ಮನೆ ರಾಜ್ಯ ವಿಧಾನಸಭೆ ಚುನಾವಣೆ: ಅಳಿಸಲಾಗದ ಶಾಯಿ ಪೂರೈಕೆಗೆ ಚುನಾವಣಾ ಆಯೋಗ ಬೇಡಿಕೆ

ವಿಧಾನಸಭೆ ಚುನಾವಣೆ: ಅಳಿಸಲಾಗದ ಶಾಯಿ ಪೂರೈಕೆಗೆ ಚುನಾವಣಾ ಆಯೋಗ ಬೇಡಿಕೆ

0

ಮೈಸೂರು: ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಚುನಾವಣಾ ಆಯೋಗವು, ಮತದಾರರ ಕೈಬೆರಳಿಗೆ ಹಚ್ಚುವ ಅಳಿಸಲಾಗದ ಶಾಯಿಯನ್ನು ಪೂರೈಕೆ ಮಾಡುವಂತೆ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್‌)ಗೆ ಬೇಡಿಕೆ ಸಲ್ಲಿಸಿದೆ.

ಮೈಲ್ಯಾಕ್ ಅಧ್ಯಕ್ಷ ರಘು ಆರ್.ಕೌಟಿಲ್ಯ ಈ ಕುರಿತು ಮಾಹಿತಿ ನೀಡಿ, 1.30 ಲಕ್ಷ ಬಾಟಲಿಗಳು (ಸಣ್ಣ ಸೀಸೆ, ತಲಾ 10 ಎಂ.ಎಲ್‌.) ಹಾಗೂ ಮತಯಂತ್ರಗಳ ಪ್ಯಾಕಿಂಗ್‌ ಸಂದರ್ಭದಲ್ಲಿ ಅಂಟಿಸಲು ಬಳಸುವುದಕ್ಕಾಗಿ 3.90 ಲಕ್ಷ ಅರಗು ಸ್ಟಿಕ್‌’ಗಳನ್ನು ಪೂರೈಸುವಂತೆ ಬೇಡಿಕೆ ಸಲ್ಲಿಸಿದೆ. ಕಾರ್ಖಾನೆಯ ಸಿಬ್ಬಂದಿಯು ತಯಾರಿಕೆಯಲ್ಲಿ ತೊಡಗಿದ್ದಾರೆ. ಆಯೋಗವು ಯಾವುದೇ ಗಡುವು ನೀಡಿಲ್ಲ. ಸಿದ್ಧವಿಟ್ಟುಕೊಳ್ಳುವಂತೆ ಹೇಳಿದೆ. ಅದರಂತೆ ಕೆಲಸ ಆರಂಭಿಸಿದ್ದೇವೆ ಎಂದು ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಇಲ್ಲಿಂದ 1.32 ಲಕ್ಷ ಬಾಟಲಿ ಅಳಿಸಲಾಗದ ಶಾಯಿಯನ್ನು ಚುನಾವಣಾ ಆಯೋಗ ಪಡೆದುಕೊಂಡಿತ್ತು.

ಹಿಂದಿನ ಲೇಖನಮೈಸೂರು ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರ ದಾಳಿ: 20 ಗ್ರಾಂ ಗಾಂಜಾ, 15 ಸಾವಿರ ನಗದು ವಶ
ಮುಂದಿನ ಲೇಖನರಾಹುಲ್ ಗಾಂಧಿ ಹೆಸರೇಳಿದರೇ ಬರುವ ಮತವೂ ಹೋಗುತ್ತೆ: ಸಿ.ಟಿ.ರವಿ ವ್ಯಂಗ್ಯ