ನವದೆಹಲಿ(New delhi): ಕಾಶ್ಮೀರದ ಶ್ರೀನಗರದಲ್ಲಿರುವ ಬೀದಿ ವ್ಯಾಪಾರಿಯ ಚಿತ್ರಕ್ಕಾಗಿ ಭಾರತೀಯ(Indian) ಛಾಯಾಗ್ರಾಹಕ(Photographer) ದೇಬ್ದತ್ತಾ ಚಕ್ರವರ್ತಿ(debdatta chakraborty) ಅವರು 2022ರ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಪ್ರಶಸ್ತಿಯನ್ನು(Pink Lady Food Photographer award) ತಮ್ಮದಾಗಿಸಿಕೊಂಡಿದ್ದಾರೆ.
ಕೆ ವರ್ಷದ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಸ್ಪರ್ಧೆಯನ್ನು 2011 ರಲ್ಲಿ ಸ್ಥಾಪಿಸಲಾಗಿದ್ದು, ಪ್ರಪಂಚದಾದ್ಯಂತದ ಅತ್ಯುತ್ತಮ ಆಹಾರ ಛಾಯಾಗ್ರಹಣ ಮತ್ತು ವೀಡಿಯೊಗಳಿಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತೆ. ಈ ಬಾರಿಯ ಸ್ಪರ್ಧೆಯಲ್ಲಿ ಪ್ರಪಂಚದಾದ್ಯಂತ ಸಾವಿರಾರು ಜನ ಪಾಲ್ಗೊಂಡಿದ್ದು, ಅಂತಿಮವಾಗಿ ದೇಬ್ದತಾ ಚಕ್ರವರ್ತಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಬಾಬಿಯಾನಾ ಎಂಬ ಶೀರ್ಷಿಕೆಯ ಚಿತ್ರದಲ್ಲಿ, ಮಾರಾಟಗಾರನು ಹೊಗೆ ತುಂಬಿದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದು, ಮಾಂಸದ ಕಬಾಬ್‌ಗಳಂತೆಯೇ ಕಾಣುವಂತೆ ಅವನು ಹೊಗೆಯಿಂದ ಆವರಿಸಲ್ಪಟ್ಟಿದ್ದಾನೆ.
ಈ ಫೋಟೋವನ್ನು ಶ್ರೀನಗರದ ಖಯ್ಯಾಮ್ ಚೌಕ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಇದೊಂದು ಗಲ್ಲಿ ರಸ್ತೆಯಾಗಿದ್ದು, ಸಂಜೆ ವೇಳೆ ಮಾರಾಟಗಾರರು ಅನೇಕ ಇದ್ದಿಲು ಒಲೆಗಳನ್ನು ಬೆಳಗಿಸುವುದರಿಂದ ಇದು ಚಟುವಟಿಕೆಯ ಕೇಂದ್ರವಾಗಿ ಬದಲಾಗುತ್ತದೆ ಮತ್ತು ಗ್ರಿಲ್‌ಗಳಿಂದ ಕಬಾಬ್‌ಗಳ ಸುವಾಸನೆ ಮತ್ತು ಹೊಗೆ ಈ ಬೀದಿಯನ್ನು ಆಹಾರಪ್ರಿಯರ ಸ್ವರ್ಗವಾಗಿ ಪರಿವರ್ತಿಸುತ್ತದೆ