ಮನೆ ಯೋಗಾಸನ ಪಿಂಛ ಮಯೂರಾಸನ

ಪಿಂಛ ಮಯೂರಾಸನ

0

    ಪಿಂಚ ವೆಂದರೆ ಹಕ್ಕಿಯ ನೀಳವಾದ ಗರಿಗಳ ಹಿಂಗಡೆಯ ಪುಚ್ಚ.ಇಲ್ಲವೇ ಗದ್ದ ‘ಮಯೂರ’ ನವಿಲು ಮಳೆಗಾಲದ ಮೇಘವನ್ನು ನೋಡಿ ನವಿಲು ಕುಣಿಯಲಾರಂಭಿಸುವುದೆಂದು ಪ್ರತೀತಿ. ಆಗ ಗಂಡುನವಿಲು ತನ್ನ ಪುಚ್ಛದಲ್ಲಿಯ ಪುಂಖವನ್ನು ಅಗಲಿಸಿ ಬೀಸಣಿಗೆಯಂತೆ  ಗುಂಡಗೆ ಹರಡಿ ಮೇಲೆತ್ತಿನಿಲಿಸುತ್ತದೆ.ಈ ಭಂಗಿಯಲ್ಲಿ ಮುಂಡ ಮತ್ತು ಕೈಕಾಲುಗಳನ್ನು ನೆಲದಿಂದ ಮೇಲೆತ್ತಿ, ದೇಹವನ್ನು ಮುಂಗೈ  ಮತ್ತು ಅಂಗೈಗಳಮೇಲೆ ಸಮತೋಲನದಲ್ಲಿ ನಿಲ್ಲಿಸಬೇಕು. ಈ ಭಂಗಿಯು, ನರ್ತನವನ್ನು ಕೈಗೊಂಡ ನವಿಲನ್ನು ಹೋಲುವುದರಿಂದ ಈ ಆಸನಕ್ಕೆ ಹೆಸರನ್ನು  ಅಳವಡಿಸಲಾಗಿದೆ.

Join Our Whatsapp Group

      ಈ ಭಂಗಿಯನ್ನು ಎರಡು ಹಂತಗಳಾಗಿ ವಿಂಗಡಿಸಿ ಅವುಗಳ ವಿವರಿಸುವನ್ನು ಈ ಮುಂದೆ ಕೊಟ್ಟಿದೆ. ಎರಡನೆಯ ಹಂತದಲ್ಲಿ ಕೈಗಳನ್ನು ನೆಲದಿಂದ ಮೇಲೆತ್ತಿ, ಅಂಗೈಗಳನ್ನು ಗದ್ದದ ಕೆಳಗೆ ಬಟ್ಟಲಿನಂತೆ ಒತ್ತಿಟ್ಟು, ಮೊಣಕಾಲಿನಮೇಲೆಯೇ ದೇಹವನ್ನು ಸಮತೋಲಸ್ಥಿತಿಯಲ್ಲಿ ನಿಲ್ಲಿಸ ಬೇಕು. ಈ ಎರಡನೆಯ ಹಂತಕ್ಕೆ ‘ಶಯನಾಸನ’ವೆಂಬ ಹೆಸರೂ ಉಂಟು.

 ಅಭ್ಯಾಸ ಕ್ರಮ

1. ಮೊದಲು ಮಂಡಿಯೂರಿ ನೆಲದಮೇಲೆ ಕುಳಿತುಕೊಳ್ಳಬೇಕು. ಆ ಬಳಿಕ ಮೊಣಕೈ ಮುಂದೋಳು ಮತ್ತು ಅಂಗೈಗಳನ್ನು ನೆಲದ ಮೇಲೆ ಊರಿಡಬೇಕು. ಮೊಣ ಕೈಗಳ ನಡುತಾಣದಂತರ ಭುಜಗಳ ಮಧ್ಯಂತರ ಕ್ಕಿಂತಲೂ ಹೆಚ್ಚಿರಬಾರದು. ಮುಂದೋಳುಗಳನ್ನೂ ಮತ್ತು  ಅಂಗೈಗಳನ್ನೂ ಒಂದಕ್ಕೊಂದು  ಸಮಾಂತರವಾಗಿರಿಸಬೇಕು

2. ಬಳಿಕ, ಕತ್ತನ್ನು ಹಿಗ್ಗಿಸಿ ತಲೆಯನ್ನು ಸಾಧ್ಯವಾದಷ್ಟೂ ಮೇಲೆತ್ತಬೇಕು.

3. ಆಮೇಲೆ,ಉಸಿರನ್ನು ಹೊರ ಬಿಟ್ಟು ಕಾಲುಗಳನ್ನು ತೂಗಿ ಮೇಲೆತ್ತಿ,ಅವು ತಲೆಯ ಹಿಂಬಾಗಕ್ಕೆ ಬಾಗಿ ಕೆಳಗಿಳಿಯದ ಇಳಿಯದ ರೀತಿಯಲ್ಲಿ ಅವನ್ನು ಸಮತೋಲನಸ್ಥಿತಿಯಲ್ಲಿ ನಿಲ್ಲಿಸಲು ಯತ್ನಿಸಬೇಕು .

