ಬೆಂಗಳೂರು(Bengaluru): ಅನುಭವಿ ಸ್ಪಿನ್ನರ್ ನೇಥನ್ ಲಯನ್ ಅವರಿಗೆ ತಕ್ಕ ಸಾಥ್ ನೀಡಲು ಸಾಕಷ್ಟು ಆಯ್ಕೆಗಳು ಇವೆ ಎಂದು ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪಿನ್ ಬೌಲಿಂಗ್’ಗೆ ನೆರವು ನೀಡುವ ಭಾರತದ ಪಿಚ್’ಗಳಲ್ಲಿ ಪರಿಣಾಮಕಾರಿಯಾಗಬಲ್ಲ ಬೌಲರ್’ಗಳು ನಮ್ಮ ತಂಡದಲ್ಲಿದ್ದಾರೆ ಎಂದು ತಿಳಿಸಿದರು.
ಗಾವಸ್ಕರ್– ಬಾರ್ಡರ್ ಟ್ರೋಫಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿರುವ ಆಸ್ಟ್ರೇಲಿಯಾದ ಆಟಗಾರರು ಕಳೆದ ಕೆಲ ದಿನಗಳಿಂದ ಆಲೂರಿನ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ನೇಥನ್ ಲಯನ್ ಅಲ್ಲದೆ, ಸ್ಪಿನ್ನರ್’ಗಳಾದ ಆ್ಯಷ್ಟನ್ ಆಗರ್ ಮತ್ತು ಮಿಚೆಲ್ ಸ್ವಿಪ್ಸನ್ ಅವರಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಎದುರಾಳಿ ತಂಡದ 20 ವಿಕೆಟ್’ಗಳನ್ನು ಪಡೆಯುವ ಸಾಮರ್ಥ್ಯ ಹೊಂದಿರುವ ಬೌಲರ್’ಗಳನ್ನು ಅಂತಿಮ ಇಲೆವೆನ್’ನಲ್ಲಿ ಕಣಕ್ಕಿಳಿಸುತ್ತೇವೆ. ಎಷ್ಟು ಸಿನ್ನರ್’ಗಳಿಗೆ ಅವಕಾಶ ನೀಡಬೇಕು ಎಂಬುದನ್ನು ಪಿಚ್’ನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸುತ್ತೇವೆ ಎಂದರು.