ಮನೆ ಶಿಕ್ಷಣ ಶಿಕ್ಷಕರು ಕಣ್ಣಿಗೆ ಕಾಣುವ ದೇವರು: ರಾಜಾರಾಂ ಸುಂದರಮೂರ್ತಿ 

ಶಿಕ್ಷಕರು ಕಣ್ಣಿಗೆ ಕಾಣುವ ದೇವರು: ರಾಜಾರಾಂ ಸುಂದರಮೂರ್ತಿ 

0

ಮೈಸೂರು(Mysuru): ಮಕ್ಕಳ ವ್ಯಕ್ತಿತ್ವವನ್ನು ನಿಷ್ಕಲ್ಮಶವಾಗಿ ರೂಪಿಸುವ ಶಿಕ್ಷಕರು ಕಣ್ಣಿಗೆ ಕಾಣುವ ದೇವರಿದ್ದಂತೆ ಎಂದು ಸುಜೀವ್ ಫೌಂಡೇಶನ್ ಅಧ್ಯಕ್ಷರಾದ ರಾಜಾರಾಂ ಸುಂದರಮೂರ್ತಿ  ಹೇಳಿದರು.

ಸುಜೀವ್ ಫೌಂಡೇಶನ್  ವತಿಯಿಂದ  ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನಬಳಗ ಶಾಲೆಯಲ್ಲಿ ಹಮ್ಮಿಕೊಂಡ ರಾಧಾಕೃಷ್ಣನ್‌ ಜಯಂತಿ ಮತ್ತು ಶಿಕ್ಷಕರ ದಿನಾಚರಣೆಯ ಅಂಗವಾಗಿ   ಶಿಕ್ಷಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ  ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ನಮ್ಮನ್ನು ಅಗಲಿದ ರಾಜ್ಯದ ಅರಣ್ಯ ಇಲಾಖೆ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ವಿ ಕತ್ತಿ ಅವರಿಗೆ ಮೌನಾಚರಣೆ ಮೂಲಕ ಸಂತಾಪ ಸಲ್ಲಿಸಿ ಆ ನಂತರ ಸಭಾ ಕಾರ್ಯಕ್ರಮ ನಡೆಸಲಾಯಿತು.

ವಿದುಷಿ ವಿಜಯ ಸುದರ್ಶನ್ (ಸಂಗೀತ ಶಿಕ್ಷಕಿ),ವಿದುಷಿ ಅನಸೂಯಾ ಸುದರ್ಶನ್ (ಸಂಗೀತ ಶಿಕ್ಷಕಿ ), ವಿದುಷಿ ನಾಗಲಕ್ಷ್ಮಿ ನಾಗರಾಜನ್ (ನೃತ್ಯ ಶಿಕ್ಷಕಿ ), ಮಿತ್ರಾ ನವೀನ್ (ನೃತ್ಯ ಶಿಕ್ಷಕಿ),ಅನಂತರಾಮು ಕೆ ಎಲ್ (ಕ್ರೀಡಾ ಶಿಕ್ಷಕರು),ಡಾ.ಶಶಿಕುಮಾರ್ (ಕ್ರೀಡಾ ಶಿಕ್ಷಕರು ),ರೋಷನ್ ಅರೆಹೊಳೆ(ಯೋಗ ಶಿಕ್ಷಕರು),ಡಾ. ಬಿ ಶ್ರೀನಾಥ(ಯೋಗ ಶಿಕ್ಷಕರು),ವಿದ್ವಾನ್ ಕೆ ಎಸ್ ವೆಂಕಟೇಶ್ ಮೂರ್ತಿ (ಆಗಮಿಕ ಶಿಕ್ಷಕರು),ವಿದ್ವಾನ್ ಕೃಷ್ಣಮೂರ್ತಿ (ಆಗಮಿಕ ಶಿಕ್ಷಕ ),ಎಂ. ಜಿ.ಸುಗುಣಾವತಿ(ಶಿಕ್ಷಣ ಕ್ಷೇತ್ರ),ಟಿ. ಎಸ್. ಪ್ರಭುಸ್ವಾಮಿ (ಶಿಕ್ಷಣ ಕ್ಷೇತ್ರ) ಇವರಿಗೆ ವರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ತಂತ್ರಜ್ಞಾನ ಶಿಕ್ಷಕನಿಗೆ ಪೂರಕವೇ ಹೊರತು ಪರ್ಯಾಯವಲ್ಲ. ಸಹನೆ, ಸಮಯ ಪಾಲನೆ, ಭಾಷೆ, ವಿಷಯದ ಮೇಲೆ ಹಿಡಿತ ಇರುವವರು ಪರಿಪೂರ್ಣ ಶಿಕ್ಷಕನಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ನಿರಂತರ ಅಧ್ಯಯನ ವೃತ್ತಿ ನಿರತ ಶಿಕ್ಷಕರಿಗೆ ಅತ್ಯಗತ್ಯ ಎಂದರು. ಕಾರ್ಯಕ್ರಮದಲ್ಲಿ ಇಳೈ ಆಳ್ವಾರ್ ಸ್ವಾಮೀಜಿ , ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್ , ಪ್ರತಿಭಾ ಗುರುರಾಜ್ ,ಹಿಮಾಲಯ ಫೌಂಡೇಶನ್ ಅಧ್ಯಕ್ಷರಾದ ಅನಂತ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ವಿನಯ್ ಕಣಗಾಲ್ ,ಎಸ್ ಎನ್ ರಾಜೇಶ್ ,ಶ್ರೀನಿವಾಸ್ ,ವಿದ್ಯಾ   ಇನ್ನಿತರರು ಹಾಜರಿದ್ದರು.

ಹಿಂದಿನ ಲೇಖನಬುದ್ದಿಮಾಂದ್ಯೆ ಮೇಲೆ ಅತ್ಯಾಚಾರಕ್ಕೆ ಯತ್ನ; ವೃದ್ಧನ ಬಂಧನ
ಮುಂದಿನ ಲೇಖನಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್’ಗೆ ಝಡ್ ಪ್ಲಸ್ ಭದ್ರತೆ