4. ಅನಂತರ ಎದೆಯ ಭಾಗವನ್ನು ಹಿಗ್ಗಿಸಿ ನೇರವಾಗಿ ನಿಲ್ಲಿಸಬೇಕು. ಅದೇ ಬಗೆಯಲ್ಲಿ ಕಾಲುಗಳನ್ನು ನೆಲಕ್ಕೆ ಲಂಬವಾಗುವಂತೆ ನೆಟ್ಟಗೆ ಹಿಗ್ಗಿಸಿ ನಿಲ್ಲಿಸಿ ಮಂಡಿಗಳನ್ನೂ ಗಿಣ್ಣುಗಳನ್ನೂ ಜೋತೆಗೂಡಿಸಬೇಕು.ಇಲ್ಲಿ ಕಾಲ್ಬೆರಳುಗಳ ತುದಿ ಮೇಲ್ಮುಖವಾಗಿರಬೇಕು.

5. ಆ ಬಳಿಕ, ಕಾಲಿನಲ್ಲಿಯ ಮಾಂಸಖಂಡಗಳನ್ನು ಟೊಂಕ ಮಂಡಿಗಳಲ್ಲಿ ಬಿಗಿಗೊಳಿಸಬೇಕು.ಈ ಸಮತೋಲನಸ್ಥಿತಿಯಲ್ಲಿ ಒಂದು ನಿಮಿಷ ಕಾಲ ನೆಲೆಸಬೇಕು.ಇದು ಈ ಆಸನ ಭಂಗಿಯ ಮೊದಲನೆಯ ಹಂತ, ಮೊದಲು ಮೊದಲು ಗೋಡೆಯನ್ನಾಸರೆಯಾಗಿ ಮಾಡಿಕೊಂಡು ಸಮತೋಲನಸ್ಥಿತಿಯನ್ನು ಗಳಿಸಬೇಕು.ಇಲ್ಲವಾದರೆ ಕಾಲುಗಳು ನೆಲೆಯಾಗಿ ನಿಲ್ಲದೆ ಲಾಗ ಹೊಡೆಯಬೇಕಾಗುವುದು. ಮೆಲ್ಲಮೆಲ್ಲಗೆ ಕ್ರಮ ಕ್ರಮವಾಗಿ  ಬೆನ್ನೆಲುಬು, ಹೆಗಲುಗಳನ್ನು ಹಿಗ್ಗಿಸುವ ಕ್ರಮವನ್ನು ಮತ್ತು ಆಗ ತಲೆಯನ್ನೆತ್ತಿ ಹಿಡಿಯುವುದನ್ನು ಕಲಿತು, ಅಮೂಲಕ ಸಮಸ್ತೋಲನ ಸ್ಥಿತಿಯಲ್ಲಿ ನೈಪುಣ್ಯವನ್ನು ಸಾಧಿಸಿದಮೇಲೆ,ಕೋಣೆಯ ನಡುತಾಣದಲ್ಲಿ ಈ ಭಂಗಿಯನ್ನಭ್ಯಸಿಸಲು ಬೆಳೆಸಿಸಲು ಯತ್ನಿಸಬೇಕು.

6. ಮೊದಲನೆಯ ಹಂತದಲ್ಲಿ ಪರಿಣತಿಯನ್ನು ಗಳಿಸಿದ ಮೇಲೆ ಸಮತೋಲನ ಸ್ಥಿತಿಯು ಕೈವಶವಾದಾಗ, ಕೈಗಳನ್ನು ಒಂದೊಂದಾಗಿ ನೆಲದಿಂದ ಮೇಲೆತ್ತಿ, ಮಣಿಕಟ್ಟುಗಳನ್ನು ಜೊತೆಗೂಡಿಸಿ, ಬಳಿಕ ಅಂಗೈಗಳನ್ನು ಬಟ್ಟಲಿನಂತೆ ಮಾಡಿ, ಗದ್ದವನ್ನು ಕೆಳಗಿರಿ ಸಬೇಕು. ಈ ಎರಡನೆಯ ಹಂತದಲ್ಲಿ ದೇಹವನ್ನು ಕೈಗಳ ಆಧಾರದ ಮೇಲೆ ಸಮತೋಲನ ಮಾಡಿ ನಿಲ್ಲಿಸಬೇಕು ಇದು ಕಷ್ಟವಾಗಿ ತೋರಿಬಂದರೂ, ಮನಸ್ಥೈರ್ಯದಿಂದ ಎಡಬಿಡದೆ ಇದನ್ನು ಅಭ್ಯಾಸಿಸಿದಲ್ಲಿ ಈ ಸ್ಥಿತಿಯನ್ನು ಸುಲಭವಾಗಿ ಸಾಧಿಸಬಹುದು. ಈ ಎರಡನೆಯ ಹಂತಕ್ಕೆ ಈ ಮುಂದಿನ ‘ಶಯನಾಸನ’ ಅಥವಾ ‘ವಿಶ್ರಾಂತಿ ಭಂಗಿ’ ಯೆಂದೂದು ಕರೆಯಬಹುದು.

 ಪರಿಣಾಮಗಳು

    ಈ ಭಂಗಿಯು ಭುಜ ಮತ್ತು ಬೆನ್ನೆಲುಗಳಲ್ಲಿಯ ಮಾಂಸ ಖಂಡಗಳನ್ನು ಬೆಳೆಸಲು ಸಹಕಾರಿಯಾಗಿದೆ. ಇದು ಬೆನ್ನೆಲುಬುಗೆ ಹುರುಪು ಕಿಬ್ಬೊಟ್ಟೆಯ ಮಾಂಸಖಂಡಗಳನ್ನು ಹಿಗ್ಗುವಂತೆ  ಮಾಡುತ್ತದೆ.