ಮನೆ ರಾಷ್ಟ್ರೀಯ ಪಿಎಂ ಕಿಸಾನ್ 17ನೇ ಕಂತು ಇಂದು ಬಿಡುಗಡೆ

ಪಿಎಂ ಕಿಸಾನ್ 17ನೇ ಕಂತು ಇಂದು ಬಿಡುಗಡೆ

0

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ನೀಡಲಾಗುವ 17ನೇ ಕಂತಿನ ಹಣ ಇಂದು ಬಿಡುಗಡೆ ಆಗುತ್ತಿದೆ.

Join Our Whatsapp Group

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ವಾರಾಣಸಿಯಲ್ಲಿ ಅಧಿಕೃತವಾಗಿ ಹಣ ಬಿಡುಗಡೆ ಮಾಡಲಿದ್ದಾರೆ. ಸಂಜೆಯ ಒಳಗೆ 9.3 ಕೋಟಿ ರೈತರ ಖಾತೆಗಳಿಗೆ ಒಟ್ಟು 20,000 ಕೋಟಿ ರೂ ಹಣ ಜಮೆ ಆಗಲಿದೆ. ಪ್ರತಿಯೊಂದು ಖಾತೆಗೂ 2,000 ರೂ ಹಣ ವರ್ಗಾವಣೆ ಆಗಲಿದೆ.

ಪಿಎಂ ಕಿಸಾನ್ ಯೋಜನೆಯಲ್ಲಿ ಅರ್ಹ ಫಲಾನುಭವಿ ರೈತರಿಗೆ ವರ್ಷಕ್ಕೆ ಒಟ್ಟು 6,000 ರೂ ಕೊಡಲಾಗುತ್ತದೆ. ತಲಾ 2,000 ರೂಗಳಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಈ ಆರು ಸಾವಿರ ರೂ ಅನ್ನು ಜಮೆ ಮಾಡಲಾಗುತ್ತದೆ. ಈವರೆಗೆ ಕೇಂದ್ರ ಸರ್ಕಾರ 16 ಕಂತುಗಳ ಹಣ ಬಿಡುಗಡೆ ಮಾಡಿದೆ. ಇವತ್ತು 17ನೇ ಕಂತಿನ ಹಣ ವರ್ಗಾವಣೆ ಆಗುತ್ತಿದೆ.

ಇಕೆವೈಸಿ ಮಾಡಿರಬೇಕು

ಕಳೆದ ಒಂದು ವರ್ಷದಿಂದಲೂ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಅಪ್​ಡೇಟ್ ಮಾಡುವಂತೆ ಸರ್ಕಾರ ತಿಳಿಸುತ್ತಲೇ ಇದೆ. ಕಳೆದ ಮೂರು ಬಾರಿಯಿಂದಲೂ ಇಕೆವೈಸಿ ಮಾಡದವರಿಗೆ ಯೋಜನೆಯ ಹಣ ಬರುತ್ತಿಲ್ಲ. ನೀವು ಯೋಜನೆಯ ಫಲಾನುಭವಿಗಳಾಗಿದ್ದು, ನಿಮಗೆ ಹಣ ಬರುತ್ತಿಲ್ಲವಾದಲ್ಲಿ ಇಕೆವೈಸಿ ಅಪ್​ಡೇಟ್ ಮಾಡಿಲ್ಲದೇ ಇರಬಹುದು. ಒಂದು ವೇಳೆ ಇತ್ತೀಚೆಗೆ ನೀವು ಇಕೆವೈಸಿ ಅಪ್​ಡೇಟ್ ಮಾಡಿದ್ದಲ್ಲಿ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯಾ ಎಂದು ಪರಿಶೀಲಿಸಿ. ಹೇಗೆ ಆ ಪಟ್ಟಿ ನೋಡುವುದು, ಈ ವಿವರ ಕೆಳಗಿದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ಪರಿಶೀಲಿಸುವ ಕ್ರಮ

ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ​ಸೈಟ್ ​ಗೆ ಹೋಗಿ: pmkisan.gov.in/

ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಸೆಕ್ಷನ್ ಕಾಣಬಹುದು.

ಇಲ್ಲಿ ‘ಬೆನಿಫಿಶಿಯರಿ ಲಿಸ್ಟ್’ ಅನ್ನು ಕ್ಲಿಕ್ ಮಾಡಿ

ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಊರನ್ನು ಆಯ್ದುಕೊಂಡು ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ.

ಇಲ್ಲಿ ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಕಾಣಬಹುದು. ಇದರಲ್ಲಿ ನಿಮ್ಮ ಹೆಸರು ಇದೆಯಾ ಪರಿಶೀಲಿಸಬಹುದು.