮಾರ್ಚ್ 22ರಿಂದ ಏಪ್ರಿಲ್ ಮೊದಲ ವಾರದತನಕ ಒಟ್ಟು 15 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ತಲಾ 10 ರೂ. ಏರಿಕೆಯಾಗಿತ್ತು. ಆ ಬಳಿಕ ಕಳೆದ 24 ದಿನಗಳಿಂದ ಯಾವುದೇ ವ್ಯತ್ಯಯ ಕಂಡು ಬಂದಿರಲಿಲ್ಲ. ಇದೀಗ ಇಂದು ಮತ್ತೆ ಬೆಲೆ ಏರಿಕೆಯಾಗಿದೆ.
ಪಂಚರಾಜ್ಯ ಚುನಾವಣೆಗಳ ಬಳಿಕ ಪ್ರತಿನಿತ್ಯ ಲೀಟರ್ಗೆ 80 ಪೈಸೆ ಏರಿಕೆಯಾಗುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಈ ಮಧ್ಯೆ ಕಳೆದ 24 ದಿನಗಳಿಂದ ತೈಲ ಬೆಲೆ ಸ್ಥಿರವಾಗಿತ್ತು. ಇದೀಗ ಮತ್ತೆ ಅನೇಕ ನಗರಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ ಹಲವೆಡೆ 110ರ ಗಡಿ ದಾಟಿದೆ. ಹಲವು ರಾಜ್ಯಗಳಲ್ಲಿ ಡೀಸೆಲ್ ಬೆಲೆಯು 100 ರೂ. ಗಡಿ ದಾಟಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 105.41 ರೂ. , ಡೀಸೆಲ್ 96.67
ರೂ., ಮುಂಬೈನಲ್ಲಿ ಪೆಟ್ರೋಲ್ 120.51 ರೂ., ಡೀಸೆಲ್ 104.77 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ 115.12 ರೂ., ಡೀಸೆಲ್ 99.83 ರೂ., ಚೆನ್ನೈ ನಲ್ಲಿ ಪೆಟ್ರೋಲ್ 110.95 ರೂ., ಡೀಸೆಲ್ 101.03 ರೂ. ಇದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ಗೆ ಬೆಲೆ 111.09 ರೂ., ಡೀಸೆಲ್ 94.79 ರೂ. ಇದೆ.